ಕೊರೋನಾ ಗೆದ್ದ ನಂತರವಷ್ಟೇ ಉಳಿದ ಪರೀಕ್ಷೆ: ಸಚಿವ ಸುರೇಶ್ ಕುಮಾರ್
ಬೆಂಗಳೂರು,: ಲಾಕ್ ಡೌನ್ ಮುಗಿದ ನಂತರ ದಿಢೀರ್ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಘೋಷಣೆ ಮಾಡುವುದಿಲ್ಲ ಸರ್ಕಾರ ವಿದ್ಯಾರ್ಥಿ ಮತ್ತು ಶಿಕ್ಷಕರ ಹಿತ ಎರಡನ್ನೂ ಕಾಪಾಡಲು ಬದ್ದವಾಗಿದೆ ಎಂದು ಶಿಕ್ಷಣ ಸಚಿವ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಮತ್ತು ಪೋಷಕರು ಗಾಬರಿ ಆತಂಕ ಪಡಬೇಕಿಲ್ಲ ಏಪ್ರಿಲ್ 14ರ ನಂತರ ಪರಿಸ್ಥಿತಿ ನೋಡಿಕೊಂಡು ವಿದ್ಯಾರ್ಥಿಗಳಿಗೆ ಯಾವ ಕಾರಣಕ್ಕೂ ತೊಂದರೆಯಾಗದಂತೆ ಪರೀಕ್ಷಾ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ .
ಅದಕ್ಕೆ ಮೊದಲು ಕರೋನ ಪರೀಕ್ಷೆಯಲ್ಲಿ ರಾಜ್ಯ, ದೇಶ ಮತ್ತು ವಿಶ್ವದ ಜನತೆ ಗೆಲ್ಲಬೇಕು ಆ ಮೇಲೆ ಉಳಿದೆಲ್ಲ ಪರೀಕ್ಷೆ ಎಂದು ಪರಿಸ್ಥತಿಯ ಸನ್ನಿವೇಶವನ್ನು ಸಚಿವರು ಬಿಚ್ಚಿಟ್ಟರು .
ಕರೋನ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಮೇಲೆ ಹೊಸ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಅದಕ್ಕೂ ಮೊದಲು ಒಂದು ವಾರಗಳ ಕಾಲ, ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವಂತ ಕೆಲಸವನ್ನು, ಹಾಗೂ ಪುರನ್ ಮನನ ತರಗತಿ ಮಾಡಲಾಗುತ್ತದೆ ಎಂದೂ ಹೇಳಿದರು. ಲಾಕ್ ಡೌನ್ ಮುಗಿದ ಬಳಿಕ ಎಸ್ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಹೇಳಿದರು.
ಸರ್ಕಾರದ ಮುಂದಿನ ಆದೇಶ ನೀಡುವವರೆಗೆ ಖಾಸಗಿ ಶಾಲೆಗಳು ಪ್ರವೇಶ ಮತ್ತು ಶುಲ್ಕ ವಸೂಲು ಮಾಡಬಾರದು ಜನ ಬಹಳ ಕಷ್ಟದಲ್ಲಿ ಇದ್ದಾರೆ ಒಂದು ವೇಳೆ ಯಾವುದೇ ಶಾಲೆ ಮಾಡಿದರೆ ಅಂತಹ ಶಾಲೆಗಳ ಆಡಳಿತ ಮಂಡಳಿಯ ವಿರುದ್ದ ಮುಲಾಜು ನೋಡದೆ ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಶಾಲಾ- ಕಾಲೇಜುಗಳು ಆಸ್ಪತ್ರೆಗಳ ರೀತಿಯಲ್ಲಿ ಬಡವರ ಸುಲಿಗೆ ಮಾಡಬಾರದು ಪ್ಯಾಕೇಜ್ ವಸೂಲಾತಿಗೆ ಇಳಿಯಬಾರದು ಎಂದು ಅವರು ಕಿವಿಮಾತು ಹೇಳಿದರು.
ಪರೀಕ್ಷೆ ಮತ್ತು ಮಾಲ್ಯ ಮಾಪನಕ್ಕೆ ಯಾವುದೆ ತೊಂದರೆ ಯಾಗದಂತೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲಿದೆ ಇದರ ಬಗ್ಗೆ ಶಿಕ್ಷಕರು ಯಾವುದೇ ಅನಗತ್ಯ ಭಯ ಗೊಂದಲಕ್ಕೆ ಒಳಪಡುವುದು ಬೇಡ ಸರ್ಕಾರ ವಿದ್ಯಾರ್ಥಿ ಮತ್ತು ಶಿಕ್ಷಕರ ಹಿತ ಎರಡನ್ನೂ ಕಾಪಾಡಲು ಬದ್ದವಾಗಿದೆ ಎಂದೂ ಹೇಳಿದರು.
ಇದದೆಲ್ಲರ ಜೊತೆಗೆ ಮೌಲ್ಯಮಾಪನ ಕೇಂದ್ರಗಳನ್ನು ಹೆಚ್ಚು ಮಾಡಿ ಯಾರಿಗೂ ಕಾಯಿಲೆ ಬರದಂತೆ ಎಚ್ಚರಿಕೆ ವಹಿಸಲಾಗುವದು ಮತ್ತು ಇದೆ 14 ನಂತರ ಹತ್ತನೆ ತರಗತಿ ಪರೀಕ್ಷೆ ಯಾವಾಗ ಮಾಡಬೇಕು, ಹೇಗೆ ಮಾಡಬೇಕು ಎಂಬುದರ ಬಗ್ಗೆ ಶಿಕ್ಷಕರ ವಲಯದ ಪ್ರತಿನಿಧಿಗಳು ಅರೋಗ್ಯ ವಲಯದ ಪರಿಣಿತರು, ಶಿಕ್ಷಣ ತಜ್ಞರು ಸೇರಿದಂತೆ ಎಲ್ಲರ ಜೊತೆ ಸಮಾಲೋಚನೆ ಮಾಡಿಯೇ ತೀರ್ಮಾನ ಪ್ರಕಟಿಸುವುದಾಗಿಯೂ ಸಚಿವರು ಹೇಳಿದರು.