ಹಿಂದಿನ ಕಾಲದ ಪರಂಪರೆಯೇ ಜ್ಞಾನದ ಸಂಪತ್ತು: ಡಾ. ಮುರಳೀಧರ್

ಉಡುಪಿ: ಹಿಂದಿನ ಕಾಲದ ಪರಂಪರೆ ಮುಂದುವರಿಯ ಬೇಕಾದರೆ, ಹಿರಿಯರು   ನಡೆಸಿಕೊಂಡು ಬರುತ್ತಿದ್ದ ಪ್ರತಿಯೊಂದು ಆಚರಣೆ ಚಾಚು ತಪ್ಪದೆ ಪಾಲಿಸಿದರೆ ಅದೇ ಇಂದಿನ‌ ಕಾಲಕ್ಕೆ  ಜ್ಞಾನದ ಸಂಪತ್ತು ಎಂದು
ಎಸ್.ಡಿ.ಎಂ ಆಯುರ್ವೇದ ಫಾರ್ಮಸಿಯ ಪ್ರಧಾನ ವ್ಯವಸ್ಥಾಪಕ  ಡಾ. ಮುರಳೀಧರ್ ಬಲ್ಲಾಳ್ ಅಭಿಪ್ರಾಯಪಟ್ಟರು. ಅವರು ಇಂದು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್ ಉಡುಪಿ ಹಾಗೂ ಎಸ್.ಡಿ.ಎಂ ಆಯುರ್ವೇದ ಕಾಲೇಜು ಆಶ್ರಯದಲ್ಲಿ ನಡೆದ    ‘ಆಟಿ ಅಮವಾಸ್ಯೆಯ  ಕಷಾಯ’  ಪರ್ತಕರ್ತರಿಗೆ ವಿತರಿಸಿ  ಮಾತನಾಡಿದರು.

ತುಳುನಾಡಿನಲ್ಲಿ ಆಟಿ ಅಮವಾಸ್ಯೆಗೆ ತನ್ನದೇ ಮಹತ್ವ ಇದೆ. ಆಟಿ ಅಮವಾಸ್ಯೆಯಂದು ತುಳುನಾಡಿನ ಜನ ಹಾಲೆ ಮರದ ತೊಗಟೆಯಿಂದ ಮಾಡಿದ ಕಷಾಯವನ್ನು ಕುಡಿಯುತ್ತಾರೆ.ಈ ದಿನ ಹಾಲೆ ಮರದಲ್ಲಿ  ಅತ್ಯಧಿಕ ಔಷದೀಯ ಸತ್ವ ಹಾಗೂ ಅನೇಕ ರೋಗಗಳಿಗೆ ರಾಮಬಾಣವಾಗಿದೆ,ನರಮಂಡಲ ಸುಸ್ಥಿತಿಗೆ ದೇಹದ ಸರ್ವಾಂಗ ನಿಯಂತ್ರಣ, ಆಹಾರ ಪಚನ ಕ್ರಿಯೆಗೆ ಈ ಕಷಾಯ ಮಹತ್ವ ಪಡೆದಿದೆ ಎಂದರು.

ಕಾರ್ಯಕ್ರಮದಲ್ಲಿ ಡಾ. ಸ್ವಪ್ನ ಡಿ.ಭಂಡಾರಿ, ಡಾ. ಚೈತ್ರ ಹೆಬ್ಬಾರ್, ಸಂಘದ  ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು, ಪ್ರ.ಕಾರ್ಯದರ್ಶಿ ಸಂತೋಷ್ ಸರಳೇಬೆಟ್ಟು, ರಾಜ್ಯ ಸಮಿತಿ ಸದಸ್ಯ ಕಿರಣ್‌ಮಂಜನ್  ಬೈಲ್, ಪ್ರೆಸ್ ಕ್ಲಬ್ ಸಂಚಾಲಕ ನಾಗರಾಜ್ ರಾವ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!