ದೇಹಿಯೆಂದವರನ್ನ ಪೊರೆಯುವ ಅಮೃತಮಯಿ ಅಮೃತೇಶ್ವರಿ
ಕೋಟ- ಹಲವು ಮಕ್ಕಳ ತಾಯಿ ಯೆಂದೇ ಪ್ರಸಿದ್ದವಾಗಿರುವ ನಂಬಿದ ಭಕ್ತರನ್ನ ಸಲಹುತ್ತಿರುವ ಕೋಟ ಅಮೃತೇಶ್ವರಿ ದೇವಿಯ ಹಾಲು ಹಬ್ಬ, ಗೆಂಡ ಸೇವೆ ಜನವರಿ 10 ಮತ್ತು 11 ರಂದು ಅದ್ದೂರಿಯಾಗಿ ನಡೆಯುತ್ತಿದ್ದೆ.
ಭಕ್ತರ ಪೊರೆಯುವ ಅಮ್ಮ – ಅಮೃತೇಶ್ವರಿ
ಕೋಟ ಅಮೃತೇಶ್ವರಿ ಎಂದಾಕ್ಷ ಣ ಭಕ್ತರ ಮನಸ್ಸಿನಲ್ಲಿ ಕ್ಷ ಣಾರ್ಧದಲ್ಲಿ ಮೈನವಿರೇಳಿಸುವಂತಹ ಶಕ್ತಿ ಈ ತಾಯಿಗಿದೆ, ಹಲವು ಮಕ್ಕಳ ತಾಯಿ ಎಂದೇ ಇತಿಹಾಸ ಪ್ರಸಿದ್ಧ ವೀರಭದ್ರ ಸ್ವಾಮಿಯು ತಾಯಿ ಅಮೃತೇಶ್ವರಿ ಸಾನಿಧ್ಯ ರಕ್ಷಕನಾಗಿ ಕೋಟ 14 ಗ್ರಾಮಗಳ ಆರಾಧ್ಯ ದೇವರಾಗಿ ಪೂಜಿಸಲ್ಪಡುತ್ತಿದೆ. ಅಮೃತೇಶ್ವರಿ ದೇವಳದಲ್ಲಿ ವರ್ಷಂಪ್ರತಿ ನಡೆಯುವ ಹಾಲುಹಬ್ಬ ಮತ್ತು ಗೆಂಡ ಸೇವೆ ಆಕರ್ಷಣೀಯವಾಗಿರುತ್ತದೆ.
ಉಡುಪಿ ಜಿಲ್ಲೆಯ ಕೋಟ ಪೇಟೆಯ ನಡುವೆ ತಾಯಿ ಅಮೃತೇಶ್ವರಿ ಭಕ್ತರನ್ನು ಹರಸುತ್ತಿದ್ದಾಳೆ. .ನಂಬಿ ಬಂದವರಿಗೆ ತಾಯಿಯ ಅನುಗ್ರಹ ಸದಾ ಇದ್ದೇ ಇದೆ ಎನ್ನುವುದಕ್ಕೆ ತಾಯಿ ಅಮೃತೇಶ್ವರಿಯ ಹಲವು ನಿದರ್ಶನಗಳಿವೆ. ದೇವಾಲಯದ ಗರ್ಭಗುಡಿಯ ಹೊರಸುತ್ತಿನಲ್ಲಿ ನೂರಾರು ಲಿಂಗಗಳು ಕಾಣಿಸುತ್ತದೆ. ರಾವಣನ ಬಂಧು ಶಿವಭಕ್ತ ಖರಾಸುರನ ಪತ್ನಿ ಕುಂಭಮುಖಿಯ ಭಕ್ತಿಗೆ ಒಲಿದ ಶ್ರೀದೇವಿ ಕರುಣಿಸಿದ ವರದಾನವೇ ಈ ಲಿಂಗಗಳ ಸೃಷ್ಟಿಗೆ ಕಾರಣವೆನ್ನುತ್ತದೆ ಕ್ಷೇತ್ರ ಮಹಾತ್ಮೆ. ದೇವಿಯ ಮುಂಭಾಗದಲ್ಲಿ ಶ್ರೀ ರಕ್ತೇಶ್ವರಿಯ ಶಿಲಾಮೂರ್ತಿಯಿದೆ. ಪರಿವಾರ ದೇವತೆಗಳಾದ ವೀರಭದ್ರ, ನಾಗ ಶಿಲಾಮೂರ್ತಿಗಳಾಗಿ, ಬೊಬ್ಬರ್ಯ, ಉಮ್ಮಲ್ತಿ, ಚಿಕ್ಕು, ನಂದಿ ಹಾಗೂ ಪಂಜುರ್ಲಿ ದೈವಗಳ ಗುಡಿ ಅತಿ ಸನಿಹದಲ್ಲಿ ಇದೆ.
ಶರನ್ನವರಾತ್ರಿ ಮಹೋತ್ಸವ: ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಸಕಲ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ನಡೆಯುತ್ತಿದೆ. ನವರಾತ್ರಿ ಆರಂಭದಿಂದ ಹಿಡಿದು ವಿಜಯ ದಶಮಿಯವರೆಗೆ ಪ್ರತಿದಿನ ಬೆಳಗ್ಗೆ ಚಂಡಿಕಾ ಸಪ್ತಶತೀ ಪಾರಾಯಣ, ದುರ್ಗಾಯಾಗ ಹಾಗೂ ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ, ರಾತ್ರಿ ವಿಶೇಷ ಹೂವಿನ ಪೂಜೆ ಜರುಗಲಿದೆ.
Wawwwwww blessed Amma