ಶ್ರೀಕೃಷ್ಣ ಮಠದ ಆನೆ ರಾತ್ರೋ ರಾತ್ರಿ ನಿಗೂಢವಾಗಿ ಸ್ಥಳಾಂತರ
ಉಡುಪಿ: ಶ್ರೀಕೃಷ್ಣ ಮಠದ ಆನೆಯನ್ನು ಹೊನ್ನಾಳಿ ಮಠಕ್ಕೆ ರಾತ್ರೋ ರಾತ್ರಿ ಸ್ಥಳಾಂತರ ಮಾಡಿದ್ದು ಭಕ್ತ ಸಮುದಾಯದಲ್ಲಿ ಹಲವಾರು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ಸಮಾರು ಹದಿನೈದು ವರ್ಷಗಳಿಂದ ಉಡುಪಿ ಕೃಷ್ಣ ಮಠದಲ್ಲಿ ಸೇವೆ ಸಲ್ಲಿಸುತ್ತಿದ್ದ ಆನೆ ಸುಭದ್ರೆಯನ್ನು ಇಂದು ಮುಂಜಾನೆ ಕಲ್ಸಂಕದ ಪಾಲು ಬಿದ್ದ ಕಟ್ಟದ ಬಳಿಯಿಂದ ಲಾರಿಯಲ್ಲಿ ಹೊನ್ನಾಳಿಯ ಮಠಕ್ಕೆ ಕರೆದುಕೊಂಡು ಹೋಗಲಾಗಿದೆಂದು ಮಠದ ಮೂಲಗಳು ತಿಳಿಸಿವೆ.
ಇಂದು ಮುಂಜಾನೆ 4 ಗಂಟೆಯ ವೇಳೆಗೆ ಬಡಗುಪೇಟೆಯ ಕನಕ ಮಾಲ್‌ನ ಕಟ್ಟಡದಲ್ಲಿ ಆನೆಯನ್ನು ಲಾರಿಗೆ ಹತ್ತಿಸುವ ಪ್ರಯತ್ನ ನಡೆಯಿತು. ನಾಲ್ವರು ಮಾವುತರು ಸತತ ಪ್ರಯತ್ನ ಪಟ್ಟರೂ ಸುಭದ್ರೆ ಲಾರಿ ಹತ್ತಲು ಒಪ್ಪಲೇ ಇಲ್ಲ. ಮಾವುತರು ಪಟ್ಟ ಪ್ರಯತ್ನದಿಂದ ಲಾರಿಯ ಚಕ್ರಗಳು ಹೂತುಹೋಗಿದೇ ಹೊರತು ಆನೆಯನ್ನು ಲಾರಿಗೆ ಸಾಗಿಲಾಗಿಲ್ಲ. ಕೊನೆಗೆ ಎರಡು ತಾಸು ಶ್ರಮ ಪಟ್ಟು ಆನೆಯನ್ನು ಇನ್ನೊಂದು ಲಾರಿ ತರಿಸಿ ಅದಕ್ಕೆ ವಿಪರೀತಾ ಬಲ ಪ್ರಯೋಗಿಸಿ ಆನೆಯನ್ನು ರವಾನಿಸಲಾಗಿದೆಂದು ತಿಳಿದು ಬಂದಿದೆ. ಆನೆ ಸಾಗಾಟದ ವೇಳೆ ಪಶು ವೈದ್ಯರಾಗಲೀ, ಅರಣ್ಯ ಇಲಾಖೆಯವರಾಗಲೀ ಈ ಸಂದರ್ಭ ಇರಲಿಲ್ಲ ಎಂಬುದು ಇವರು ಎಷ್ಟು ಕಾನೂನು ಪಾಲಿಸಿ ಆನೆಯನ್ನು ಬೇರೊಂದು ಕಡೆ ಸಾಗಿಸಿದರೆಂದು ತಿಳಿಯುತ್ತದೆ.
ಈ ಹಿಂದೆ ಆನೆ ಸೆಕ್ರೆಬೈಲಿನಲ್ಲಿ ಚಿಕಿತ್ಸೆ ಸಂದರ್ಭ, ಅಲ್ಲಿಗೆ ಹೋಗಿದ್ದ ಹೊನ್ನಾಳಿ ಮಠದ ಸಿಬ್ಬಂದಿಗಳು ಯಾವುದೋ ಒಪ್ಪಂದ ಮಾಡಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಆನೆಯನ್ನು ಕಳುಹಿಸಿದ ಕಾರಣ ಇಂದು ಅದನ್ನು ಹೊನ್ನಾಳಿ ಮಠಕ್ಕೆ ಕರೆದುಕೊಂಡು ಹೋಗಿರುವುದಾಗಿ ಮಠದ ಸಾರ್ವಜನಿಕ ಸಂಪರ್ಕಧಿಕಾರಿ ಶ್ರೀಶ ಭಟ್ ಉಡುಪಿ ಟೈಮ್ಸ್ ಗೆ ತಿಳಿಸಿದರು.
ಮಾವುತ ಮಹಮ್ಮದ್ ನ ಪ್ರಕಾರ ಆನೆ ಆರೋಗ್ಯವಾಗಿದೆ ,ಮದ ಬಂದ ಗಂಡಾನೆಯ ಮದ ಇಳಿಸುವ ಸಂದರ್ಭ ಕ್ರಾಸಿಂಗ್ ಮಾಡಿಸಬೇಕು ಎಂದು ಹೇಳಿದ್ದಾರೆ. ಆನೆಯನ್ನು ಶಾಶ್ವತವಾಗಿ ಹೊನ್ನಾಳಿಯಲ್ಲೇ ಇರಿಸಿಕೊಳ್ಳಲಾಗುತ್ತದೆ ಎಂಬ ಮಾಹಿತಿಯಿದೆ. ಅನಾರೋಗ್ಯದಿಂದ ಇರುವ ಆನೆಯನ್ನು ಮಠದಲ್ಲಿ ಉಳಿಸಿಕೊಂಡರೆ ಕಾನೂನು ಸಂಕಟ ಎದುರಿಸಬೇಕಾಗಿದಿತು ಎಂದು ಕೃಷ್ಣಮಠ ಹೊನ್ನಾಳಿಗೆ ದಾಟಿಸಿದೆ ಎಂದೂ ಹೇಳಲಾಗಿದೆ.