ಕುಡುಕರೇ ದೇಶದ ಆರ್ಥಿಕ ಸಂಪತ್ತು ಎಂದು ಸಾಬೀತಾಯಿತು!
- ದೇಶವೇ ಲಾಕ್ಡೌನ್ ಆಗಿದ್ದು ಮಾಡಲು ಕೆಲಸವಿಲ್ಲ, ತಿನ್ನಲು ಅಕ್ಕಿ,ರೊಟ್ಟಿ ಇಲ್ಲದೆ ಇರುವಾಗ ಸರಕಾರ ಹಾಗೂ ದಾನಿಗಳಿಂದ ಕಿಟ್ ತೆಗೆದುಕೊಂಡ ಈ ಮಹನೀಯರು ಸುರಾಪಾನ ಕೊಳ್ಳಲು ಮುಗಿಬೀಳುತಿದ್ದ ದ್ರಶ್ಯ ನೋಡಿದರೆ ಯಾರಿಗಾದ್ರೂ ಬೇಸರವಾಗುತ್ತದೆ. ಕೊರೋನಾ ಸಂದರ್ಭದಲ್ಲಿ ಮದ್ಯದಂಗಡಿಗಳಲ್ಲಿ ಮುಂಚೆಗಿಂತ ಅಧಿಕ ವ್ಯಾಪಾರ ಕಾರಣ ಕದ್ದು ಮುಚ್ಚಿ ಹೋಗುತ್ತಿದ್ದವರು ಈಗ ಮಾಸ್ಕ್ ಧರಿಸಿದ್ದರಿಂದ ಅನುಕೂಲ, ಅಂತೆಯೇ ಮದ್ಯದಂಗಡಿಯಲ್ಲೂ ಮಹಿಳಾ, ಹಿರಿಯ ನಾಗರೀಕ, ಸಾಲು ಮಾಡಿ ಅನುಕೂಲಕರ ವ್ಯವಸ್ಥೆ. ಇದು ಏನಿದ್ದರೂ ನಾವು ಗಳಿಸಿದ ಆರೋಗ್ಯವನ್ನು ಉಳಿಸುವಲ್ಲಿ ಲಾಕ್ಡೌನ್ ಹೆಸರಲ್ಲಿ ಮದ್ಯ ತಿರಸ್ಕರಿಸುವ ಸಂಕಲ್ಪ ಮಾಡುವುದರೊಂದಿಗೆ ಪ್ರಾಥಸ್ಮರಣೀಯ ರಾಗಿರಿರುವ ಪರಮ ಪೂಜ್ಯ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದರು ತಮ್ಮ ಪರ್ಯಾಯ ಸಂದರ್ಭದಲ್ಲಿ ದುಶ್ಚಟ ಬಿಡುವ ಬಗ್ಗೆ ಸಂಕಲ್ಪ ಹುಂಡಿಯ ಕನಸು , ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಧಿಕಾರಿಗಳಾದ ಶ್ರೀ ಡಿ. ವೀರೇಂದ್ರ ಹೆಗ್ಡೆಯವರ ಆಶಯ ಸಾಕಾರಗೊಳಿಸುವಂತಾಗಿದ್ದರೆ ಒಳ್ಳೆಯದಿತ್ತು.
(ವಿಷ್ಣು ಪ್ರಸಾದ್ ಪಾಡಿಗಾರ್)
ಕುಡಿಯುವುದರಿಂದ ಕುಡುಕರ ಮನೆಯ ಆರ್ಥಿಕ ಸ್ಥಿತಿ ಹದಗೆಡುತ್ತದೆ ಎಂದು
ತಿಳಿದುಕೊಂಡಿದ್ದೆ. ಈಗ ಸರ್ಕಾರದ ಆರ್ಥಿಕ ಸ್ಥಿತಿ ಕುಡುಕರ ಮೇಲೆ ಅವಲಂಬಿತವಾಗಿದೆ
/ ಅವಲಂಬಿಸಿದೆ ಎಂದು ಬೇಸರವಾಯಿತು