ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು

ಕಾರ್ಕಳ : ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಉರುಳಿದ ಘಟನೆ ಸಾಣೂರು ಬಳಿಯ ಚಿಲಿಂಬಿ ಎಂಬಲ್ಲಿ ನಡೆದಿದೆ. ಕಾರ್ಕಳದಿಂದ ಮೂಡಬಿದ್ರೆ ಕಡೆಗೆ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ.

ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು ಚಿಲಿಂಬಿ ಎಂಬಲ್ಲಿ ಕಂದಕದ ಕೆಳಭಾಗದಲ್ಲಿ ಅನನಾಸು ಬೆಳೆ ಬೆಳೆಯಲಾಗಿದ್ದು ಕಾರು ನೇರವಾಗಿ ಅನನಾಸು ತೋಟಕ್ಕೆ ಬಿದ್ದಿದೆ. ಈ ಘಟನೆಯಿಂದ ಚಾಲಕ ಸೇರಿದಂತೆ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಕಾರ್ಕಳ ಮೂಲದವರಿಗೆ ಸೇರಿದ್ದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.

Leave a Reply

Your email address will not be published. Required fields are marked *

error: Content is protected !!