ಜಾಗೃತ ನಾಗರಿಕರಿಂದ ಮಾತ್ರ ಇಂದ್ರಾಂಣಿಯ ಪುನಶ್ಚೇತನ ಸಾಧ್: ಡಾ.ರವೀಂದ್ರನಾಥ್ ಶ್ಯಾನುಭಾಗ್ 

ಉಡುಪಿ :ಯಾವುದೇ ನಗರದ ಮಧ್ಯದಿಂದ ಹಾದುಹೋಗುವ ನದಿಯೊಂದು ಆ ಊರಿನ ಶುಚಿತ್ವ, ಘನತೆ ಹಾಗೂ ಸಂಸ್ಕೃತಿಯ ದ್ಯೋತಕವಾಗಿದೆ. ಭವ್ಯ ಇತಿಹಾಸ ಉಳ್ಳ ಉಡುಪಿಯಂತಹ ಪುಣ್ಯ ಕ್ಷೇತ್ರಕ್ಕೆ, ಸಾಂಸ್ಕೃತಿಕ ನಗರಿಗೆ ಕೆಲವೇ ದಶಕಗಳ ಹಿಂದೆ ಪವಿತ್ರಳಾಗಿದ್ದ ಇಂದ್ರಾಣಿಯ ಈಗಿನ ರೂಪ ಕಲ್ಸಂಕ ತೋಡು ಶೋಭೆ ತರುವುದಿಲ್ಲ ಎಂದು ಮಾನವ ಹಕ್ಕು ರಕ್ಷಣಾ ಪ್ರತಿಷ್ಠಾನ ಅಧ್ಯಕ್ಷ ಡಾ.ರವೀಂದ್ರನಾಥ್ ಶ್ಯಾನುಭಾಗ್ ಭಾನುವಾರ ಇಂದ್ರಾಳಿ ಆಂಜನೆಯ ದೇವಳದ ಕೆರೆಯ ಬಳಿ ಪರಿಸರ ಆಸಕ್ತರು ಹಮ್ಮಿಕೊಂಡ ಇಂದ್ರಾಣಿ ನದಿ ಉಳಿಸಿ ಅಭಿಯಾನದ ವಾಹನ ಜಾಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇದೀಗ ಇಂದ್ರಾಣಿಯ ಪುನಶ್ವೇತನಕ್ಕಾಗಿ ಯುವಕರ ದಂಡೊಂದು ತೊಡೆತಟ್ಟಿ ಹೊರಟಿರುವುದು ಉಡುಪಿಯ ಆಸಕ್ತ ನಾಗರೀಕರಿಗೆಲ್ಲ ಹೆಮ್ಮೆಯ ವಿಷಯವಾಗಿದೆ.
ಒಂದು ಮಾತಂತೂ ಸತ್ಯ, ಇಂದ್ರಾಣಿ ಪರಿಶುದ್ಧಳಾದಲ್ಲಿ ಉಡುಪಿ ನಗರವಾಸಿಗಳ ಹಲವಾರು ಸಮಸ್ಯೆಗಳಂತೂ ಪರಿಹಾರವಾಗಲಿವೆ. ವರ್ಷದುದ್ದಕ್ಕೂ ಕುಡಿಯುವ ನೀರು ಯತೇಷ್ಟವಾಗಿ ದೊರೆಯಲಿದೆ. ನದಿಯುದ್ದಕ್ಕೂ ವಾಸ ಮಾಡುವ ನಾಗರಿಕರೆಲ್ಲ ದುರ್ವಾಸನೆ ಹಾಗೂ ರೋಗ ಮುಕ್ತರಾಗಲಿದ್ದಾರೆ.
ಶತಶತಮಾನಗಳಿಂದ ಇಂದ್ರಾಳಿ ಬೆಟ್ಟದ ತಟದಲ್ಲಿರುವ ಬುಡ್ನಾರಿನಿಂದ ಹಿಡಿದು ಕಲ್ಮಾಡಿವರೆಗೆ ನದಿಯ ಇಕ್ಕೆಲಗಳಲ್ಲಿ ಕೇವಲ ಕಾಡು ಹಾಗೂ ಭತ್ತದ ಗದ್ದೆಗಳು ಮಾತ್ರ ಇದ್ದವು. ನದಿ ಕಲ್ಮಶವಾಗುವ ಪ್ರಶ್ನೆಯೇ ಇರಲಿಲ್ಲ. ಇಂದ್ರಾಳಿ ಬೆಟ್ಟದ ಮೇಲಿದ್ದ ಮಣ್ಣುಪಳ್ಳದಲ್ಲಿ ಮಳೆಗಾಲದಲ್ಲಿ ಶೇಖರವಾಗುತಿದ್ದ ಜಲರಾಶಿ ಖಾಲಿಯಾಗುವ ತನಕ ಸುಮಾರು 8 ತಿಂಗಳ ಕಾಲ ಹರಿಯುತಿದ್ದ ಈ ನದಿ ನೂರಾರು ರೈತ ಕುಟುಂಬಗಳ ಜೀವನಾಡಿಯಾಗಿತ್ತು.
ದಾರಿಯುದ್ದಕ್ಕೂ ಸಿಗುವ ನಾಲ್ಕು ದೇವಸ್ಥಾನ ಕೆರೆಗಳಿಗೆ ಹಾಗೂ ನೂರಾರು ಬಾವಿಗಳಿಗೆ ನೀರುಣಿಸುತ್ತಿದ್ದ ಇಂದ್ರಾಣಿ ಪರಿಸರದ ಅಂತರ್ಜಲ ಹೆಚ್ಚಿಸಲೂ ಕಾರಣಳಾಗಿದ್ದಳು. ಉಡುಪಿಯ ನಗರೀಕರಣವಾಗುತಿದ್ದಂತೆಯೇ ಒಂದೊಂದಾಗಿ ಗದ್ದೆಗಳು ಮಾಯವಾಗಿ ವಸತಿ ಸಮುಚ್ಚಯಗಳು, ಹೋಟೆಲ್‌ಗಳೂ ತಲೆಎತ್ತಿದವು. ಬರಬರುತ್ತಾ ಇಂದ್ರಾಣಿ ಬಡಕಲಾದಳು.
ಅಸಮರ್ಪಕ ಚರಂಡಿ ಯೋಜನೆಯ ಅನುಷ್ಠಾನದಿಂದಾಗಿ ಕೊಳಕು ನೀರಿನ ಗಟಾರವೇ ಹುಟ್ಟಿಕೊಂಡಿತು. ಹಲವಾರು ಕಡೆಗಳಲ್ಲಿ ನದಿಯ ಇಕ್ಕೆಲಗಳಲ್ಲಿ ಒತ್ತುವರಿ ನಡೆದದ್ದೂ ಇದೆ. ಇದೆಲ್ಲಾ ಸಾಕಾಗಿಲ್ಲವೆಂಬತ್ತೇ ಇದೀಗ ಇತರ ಕಡೆಗಳ ಮಲೀನವನ್ನೆಲ್ಲ ತಂದು ಇದೇ ನದಿಗೆ ಸೇರಿಸುತ್ತಿರುವ ಕುರಿತೂ ಮಾಹಿತಿ ಬಂದಿದೆ. ಇವೆಲ್ಲ ದುರಂತಗಳಿಂದಾಗಿ ಇಂದು ಉಡುಪಿ ನಗರವಾಸಿಗಳು ಡೆಂಗ್ಯೂ, ಚಿಕನ್‌ಗುನ್ಯಾದಂತಹ ರೋಗಗಳಿಂದ ಬಳಲುತಿದ್ದಾರೆ. ಇವಕ್ಕೆಲ್ಲ ಇಂದ್ರಾಣಿಯ ಪುನಶ್ಚೇತನ ಬಿಟ್ಟು ಅನ್ಯಮಾರ್ಗವಿಲ್ಲ.
ಮೊತ್ತ ಮೊದಲನೇದಾಗಿ ನಡೆಯಬೇಕಾದದ್ದು ಮಣಿಪಾಲದಿಂದ ಕುಂಜಿಬೆಟ್ಟಿನ ತನಕ ಒಳಚರಂಡಿ ಯೋಜನೆ. ಎರಡನೆಯದಾಗಿ ಉಡುಪಿಯ ಅಸಮರ್ಪಕ ಹಾಗೂ ಕಡಿಮೆ ಸಾಮರ್ಥ್ಯದ ಒಳಚರಂಡಿಯ ಜಾಲವನ್ನು ಮೇಲ್ದರ್ಜೆಗೆ ಏರಿಸುವುದು. ಇವು ಸರಕಾರದಿಂದ ನಡೆಯಬೇಕು. ಪೂರಕವಾಗಿ ನದಿಯ ಇಕ್ಕೆಲಗಳಲ್ಲಿ ವಾಸಮಾಡುತ್ತಿರುವ ನಾಗರಿಕರೂ ಸಹಕರಿಸಬೇಕಾಗಿದೆ. ಜಾಗೃತ ನಾಗರಿಕ ಸಮಾಜದಿಂದ ಮಾತ್ರ ಇಂದ್ರಾಣಿಯ ಪುನಶ್ಚೇತನ ಸಾಧ್ಯ.
 ಕಾಲಕಾಲಕ್ಕೆ ಒಳಚರಂಡಿ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸದೆ ನಿರ್ಲ್ಯಕ್ಷದ ಪರಿಣಾಮ ಇಂದ್ರಾಣಿ ನದಿ ಈ ದುಸ್ಥಿತಿಗೆ ತಲುಪಿದೆ. ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಬೇಕು. ಮೊದಲು ಮೂಲಭೂತ ಸೌಕರ್ಯಗಳನ್ನು ಮಾಡಬೇಕು. ನಂತರ ನಗರ ಕಟ್ಟಬೇಕು, ಆದರೆ ಉಡುಪಿ ನಗರದಲ್ಲಿ ಟೌನ್‌ಪ್ಲಾನಿಂಗ್ ದೂರದೃಷ್ಟಿ ಇಲ್ಲದೆ ಪರಿಸರ ಹಾಳಾಗುವಂತೆ ಮಾಡಿದೆ ಎಂದು ಕಳವಳ ವ್ಯಕ್ತಪಡಿಸಿದರು. ನದಿ ಉಳಿವಿಗಾಗಿ ಯುವಕರು ಮುಂದಾಗಿರುವುದು ಒಳ್ಳೆಯ ವಿಚಾರ ಎಂದು ಶ್ಲಾಘಿಸಿದರು.

ಇಂದ್ರಾಣಿ ಶ್ರೀ ಪಂಚದುರ್ಗ ಪರಮೇಶ್ವರಿ ದೇವಳದ ಆಡಳಿತ ಮೊಕ್ಥೇಸರ ಜಯಕರ ಶೆಟ್ಟಿ ಉಮಾತನಾಡಿ, ಇಂದ್ರಾಣಿ ನದಿಗೆ ಒಂದು ಸಾವಿರ ಇತಿಹಾಸ ಇದೆ. ಈ ನದಿ ನೀರಿನಿಂದಲೇ ಕೃಷಿ ಆಗುತ್ತಿತ್ತು. ಈಗ ಕೃಷಿ ವ್ಯಾಮೋಹವೂ ಕಡಿಮೆ ಆಗಿದೆ. ಪ್ರಕೃತಿ ರಕ್ಷಣೆ ಮಾಡುವ ಕಾರ್ಯ ಆರಂಭವಾಗಿದೆ. ಕಾಮಗಾರಿಗಳಾಗುವ ಮೊದಲೇ ನಾಗರಿಕರು ಎಚ್ಚೆತ್ತುಕೊಳ್ಳಬೇಕು. ನಗರದಲ್ಲಿ ವ್ಯವಸ್ಥಿತ ಒಳಚರಂಡಿ ನಿರ್ಮಾಣ ನಮ್ಮ ಆಗ್ರಹವಾಗಲಿ, ಶುಚಿತ್ವ ಕಾಪಾಡುವ ಮೂಲಕ ಪರಿಸರ ಸಂರಕ್ಷಣೆ ಮಾಡೋಣ ಎಂದು  ಕರೆ ನೀಡಿದರು.

ಅಭಿಯಾನ ಸಂಚಾಲಕ ಶ್ರೀಕಾಂತ್ ಶೆಟ್ಟಿ, ಪರಿಸರ ಆಸಕ್ತರಾದ ಪ್ರೇಮಾನಂದ ಕಲ್ಮಾಡಿ, ಪ್ರಕಾಶ್ ಮಲ್ಪೆ, ಮಹಮ್ಮದ್ ಮೌಲ, ಎಸ್.ಎ ಕೃಷ್ಣಯ್ಯ, ನಗರಸಭೆ ವಿಜಯ ಕೊಡವೂರು ಮೊದಲಾದವರು ಭಾಗವಹಿಸಿದ್ದರು.  ನೂರಾರು ಸಂಖ್ಯೆಯಲ್ಲಿ ಪಾಲ್ಗೋಂಡಿದ್ದ. ಸಾರ್ವಜನಿಕರು  ಇಂದ್ರಾಣಿ ನದಿ ಸಾಗುವ ಪ್ರದೇಶಗಳಲ್ಲಿ ಬೃಹತ್ ವಾಹನ ಜಾಥ ಕೊಡವೂರು ವಿಪ್ರ ಸಭಾ ಭವನವರೆಗೆ ಸಾಗಿತು.

ಬೈಕ್, ಕಾರು ಮೂಲಕ ಮೆರವಣಿಗೆ ಕಲ್ಸಂಕ ಗುಂಡಿಬೈಲು ಅಂಕದಕಟ್ಟೆ ಮೂಲಕ ಹೆದ್ದಾರಿ ಪ್ರವೇಶ ಮೂಡುಬೆಟ್ಟು ಕೊಡವೂರು ಕಾನಂಗಿ ಕಲ್ಮಾಡಿ ಮಲ್ಪೆ ಕೊಡವೂರು ಸಭೆಯಲ್ಲಿ ಸಮಾಲೋಚನೆ
ಒಳಚರಂಡಿ ವ್ಯವಸ್ಥೆ ಸಮರ್ಪಕವಾದ ಮೇಲೆ ನಗರ ನಿರ್ಮಾಣವಾಗಬೇಕು.

ಉಡುಪಿಯಲ್ಲಿ ನಗರ ನಿರ್ಮಾಣ ಮಾಡಿ ಪರಿಸರ ಹಳಾದ ಮೇಲೆ ಒಳಚರಂಡಿ ಬಗ್ಗೆ ಯೋಚಿಸಲಾಗುತ್ತಿದೆ. 20 ವರ್ಷಗಳ ಹಿಂದೆಯೆ ಇಂದ್ರಾಣಿ ನದಿ ಉಳಿವಿಗಾಗಿ, ತ್ಯಾಜ್ಯ ಹರಿಯ ಬಿಡದಂತೆ ಸಾರ್ವಜನಿಕರಲ್ಲಿ, ಸ್ಥಳಿಯಾಡಳಿತಕ್ಕೆ ಮನವಿ ಮಾಡಲಾಗಿತ್ತು. ವ್ಯವಸ್ಥಿತ ಒಳ ಚರಂಡಿ ನಿರ್ಮಾಣಕ್ಕೂ ಆಗ್ರಹಿಸಲಾಗಿತ್ತು., ಆದರೆ ಪ್ರಯೋಜನವಾಗಿಲ್ಲ.
ಇಂದು ಸಮಾನ ಮನಸ್ಕ ಯುವ ಸಮೂಹ ನದಿ ಉಳಿವಿಗಾಗಿ ಒಂದಾಗಿರುವುದು ಸಂತೋಷ ತಂದಿದೆ. ಈ ಹೋರಾಟ ಮುಂದುವರೆಯಲಿ.
– ಡಾ.ರವೀಂದ್ರನಾಥ್ ಶ್ಯಾನುಭಾಗ್, ಮಾನವ ಹಕ್ಕು ರಕ್ಷಣಾ ಪ್ರತಿಷ್ಠಾನ.
ಇಂದ್ರಾಣಿ ತೀರ್ಥ ಉಗಮ ವಾಗುವಲ್ಲಿಂದ ಹರಿದು ಕೊಡವೂರು ಶಂಕರನಾರಾಯಣ ಸನ್ನಿಧಿ ವರೆಗೆ ಬರುವ ಈ ನದಿಯ ಪಾವಿತ್ರತೆಯನ್ನು ಕಾಪಾಡಿಕೊಂಡು ಬರುವ ಸಂಕಲ್ಪ ನಾವೆಲ್ಲರು ಮಾಡುವ.  ..ಪ್ರಕಾಶ್ ಮಲ್ಪೆ.
ಪೃಕೃತಿ‌ಮಾತೆಯನ್ನು ಪೂಜಿದುವ ಆರಾಧಿಸುವ ಸಂಸ್ರ್ಕತಿ ನಮ್ಮದು…ಅದರಲ್ಲೂ ನಮ್ಮ ನಾಡಿನ ಹಲವು ನದಿಗಳನ್ನು ಸ್ತ್ರೀ ರೂಪವಾಗಿ ಕಂಡು ನೀರೆ ಹಾಗು ನೀರನ್ನು ಗೌರವಿಸುವ,  ಅವರಿಬ್ಬರನ್ನು ಪವಿತ್ರರಾಗಿಯೇ ಉಳಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದು.
ಹಾಗಾಗಿ ಆಕೆಯನ್ನು ಕಾಪಾಡುವ ನಮ್ಮ ಅತ್ಯುನ್ನತ ಆಶಯಕ್ಕೆ ನಾವೆಲ್ಲಾ ಕೈ ಜೋಡಿಸಬೇಕು.~ ಪೂರ್ಣಿಮಾ ಜನಾರ್ದನ್.
ನಗರ ಸಭೆಯವರು ತಮಗೆ ಬೇಕಾದಂತೆ ಸೇತುವೆ ಅಗತ್ಯತೆ ಇರುವಾಗ ಇಂದ್ರಾಣಿಯನ್ನು  ನದಿ ಎಂದು ಪರಿಗಣಿಸಿದರೆ, ತ್ಯಾಜ್ಯ  ವಿಲೇವಾರಿ ಮಾಡುವಾಗ ಅದಕ್ಕೆ ತೋಡಿನ ರೂಪ ನೀಡುತ್ತಾರೆ. ಈ ಇಬ್ಬಂಗಿ ತನಕ್ಕೆ ಹಸಿರು ಪೀಟದಿಂದ ತಕ್ಕ ತೀರ್ಪನ್ನು ತರುವಲ್ಲಿ ಕಾನೂನಾತ್ಮಕ ವಾಗಿ ಹೋರಾಟ ನಡೆಸುತ್ತೇವೆ. ~~ಶ್ರೀಕಾಂತ ಶೆಟ್ಟಿ.
ಇಂದ್ರಾಳಿಯಲ್ಲಿ ಹುಟ್ಟಿ ಅಲ್ಲಿಯ ಜನರ ಜೀವಸೆಲೆಯಾಗಿ ಉಡುಪಿ ಯ ರಾಜಮಾರ್ಗ ದಲ್ಲಿ ಹರಿದು ಕೊಡವೂರಿನ ಜನತೆಯ ಜೀವನದಿಯಾಗಿರುವ ಪರಮ‌ಪವಿತ್ರ ನದಿ ಇಂದ್ರಾಣಿ ಇಂದು ಕಲ್ಷಶ’  ತಾಜ್ಯಗಳಿಂದ ತುಂಬಿ ಅಪವಿತ್ರಳಾಗಿದ್ದಾಳೆ.ಅದಕ್ಜೆ ಕಾರಣ ಅವಳ ಮಡಿಲಲ್ಲಿ ನಮಗೆ ಬೇಡದ ವಸ್ತುಗಳನ್ನು ಹರಿಯ ಬಿಡುತ್ತಿದೇವೆ.. ..ಸುಮನ್ ಎನ್. ಆಚಾರ್ಯ

Leave a Reply

Your email address will not be published. Required fields are marked *

error: Content is protected !!