ಕೊನೆಗೂ ದೋಸ್ತಿ ಸರಕಾರ ಪತನ: ಯಡಿಯೂರಪ್ಪ ಸಿಎಂ ಹಾದಿ ಸುಗಮ

ಬೆಂಗಳೂರು: ಒಂದು ವರ್ಷದ ಹಿಂದೆ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರ ಪತನಗೊಂಡಿದೆ. ಈ ಮೂಲಕ 18 ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಹೈಡ್ರಾಮಾಕ್ಕೆ ಪೂರ್ಣವಿರಾಮ ಬಿದ್ದಿದೆ.

ಇಂದಿನ ವಿಶ್ವಾಸ ಮತಯಾಚನೆಯ ವೇಳೆ ಒಟ್ಟು 20 ಶಾಸಕರು ಗೈರು ಹಾಜರಿ ಹಾಕಿದ್ದರು. ಕಾಂಗ್ರೆಸ್ಸಿನ 14, ಜೆಡಿಎಸ್‍ನ 3 ಶಾಸಕರು ಹಾಗೂ ಇಬ್ಬರು ಪಕ್ಷೇತರ ಶಾಸಕರ ಜೊತೆ ಬಿಎಸ್‍ಪಿಯ ಎನ್ ಮಹೇಶ್ ಗೈರಾಗಿದ್ದರು. ಇಂದು ದೋಸ್ತಿ ಪಕ್ಷದ ಒಟ್ಟು 99 ಶಾಸಕರು ಹಾಜರಾಗಿದ್ದರೆ ಬಿಜೆಪಿಯ 105 ಶಾಸಕರು ಹಾಜರಾಗಿದ್ದರು. ಹೀಗಾಗಿ ಬಹುಮತಕ್ಕೆ 103 ಶಾಸಕರ ಬೆಂಬಲ ಬೇಕಿತ್ತು.

ವಿಶ್ವಾಸಮತಯಾಚನೆ ವೇಳೆ ಸರ್ಕಾರದ ಪರವಾಗಿ 99 ಮತಗಳು ಬಿದ್ದರೆ ವಿರುದ್ಧವಾಗಿ 105 ಮತಗಳು ಬಿದ್ದವು. ಈ ಮೂಲಕ ಸಿಎಂ ಸಲ್ಲಿಸಿದ್ದ  ವಿಶ್ವಾಸ ಮತಯಾಚನೆ ಬಿದ್ದು ಹೋಗಿದೆ.

Leave a Reply

Your email address will not be published. Required fields are marked *

error: Content is protected !!