ದಿ ಡಾ ವಿನ್ಸಿ ಇವೆಂಟ್ ಪ್ಲಾನರ್ಸ್ ಉದ್ಘಾಟನೆ

ಉಡುಪಿ : ಪ್ರಖ್ಯಾತ ಡೆಕೋರೇಷನ್ ಸಂಸ್ಥೆ ಏ ವನ್ (A1) ಉದ್ಯಾವರ ಇದರ ನೂತನ ಅಂಗಸಂಸ್ಥೆಯಾದ ‘ದಿ ಡಾ ವಿನ್ಸಿ ಇವೆಂಟ್ ಪ್ಲಾನರ್ಸ್’ ಶನಿವಾರ ಜುಲೈ 13ರಂದು ಸಂಜೆ 5.45 ಕ್ಕೆ ಕಿನ್ನಿಮೂಲ್ಕಿ ಸ್ವಾಗತ ಗೋಪುರ ಬಳಿ ಸಿಲ್ವರ್ ಮೈನ್ ಕಟ್ಟಡದಲ್ಲಿ  ಲೋಕಾರ್ಪಣೆಗೊಳ್ಳಲಿದೆ.
ಕಳೆದ ಮೂವತ್ತು ವರ್ಷಗಳಿಂದ ಉಡುಪಿ ಮಂಗಳೂರು ನಲ್ಲಿ ಚಿಕ್ಕ ಮತ್ತು ದೊಡ್ಡದಾದ ಕಾರ್ಯಕ್ರಮಗಳಲ್ಲಿ ಗ್ರಾಹಕರ ನಿರೀಕ್ಷೆಯಂತೆ ಉತ್ತಮ ದರದಲ್ಲಿ ಡೆಕೋರೇಷನ್ ಮಾಡುವ ಮೂಲಕ ಗ್ರಾಹಕರ ಮೆಚ್ಚುಗೆ ಗಳಿಸಿದಂತಹ ಉದ್ಯಾವರ ಕುತ್ಪಾಡಿಯ ವಿನ್ಸಿ ಫೆರ್ನಾಡಿಸ್ ರವರ ‘ಏ-ವನ್’ ಡೆಕೋರೇಷನ್ ಈಗ ತನ್ನ ಹೊಸ ಸಂಸ್ಥೆಯನ್ನು ಗ್ರಾಹಕರಿಗೆ ನೆರವಾಗಲು ಲೋಕಾರ್ಪಣೆ ಮಾಡುತ್ತಿದ್ದಾರೆ.
 ಕಿನ್ನಿಮೂಲ್ಕಿ ಸ್ವಾಗತ ಗೋಪುರ ಬಳಿ ಇರುವ ಸಿಲ್ವರ್ ಮೈನ್ ಕಟ್ಟಡದ ಎರಡನೇ ಮಹಡಿಯಲ್ಲಿ ದಿ ಡಾ ವಿನ್ಸಿ ಇವೆಂಟ್ ಪ್ಲಾನರ್ಸ್ ಅನ್ನು ಸ್ಥಾಪಿಸಿದ್ದು, ಶನಿವಾರ ಸಂಜೆ ಲೋಕಾರ್ಪಣೆಗೊಳ್ಳಲಿದೆ. ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಕುಲಪತಿ ಮತ್ತು ಉದ್ಯಾವರ ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯದ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾ. ಸ್ಟ್ಯಾನಿ ಬಿ ಲೋಬೊ ರವರು ಆಶೀರ್ವಚನ ಮಾಡಲಿದ್ದಾರೆ. ಮಾಹೆಯ ಉಪಕುಲಪತಿ ಡಾ ಪೂರ್ಣಿಮಾ ಬಾಳಿಗಾ ಅವರು ನೂತನ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ. ಸ್ಥಳೀಯ ನಗರಸಭೆ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಉಪಸ್ಥಿತ ಉಪಸ್ಥಿತರಿರಲಿದ್ದಾರೆ ಎಂದು ಸಂಸ್ಥೆಯ ಮುಖ್ಯಸ್ಥರಾದ ವಿನ್ಸಿ ಫೆರ್ನಾಡಿಸ್, ವಿಯೊನ್ ಫೆರ್ನಾಂಡಿಸ್, ಮತ್ತು ವಿನೊಲಿಯ ಫೆರ್ನಾಡಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿ ಡಾ ವಿನ್ಸಿ ಇವೆಂಟ್ ಪ್ಲಾನರ್ಸ್ ಸಂಸ್ಥೆಯೂ, ಗ್ರಾಹಕರ ಯಾವುದೇ ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿಯನ್ನು ನೋಡಿಕೊಂಡು ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಕಡಿಮೆ ದರದಲ್ಲಿ ಉತ್ತಮ ರೀತಿಯಲ್ಲಿ ಸಜ್ಜುಗೊಳಿಸಲಿದೆ. ಈಗಾಗಲೇ ತನ್ನ ವಿಶಿಷ್ಟ ಮತ್ತು ಅದ್ಭುತವಾದ ಡೆಕೋರೇಷನ್ ಗಳ ಮೂಲಕ ಮನೆ ಮಾತಾಗಿರುವ ಏ-ಒನ್  ಡೆಕೋರೇಟರ್ ನ ನೂತನ ಅಂಗಸಂಸ್ಥೆ ಗ್ರಾಹಕರಿಗೆ ತೃಪ್ತಿದಾಯಕವಾದ ಸೇವೆಯನ್ನು ನೀಡಲು ಸಜ್ಜಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
‘ದಿ ಡಾ ವಿನ್ಸಿ ಇವೆಂಟ್ ಪ್ಲಾನರ್ಸ್’ ನ ವೆಬ್ ಸೈಟ್ ಗಾಗಿ ಇಲ್ಲಿ ಕ್ಲಿಕ್ ಮಾಡಿ.

Leave a Reply

Your email address will not be published. Required fields are marked *

error: Content is protected !!