ದಿ ಡಾ ವಿನ್ಸಿ ಇವೆಂಟ್ ಪ್ಲಾನರ್ಸ್ ಲೋಕಾರ್ಪಣೆ

ಉಡುಪಿ : ತನ್ನ ಸರಳತೆ ಮತ್ತು ಗ್ರಾಹಕರ ನಿರೀಕ್ಷೆಯಂತೆ ಕಡಿಮೆ ದರದಲ್ಲಿ ಗ್ರಾಹಕರು ಮೆಚ್ಚುವಂತಹ ಡೆಕೋರೇಷನ್ ಮಾಡುವ ಮೂಲಕ ಉಡುಪಿ ಮಂಗಳೂರಿನಲ್ಲಿ ಮನೆ ಮಾತಾಗಿರುವ ವಿನ್ಸಿ ಫೆರ್ನಾಡಿಸ್ ನೇತೃತ್ವದ “ಏ1” ಡೆಕೋರೇಷನ್ ಇದರ ನೂತನ ಪ್ರದಾನ ಅಂಗ ಸಂಸ್ಥೆ ದಿ ಡ ವಿನ್ಸಿ ಇವೆಂಟ್ ಪ್ಲಾನರ್ಸ್ ಲೋಕಾರ್ಪಣೆಗೊಂಡಿತು.

ಉಡುಪಿ ಕಿನ್ನಿಮೂಲ್ಕಿಯ ಸ್ವಾಗತ ಗೋಪುರ ಬಳಿ ನಿರ್ಮಾಣಗೊಂಡಿರುವ ಸಿಲ್ವರ್ ಮೈನ್ ಕಟ್ಟಡದ ದ್ವಿತೀಯ ಮಳಿಗೆಯಲ್ಲಿ, ದಿ ಡಾ ವಿನ್ಸಿ ಇವೆಂಟ್ ಪ್ಲಾನರ್ಸ್ ನೂತನ ಕಚೇರಿಯನ್ನು ಗ್ರಾಹಕರಿಗಾಗಿ ಸ್ಥಾಪಿಸಿದ್ದು, ಮಣಿಪಾಲ ಮಾಹೆ ಉಪ ಕುಲಪತಿ ಡಾ. ಪೂರ್ಣಿಮಾ ಬಾಳಿಗಾ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.

ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಕುಲಪತಿ ಮತ್ತು ಉದ್ಯಾವರ ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯದ ಪ್ರಧಾನ ಧರ್ಮಗುರು ವಂದನೀಯ ಫಾ. ಸ್ಟ್ಯಾನಿ ಬಿ ಲೋಬೊ ಆಶೀರ್ವಚನ ಮಾಡಿದರು.ದಿ ಡಾ ವಿನ್ಸಿ ಇವೆಂಟ್ ಪ್ಲಾನರ್ಸ್ ನ ನೂತನ ಲೋಗೋವನ್ನು ಉಡುಪಿ ಚಾನೆಲ್ ನ ನಿರೂಪಕ ಸಂದೀಪ್ ಭಕ್ತ ಮತ್ತು ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತು ಇದರ ಅಧ್ಯಕ್ಷರಾದ ವಿಷ್ಣುಪ್ರಸಾದ್ ಪಾಡಿಗಾರ್ ಉದ್ಘಾಟಿಸಿದರು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ನಡೆದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಡಾ ಪೂರ್ಣಿಮಾ ಬಾಳಿಗ, 2008ರಿಂದ ನನ್ನ ನಿರೂಪಕಿ ವಿನ್ಸಿ ಫೆರ್ನಾಂಡಿಸ್ ಅವರ ಪರಿಚಯವಾಗಿದ್ದು, ಅಂದಿನಿಂದ ಇಂದಿನ ವರೆಗೆ ನಾವು ಯಾವ ರೀತಿ ಆಶಿಸುತ್ತೇವೆಯೊ, ಅದಕ್ಕಿಂತಲೂ ಉತ್ತಮ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳಿಗೆ ಡೆಕೋರೇಷನ್ ಮಾಡಿಕೊಡುವ ಮೂಲಕ ನಮ್ಮೆಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರಲ್ಲಿರುವ ಸರಳತೆ, ಪ್ರಾಮಾಣಿಕತೆ, ಬದ್ಧತೆ ಅವರನ್ನು ಇಷ್ಟೆತ್ತರಕ್ಕೆ ಕೊಂಡೊಯ್ದಿದೆ. ತಂದೆಯ ಪ್ರಾಮಾಣಿಕತೆಯನ್ನೇ ಮುಂದುವರಿಸಿಕೊಂಡು ಅವರ ಇಬ್ಬರು ಮಕ್ಕಳು ಅದೇ ಉದ್ಯಮವನ್ನು ತಂದೆಯ ಹೆಸರಿನಲ್ಲಿ ಆರಂಭಿಸುವುದರೊಂದಿಗೆ ಇತರರಿಗೆ ಆದರ್ಶರಾಗಿದ್ದಾರೆ ಎಂದರು.

ಆಶೀರ್ವಚನ ಮಾಡಿದ ವಂದನೀಯ ಫಾ. ಸ್ಟ್ಯಾನಿ ಬಿ ಲೋಬೊ ಮಾತನಾಡಿ, ವಿಯ ಮತ್ತು ವಿನಯ ಅತಿ ದೊಡ್ಡ ಸಾಹಸಕ್ಕೆ ಇಳಿದಿದ್ದು, ಅವರ ಸಾಹಸವನ್ನು ಮೆಚ್ಚಬೇಕಾಗಿದೆ. ಇಂದಿನ ಯುವಜನರು ಹೊಸ ಉದ್ಯಮದತ್ತ, ಅದರಲ್ಲೂ ಯಾರ ಕೈಕೆಳಗೆ ದುಡಿಯದೆ ಸ್ವತಃ ತಮ್ಮದೇ ಉದ್ಯಮವನ್ನು ಸ್ಥಾಪಿಸುವ ಮೂಲಕ ಯುವಜನರಿಗೆ ಆದರ್ಶರಾಗಿದ್ದಾರೆ ಮತ್ತು ಇಂತಹ ಯುವಕರಿಗೆ ನಾವು ಪ್ರೋತ್ಸಾಹ ನೀಡಬೇಕಾಗಿದೆ ಎಂದರು.

ಅತಿಥಿಗಳಾದ ಸಂದೀಪ್ ಭಕ್ತ, ವಿಷ್ಣು ಪ್ರಸಾದ್ ಮತ್ತು ಖ್ಯಾತ ನಿರ್ವಾಹಕ ಪ್ರೇಮ್ ಕುಮಾರ್ ಶುಭ ಹಾರೈಸಿದರು.ಸಭಾ ಕಾರ್ಯಕ್ರಮದಲ್ಲಿ ವಿನ್ಸಿ ಫೆರ್ನಾಡಿಸ್ ರವರು ತಮ್ಮ ಉದ್ಯಮಕ್ಕೆ ಸಹಕರಿಸಿದವರಿಗೆ ವಿವಿಧ ಹಣ್ಣುಗಳ ಗಿಡವನ್ನು ನೀಡುವ ಮೂಲಕ ವಿಶಿಷ್ಟ ರೀತಿಯಲ್ಲಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ದಿ ಡಾ ವಿನ್ಸಿ ಇವೆಂಟ್ ಪ್ಲಾನರ್ಸ್ ನ ಪಾಲುದಾರ ವಿಯೊನ್ ಫೆರ್ನಾಡಿಸ್ ಸ್ವಾಗತಿಸಿ ಸರ್ವರ ಸಹಕಾರ ಯಾಚಿಸಿದರೆ, ವಿನೊಲಿಯ ಫೆರ್ನಾಡಿಸ್ ಸಹಕರಿಸಿದವರಿಗೆ ಧನ್ಯವಾದ ಸಮರ್ಪಿಸಿದರು. ಮೈಕಲ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

ದಿ ಡಾ ವಿನ್ಸಿ ಇವೆಂಟ್ ಪ್ಲಾನರ್ಸ್ ಕಚೇರಿಯು ಗ್ರಾಹಕರಿಗೆ ಸದಾ ಲಭ್ಯವಿದ್ದು, ಯಾವುದೇ ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿಯನ್ನು ವಹಿಸಲು ಸಿದ್ಧಗೊಂಡಿದೆ. ಡೆಕೋರೇಷನ್ ಸಹಿತ ಎಲ್ಲ ರೀತಿಯ ಕಾರ್ಯಕ್ರಮದ ಬಗ್ಗೆ ಮಾಹಿತಿ ಮತ್ತು ಸಿದ್ಧತೆಯನ್ನು ಗ್ರಾಹಕರಿಗೆ ಕ್ಲಪ್ತ ಸಮಯದಲ್ಲಿ ಕಡಿಮೆ ದರದಲ್ಲಿ ನೀಡಲು ಈ ಸಂಸ್ಥೆ ಸಿದ್ಧಗೊಂಡಿದ್ದು, ಗ್ರಾಹಕರು ಇದರ ಪ್ರಯೋಜನವನ್ನು ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ದಿ ಡಾ ವಿನ್ಸಿ ಇವೆಂಟ್ ಪ್ಲಾನರ್ಸ್ ವೆಬ್ಸೈಟನ್ನು ವೀಕ್ಷಿಸಬಹುದು.
www.thedavincieventplanners.com

ಸಂಪರ್ಕಿಸಬಹುದಾದ ಮೊಬೈಲ್ ಸಂಖ್ಯೆಗಳು :
+91 86181 79514
+91 95353 70484
+91 98454 37712

1 thought on “ದಿ ಡಾ ವಿನ್ಸಿ ಇವೆಂಟ್ ಪ್ಲಾನರ್ಸ್ ಲೋಕಾರ್ಪಣೆ

  1. Congratulations n all the best for your business, God bless all of you. I miss the function sorry.

Leave a Reply

Your email address will not be published. Required fields are marked *

error: Content is protected !!