ಜಾತಿ-ಮತದ ದ್ವೇಷದಿಂದಾಗಿ ದೇಶದ ಸಂವಿಧಾನವೇ ಅಪಾಯದಲ್ಲಿದೆ : ಚಿಂತಕ ಫಣಿರಾಜ್
ಉಡುಪಿ:ದೇಶದಲ್ಲಿ ಕಳೆದ ನಾಲ್ಕು ವರ್ಷದಲ್ಲಿ ನೂರಕ್ಕೂ ಮಿಕ್ಕಿ ಗುಂಪು ಹತ್ಯೆಯಾಗಿದ್ದು ರೈಲ್ವೇ ಹಳಿಯಲ್ಲಿ ದನ ಸತ್ತು ಹೋದರೆ ರೈಲು ಚಾಲಕನನ್ನೇ ಹತ್ಯೆ ಮಾಡುತ್ತಾರೆ ,ಇನ್ನೊಂದೆಡೆ ದಲಿತ ದೇವಸ್ಥಾನ ಪ್ರವೇಶಿಸಿದಕ್ಕೆ ಬೆತ್ತಲೆ ಮೆರವಣಿಗೆ ಮಾಡುತ್ತಾರೆ.
ಇದಕ್ಕೆಲ್ಲ ದೇಶದಲ್ಲಿ 1990 ರಲ್ಲಿ ಹಿಂದುತ್ವದ ಕೋಮುವಾದ ಪ್ರಾರಂಭವಾದ ದಿನದಿಂದ ಸಾರ್ವಜನಿಕರು ತಪ್ಪು ಮಡಿದ್ದಾನೆ ಎಂದು ತಾವೇ ಹಿಡಿದು ಹಲ್ಲೆ ಮಾಡಿ ಹತ್ಯೆಗೈಯುವ ಪ್ರವೃತ್ತಿ ಬೆಳೆದಿದ್ದೆ ಕಾರಣ ಎಂದು ಪ್ರಗತಿ ಪರ ಚಿಂತಕ ಪ್ರೋ.ಫಣಿರಾಜ್ ಅಜ್ಜರಕಾಡು ಹುತಾತ್ಮರ ಕಟ್ಟೆ ಬಳಿ ನಡೆದ ಪ್ರತಿಭಟನ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. . ಇವರು ಶುಕ್ರವಾರ ದಲಿತ, ಹಿಂದುಳಿದ ,ಅಲ್ಪ ಸಂಖ್ಯಾತ ,ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಮೆರವಣಿಗೆ ಹಾಗೂ ಸಭೆಯನ್ನು ಹಮ್ಮಿಕೊಂಡಿದ್ದರು.
ಉಡುಪಿಯಲ್ಲೆ ಹದಿನಾಲ್ಕು ವರ್ಷದ ಹಿಂದೆ ದನದ ವ್ಯಾಪಾರಿ ತಂದೆ ಮಗನನ್ನು ಬೆತ್ತಲೆಗೊಳಿಸಿ ಅಟ್ಟಾಡಿಸಿ ಬೀದಿಯಲ್ಲಿ ಓಡಿಸಿದಾತನೆ ಮತ್ತೆ ದನ ಕಳ್ಳತನವಾದರೆ ಇದೇ ರೀತಿ ಮರುಕಳಿಸುತ್ತದೆಂದು ಸಾರ್ವಜನಿಕವಾಗಿ ಹೇಳುvನೆಂದಾದರೆ ನಮ್ಮ ಸಮಾಜ ಎಲ್ಲಿಗೆ ಬಂದಿದೆ ಎಂದು ಇವರು ಪ್ರಶ್ನಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷವಾದರೂ ಒಂದೇ ಧರ್ಮ ದೇಶವನ್ನು ನಿಯಂತ್ರಿಸುತ್ತಿದೆ, ಕೇವಲ ಒಂದು ವರ್ಗ ದಲಿತ ,ಅಲ್ಪ ಸಂಖ್ಯಾತ ಕ್ರಿಶ್ಚಿಯನ್ ಹೇಳಿ ದಮನಿಸುವ ಹುನ್ನಾರ ನಡೆಸುತ್ತಿದೆ.ಸಂವಿಧಾನ ವಿರೋಧಿಸುವ ಕೇಸರಿ ಪಡೆ ಇದಕ್ಕೆ ಬೆಂಬಲ ನೀಡುತ್ತಿದೆ ಎಂದು ದಸಂಸದ ಶೇಖರ ಹೆಜಮಾಡಿ ಆಕ್ರೋಶ ವ್ಯಕಪಡಿಸಿದರು. ಜಾತ್ಯಾತೀತ ಹೇಳುವ ಪಕ್ಷವು ಕಣ್ಣು ಮುಚ್ಚಿಕುಳಿತಿದೆ ಇದು ನರ ಸತ್ತ ಸರ್ಕಾರವಾಗಿದೆ ಎಂದು ರಾಜ್ಯ ಸರ್ಕಾರಕ್ಕೆ ಕುಟುಕಿದರು.
ಪ್ರತಿಭಟನೆಯಲ್ಲಿ ಜೆಡಿಸ್ ಜಿಲ್ಲಾಧ್ಯಕ್ಷ ಯೋಗೀಶ ಶೆಟ್ಟಿ,ಸಿಪಿಎಂ ವಿಶ್ವನಾಥ್ ರೈ,ಬಾಲಕೃಷ್ಣ ಶೆಟ್ಟಿ,ಶ್ಯಾಮಂರಾಜ್ ಭಿರ್ತಿ,ಹುಸೇನ್ ಕೋಡಿಬೇಂಗ್ರೆ,ಪ್ರಶಾಂತ ಜತ್ತನ್ನ, ಸುಂದರ್ ಮಾಸ್ತರ್ ,ಫಾ.ವಿಲಿಯಂ ಮಾರ್ಟಿಸ್ ಮೊದಲಾದವರು ಉಪಸ್ಥಿತರಿದ್ದರು.