ವಲಸೆ ಕಾರ್ಮಿಕರನ್ನು ಊರಿಗೆ ತಲುಪಿಸಲು ಸರಕಾರಕ್ಕೆ 1 ಕೋಟಿ ರೂ.ನೀಡಿದ ಕಾಂಗ್ರೆಸ್

ಕರ್ನಾಟಕ ರಾಜ್ಯ ಸರಕಾರ ವಲಸೆ ಕಾರ್ಮಿಕರಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸದೆ ಇರುವುದರಿಂದ ಹಾಗೂ ಬಸ್ ಪ್ರಯಾಣಕ್ಕೆ ದುಬಾರಿ ಟಿಕೆಟ್ ವಸೂಲಿ ಮಾಡುತ್ತಿ ರುವುದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು. ಸರಕಾರದಲ್ಲಿ ಹಣದ ಕೊರತೆ ಇರುವುದರಿಂದ ಸರಕಾರ ಈ ರೀತಿ ಕಾರ್ಮಿಕರನ್ನು ನಡೆಸಿಕೊಳ್ಳುತ್ತಿದೆಂದು, ಕೆಪಿಸಿಸಿ 1ಕೋಟಿ ರೂ. ಮೊತ್ತದ ಚೆಕ್ ಕೆಎಸ್‌ಆರ್ಟಿಸಿ ನಿಗಮಕ್ಕೆ ನೀಡಿದೆ.


ಕೊರೋನಾದಿಂದಾಗಿ ಲಾಕ್ ಡೌನ್ ನಿಂದ ಪ್ರಯಾಣಿಕರು ತಮ್ಮ ಊರು ತಲುಪಲಾಗದೆ ಇನ್ನಿಲ್ಲದಂತ ಪರದಾಡುತ್ತಿದ್ದಾರೆ. ಮಕ್ಕಳು, ಮಹಿಳೆಯರು, ವೃದ್ಧರು ಸೇರಿ ಅನೇಕ ಮಂದಿ ಊಟ, ತಿಂಡಿ, ಬಸ್ ವ್ಯವಸ್ಥೆ ಇಲ್ಲದೆ ರಾಜ್ಯದ ಕೆಎಸ್‌ಆರ್ಟಿಸಿ ಬಸ್ ನಿಲ್ದಾಣಗಳಲ್ಲಿ ಅನಾಥ ಭಾವದಿಂದ ನರಳುತ್ತಿರುವುದನ್ನು ಕಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ನಿರ್ಧಾರ ಕೈಗೊಂಡಿದ್ದಾರೆ.

ರಾಜಸ್ತಾನ, ತೆಲಾಂಗಣ, ದೆಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ, ಜಾರ್ಖಂಡ್ ಸೇರಿದಂತೆ ಅನೇಕ ರಾಜ್ಯಗಳು ಪ್ರಯಾಣಿಕರು ತಮ್ಮ ಊರು ತಲುಪಲು ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿವೆ. ಪ್ರಜೆಗಳ ಬಗ್ಗೆ ಆ ಸರಕಾರಗಳಿಗಿರುವ ಕಾಳಜಿ ಕರ್ನಾಟಕ ಸರಕಾರಕ್ಕೆ ಇಲ್ಲ. ಸರಕಾರಕ್ಕೆ ತೀವ್ರ ಹಣಕಾಸಿನ ತೊಂದರೆ ಇರಬಹುದು. ಹೀಗಾಗಿ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿಲ್ಲ. ಪ್ರಯಾಣಿಕರ ಯೋಗಕ್ಷೇಮದ ಬಗ್ಗೆ ಚಿಂತಿಸಿಲ್ಲ.

ಕಾಂಗ್ರೆಸ್ ಪಕ್ಷದ ಶಾಸಕರು, ಮಾಜಿ ಶಾಸಕರು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಅನೇಕ ಮುಖಂಡರು “ಕೊರೊನಾ ಕಾಂಗ್ರೆಸ್ ಪರಿಹಾರ ನಿಧಿ’ಗೆ ದೇಣಿಗೆಯಾಗಿ ನೀಡಿರುವ ಹಣದಲ್ಲಿ1 ಕೋಟಿ ರುಪಾಯಿಯನ್ನು ಚೆಕ್ ಮೂಲಕ ಸಂಸ್ಥೆಗೆ ನೀಡಿದ್ದಾರೆ.
ರಾಜ್ಯದ ಪ್ರಯಾಣಿಕರಿಂದ ನಯಾಪೈಸ ತೆಗೆದುಕೊಳ್ಳದೇ ಅವರನ್ನು ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಒಂದು ಬಾರಿಗೆ ಉಚಿತವಾಗಿ ಅವರವರ ಊರಿಗೆ ತಲುಪಿಸುವ ವ್ಯವಸ್ಥೆ ಮಾಡಿ. ಇನ್ನೂ ಹಣದ ಕೊರತೆಯಾದರೆ ನೀಡುವುದಾಗಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!