ಚಾಲಕರ ಮನಸ್ಥಿತಿಯೇ ಅಪಘಾತಕ್ಕೆ ಕಾರಣ – ಪೊಲೀಸ್ ಉಪಾಧೀಕ್ಷಕ ಕೃಷ್ಣಕಾಂತ್ ಹೇಳಿಕೆ

ಜಗತ್ತಿನಲ್ಲಿ ಭಾರತದಲ್ಲಿಯೇ ಅತೀ ಹೆಚ್ಚು ಪ್ರಮಾಣದಲ್ಲಿ ರಸ್ತೆ ಅಪಘಾತಗಳಾಗುತ್ತಿವೆ. ರಸ್ತೆ ಸುರಕ್ಷಾ ಕ್ರಮಗಳ ಬಗ್ಗೆ ಭಾರತೀಯರಲ್ಲಿರುವ ನಿರ್ಲಕ್ಷಕ್ಕೆ ದೇಶದಲ್ಲಿ ಪ್ರತಿದಿನ ೪೦೦ ಅಮೂಲ್ಯ ಜೀವಗಳು ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿದೆ. ನಮ್ಮಲಿ ವರದಿಯಾಗುವ ಹೆಚ್ಚಿನ ರಸ್ತೆ ಅಪಘಾತಗಳಿಗೆ ಸುರಕ್ಷತೆಯ ಕಾಳಜಿ  ಇಲ್ಲದ ವಾಹನ ಚಾಲಕರ ಮನೋಸ್ಥಿತಿಯೇ ಕಾರಣ ಎಂದು ಕಾರ್ಕಳ ವಿಭಾಗದ ಪೊಲೀಸ್ ಉಪಾಧೀಕ್ಷಕ ಕೃಷ್ಣಕಾಂತ್  ಹೇಳಿದರು.

ಅವರು ಮಂಗಳವಾರ ಪೊಲೀಸ್ ಇಲಾಖೆ ಕಾರ್ಕಳ ವಿಭಾಗದ ವತಿಯಿಂದ ಕಾಪು ಪೊಲೀಸ್ ವೃತ್ತ  ವಿಭಾಗದ ಆಶ್ರಯದಲ್ಲಿ ಕಾಪು ದಂಡ ತೀರ್ಥ ಶಿಕ್ಷಣ ಸಂಸ್ಥೆ ಹಾಗು ಕಾಪು ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗು ಕಾಪು ಜೇಸಿಐ ಸಹಯೋಗದೊಂದಿಗೆ ಕಾಪು ಶ್ರೀ  ವೀರಭದ್ರ ಸಭಾಭವನದಲ್ಲಿ ನಡೆದ ರಸ್ತೆ ಸುರಕ್ಷಾ ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವೃತ್ತಿ ನಿರತ ಚಾಲಕರು ಹಾಗು ಯುವ ಜನಾಂಗದ  ನಡುವೆ ರಸ್ತೆ ಸುರಕ್ಷತೆಯ ಬಗ್ಗೆ ಜಾಗ್ರತಿ ಮೂಡಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ , ಕಾನೂನು ವ್ಯವಸ್ಥೆ , ವಿಮಾ ಸಂಸ್ಥೆ ಹಾಗು ನಾನಾ ವಲಯಗಳ ಸಂಪನ್ಯೂಲ ವ್ಯಕ್ತಿಗಳಿಂದ ಮಾಹಿತಿ ಒದಗಿಸುತ್ತಿದೆ ಆದರೆ ವಾಹನ ಚಾಲಕರು ಸುರಕ್ಷತೆ ಕಾಪಾಡಿಕೊಳ್ಳುವಲ್ಲಿ ಸ್ವತಃ ಮನ ಮಾಡದ ಹೊರತು ಸುಧಾರಣೆ ಅಸಾಧ್ಯ ಎಂದರು.

ಇದೆ ಸಂದರ್ಭದಲ್ಲಿ ಅಪಘಾತವಾದಾಗ ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸುತ್ತಿರುವ ಸೂರಿ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾರ್ಕಳ ವೃತ್ತ ನಿರೀಕ್ಷಕ ಹಾಲಮೂರ್ತಿ ರಾವ್, ಕಾಪು ಪುರಸಭಾ ಮುಖ್ಯಾಧಿಕಾರಿ ಕೆ ರಾಯಪ್ಪ , ಜೇಸಿಐ ಕಾಪು ಘಟಕದ ಅಧ್ಯಕ್ಷೆ ಶಾರದೇಶ್ವರಿ ಗುರ್ಮೆ ಉಪಸ್ಥಿತರಿದ್ದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಶಿವಶಂಕರ್ , ನ್ಯಾಯವಾದಿ ಪ್ರದೀಪ್.ಬಿ ಜೆ ,ಭಾರತೀಯ ಜೀವ ವಿಮಾ ನಿಗಮದ ಕಾಪು ಕಚೇರಿಯ ವ್ಯವಸ್ಥಾಪಕ ಕೆ.ವಿ ಕಿರಣ್ ಕುಮಾರ್ ಮಾಹಿತಿ ನೀಡಿದರು,ಕಾಪು ಠಾಣಾಧಿಕಾರಿ ಜಯ ಪ್ರಸ್ತಾವಿಕ ಮಾತನಾಡಿದರು , ದಂಡತೀರ್ಥ ಪ. ಪೂ .ಕಾಲೇಜಿನ ಉಪನ್ಯಾಸಕ ಶಿವಣ್ಣ ಬಾಯರ್ ಕಾರ್ಯಕ್ರಮ ವಂದಿಸಿದರು

Leave a Reply

Your email address will not be published. Required fields are marked *

error: Content is protected !!