ಸಚಿವ ಕೋಟ ಮನವಿಗೆ ಹೊರ ರಾಜ್ಯ ಕನ್ನಡಿಗರ ಸಹಾಯವಾಣಿಗೆ ಚಾಲನೆ

ಪ್ರಪಂಚದಾದ್ಯಂತ ಮಾರಕ ಸೋಂಕುರೋಗ ಕೋವಿಡ್-19 ಹರಡಿರುವ ಹಿನ್ನಲೆಯಲ್ಲಿ ದೇಶವ್ಯಾಪಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಇದರಿಂದಾಗಿ ಕೆಲಸದ ನಿಮಿತ್ತ ಹೊರ ರಾಜ್ಯಗಳಿಗೆ ಹೋಗಿ ಸಿಲುಕಿರುವ ಕರ್ನಾಟಕ ಮೂಲದವರ ಸಮಸ್ಯೆಗಳನ್ನು ಆಲಿಸಲು ರಾಜ್ಯ ಸರ್ಕಾರ, ಕಾರ್ಮಿಕ ಇಲಾಖೆ ವತಿಯಿಂದ ಸಹಾಯವಾಣಿಯನ್ನು ಆರಂಭಿಸಲಾಗಿದ್ದು, ಇಂದಿನಿಂದಕಾರ್ಯಾರಂಭಗೊಳ್ಳಲಿದೆ.


ಬೆಂಗಳೂರಿನ ಡೈರಿ ವೃತ್ತದಲ್ಲಿರುವ ಕಲ್ಯಾಣ ಸುರಕ್ಷಾ ಭವನದಲ್ಲಿ ಕಾರ್ಯನಿರ್ವಹಿಸುವ ಸಹಾಯವಾಣಿ ಕೇಂದ್ರದಲ್ಲಿ ಪ್ರತಿ ಪಾಳಿಯಲ್ಲಿ 50 ಜನರಂತೆ 3 ಪಾಳಿಯಲ್ಲಿ ಕೆಲಸ ಮಾಡಲಿದ್ದಾರೆ.


ಲಾಕ್ ಡೌನ್ ಸಮಸ್ಯೆಯಿಂದ ಪ್ರಯಾಣ ಮಾಡಲು ಸಾಧ್ಯವಾಗದ ಹೊರ ರಾಜ್ಯಗಳಲ್ಲಿ ಉಳಿದು ತೊಂದರೆಗೆ ಸಿಲುಕಿರುವ ಕಾರ್ಮಿಕರಿಗಾಗಿ ಹಾಗೂ ಆಹಾರ ಮತ್ತು ಇತರ ಮೂಲಭೂತ ಸಮಸ್ಯೆಗಳ ಬಗ್ಗೆ ಶೀಘ್ರದಲ್ಲಿ ಪರಿಹಾರ ಕಲ್ಪಿಸುವ ದೃಷ್ಟಿಯಿಂದ ದೂರು ಬಂದ ಕೂಡಲೇ ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿ, ಸಮಸ್ಯೆ ಪರಿಹರಿಸಿ ಹೊರ ರಾಜ್ಯಗಳಲ್ಲಿ ಸಿಲುಕಿರುವವರ ಹಿತರಕ್ಷಣೆಗೆ ಕಾರ್ಯಪ್ರವೃತ್ತವಾಗಲಿದೆ.
*ಇಂದಿನಿಂದ ಕಾರ್ಯಾರಂಭ ಮಾಡುವ ಸಹಾಯವಾಣಿಯ ಸಂಖ್ಯೆ -080 22636800

11 thoughts on “ಸಚಿವ ಕೋಟ ಮನವಿಗೆ ಹೊರ ರಾಜ್ಯ ಕನ್ನಡಿಗರ ಸಹಾಯವಾಣಿಗೆ ಚಾಲನೆ

  1. Please help me sir,I m stuck in Virar , Palghar district, Maharashtra..i want to return to Udupi.

  2. Sir,
    I am stuck in PEN-Raigd- district. Please help me my go to kundapura-Udipi district.

  3. Please help me sir, i am working Mumbai kandivali West sv Road poisar.
    Mumbai 400067 (maharashta) I want to return to udipi, add – kundapura, nandanavana, udipi, Kergal, karnataka, 576219

Leave a Reply

Your email address will not be published. Required fields are marked *

error: Content is protected !!