ಜನರ ನಿರೀಕ್ಷೆ ಯನ್ನು ಹುಸಿಗೊಳಿಸಿದ ಕೇಂದ್ರ ಬಜೆಟ್
ಬಜೆಟ್ ಪ್ರತಿಕ್ರೀಯೆ
ಜನರ ನಿರೀಕ್ಷೆ ಯನ್ನು ಹುಸಿಗೊಳಿಸಿದ ಕೇಂದ್ರ ಬಜೆಟ್ ಕೃಷಿಗೆ ಯಾವುದೆ ನೀತಿˌ ಯೋಜನೆಗಳನ್ನು ರೂಪಿಸದೆ ˌ ರೈತರಿಗೆ ಬೆಂಬಲ ಬೆಲೆಯನ್ನೂ ಘೋಷಿಸದೆ ರೈತರನ್ನು ಸಂಪೂರ್ಣ ಕಡೆಗಣಿಸಿದ ಬಜೆಟ್ ಇದಾಗಿದೆ.
ಪೆಟ್ರೋಲ್ ˌ ಡಿಸೇಲ್ ˌ ಚಿನ್ನ ˌ ಆಮದು ಪುಸ್ತಕಗಳು ˌಡಿಜಿಟಲ್ ವಸ್ತುಗಳು ˌಅಟೋಮೋಬೈಲ್ ಬಿಡಿ ಭಾಗಗಳ ಸುಂಕಏರಿಕೆಯಿಂದ ಮಧ್ಯಮ ವರ್ಗದ ಮೇಲೆಹೆಚ್ಚಿನ ಹೊರೆಬೀಳಲಿದೆ.
ಖಾಸಾಗಿ ಹೂಡಿಕೆಗೆ ಹೆಚ್ಚು ಒತ್ತು ನೀಡಿ ಬಂಡವಾಳಶಾಹಿಗಳಪರವಾಗಿ ಒಲವನ್ನು ವ್ಯಕ್ತಪಡಿಸಿದೆ ˌಯುವಕರ ಉದ್ಯೋಗ ಸೃಷ್ಟಿಗೆ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ ಬಹಳಷ್ಟು ನಿರೀಕ್ಷೆಯಲ್ಲಿದ್ದ ಮಂಗಳೂರು ರೈಲ್ವೆ ವಿಭಾಗೀಯ ಕಛೇರಿಯ ಪ್ರಾರಂಭ ಹುಸಿಯಾಗಿದೆˌ ಈ ಹಿನ್ನಲೆಯಲ್ಲಿ ಬಜೆಟ್ ನಲ್ಲಿ ಸಿಹಿಕ್ಕಿಂತ ಕಹಿಯೆ ಜಾಸ್ತಿಯಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರಭಾಸ್ಕರ ರಾವ್ ಕಿದಿಯೂರು ಬಜೆಟ್ ಬಗ್ಗೆಪ್ರತಿಕ್ರಿಯಿಸಿದ್ದಾರೆ.
ಯೋಗೀಶ್. ವಿ. ಶೆಟ್ಟಿ ಬಜೆಟ್ ಪ್ರತಿಕ್ರೀಯೆ
ಇಂದಿನ ಬಜೆಟ್ ಹಳೆ ಮದ್ಯ ಹೊಸ ಬಾಟಲಿ ಯಲ್ಲಿ ಅನ್ನೋ ಹಾಗೆ ಇದೆ. ಯಾವುದೇ ಹೊಸ ಕಾರ್ಯಕ್ರಮ ಇಲ್ಲದ ಬಜೆಟ್.
ಪೆಟ್ರೋಲ್ ಡೀಸೆಲ್ ಮೇಲಿನ ಸೆಸ್ 1 ರೂಪಾಯಿ ಹೆಚ್ಚಳ ಜನ ಸಾಮಾನ್ಯರ ಮೇಲೆ ಬರೆ ಬಿದ್ದ ಹಾಗೆ ಆಗಿದೆ. ನಿರ್ಮಲ ಸೀತಾರಾಮನ್ ಅವರು ಕರ್ನಾಟಕದಿಂದ ರಾಜ್ಯಸಭೆಗೆ ಅಯ್ಕೆ ಆಗಿದ್ದರೂ ನಮಗೆ ಯಾವುದೇ ವಿಶೇಷ ಯೋಜನೆ ಕೊಡದಿರುವುದು ವಿಷಾದನೀಯ….
ಯೋಗೀಶ್. ವಿ. ಶೆಟ್ಟಿ ಜಿಲ್ಲಾಧ್ಯಕ್ಷರು