ಕುಂಭಾಸಿ- ರಸ್ತೆಯ ಹೊಂಡದಿಂದಾಗಿ ಡಿವೈಡರ್ ಗೆ ಏರಿದ ಬಸ್ಸು
ಕುಂಭಾಶಿ- ರಾಷ್ಟ್ರೀಯ ಹೆದ್ದಾರಿಯಲ್ಲಿ ಇದ್ದ ಹೊಂಡಕ್ಕೆ ಟೈಯರ್ ಸಿಲುಕಿ ಚಾಲಕನ ನಿಯಂತ್ರಣ ತಪ್ಪಿ ಬಸ್ಸೊಂದು ಡಿವೈಡರ್ ಮೇಲೆ ಏರಿದ ಘಟನೆ ಕುಂಭಾಸಿಯಲ್ಲಿ ನಡೆದಿದೆ .
ಕುಂದಾಪುರದಿಂದ ಮೈಸೂರು ಕಡೆಗೆ ಹೊರಟ ಕೆಎಸ್ ಆರ್ ಟಿ ಸಿ ರಾಜಹಂಸ ಬಸ್ಸು ರಸ್ತೆ ಮಧ್ಯದಲಿದ್ದ ಹೊಂಡದಲ್ಲಿ ಚಕ್ರ ಸಿಲುಕಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿದ್ದೆ ಅದ್ರಷ್ಟವಷಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ,…
ಈ ಅವಘಡದ ಮೊದಲು ಅದೇ ದಾರಿಯಲ್ಲಿ ಚಲಿಸುತ್ತಿದ್ದ ಕಾರು ಮಳೆ ನೀರಿನಿಂದ ರಸ್ತೆಯಲ್ಲಿದ್ದ ಈ ಬ್ರಹತ್ ಹೊಂಡ ಕಾಣದೆ ಬಿದ್ದ ಪರಿಣಾಮ ಕಾರು ಮುಂದೆ ಚಲಿಸದಂತಾಗಿದೆ. ನವಯುಗದ ರಸ್ತೆಗಳು ಒಂದು ವರ್ಷದಲ್ಲಿ ಮಳೆ ಬಂದು ರಸ್ತೆಗಳಲ್ಲಿ ಹೊಂಡ ಬಿದ್ದಿದೆ . ಈ ರಸ್ತೆಗಳಿಗೆ ಸುಂಕ ತೆಗೆದುಕೊಳ್ಳುವ ನವಯುಗ ಈ ದುರಸ್ತಿಗಳ ಕಡೆ ಗಮನ ಕೊಡದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ , ಇದೆ ದಾರಿಯಲ್ಲಿ ೨ ಶಾಲೆಗಳ ಶಾಲಾ ವಾಹನಗಳು ದಿನ ನಿತ್ಯ ಚಲಿಸುತ್ತದೆ ಅಷ್ಟೇ ಅಲ್ಲದೆ ಇಲ್ಲಿ ಸರಿಯಾದ ಸರ್ವಿಸ್ ರಸ್ತೆಯು ಆಗದ ಪರಿಣಾಮ ಅನೇಕ ಅಪಘಾತಗಳು ಇಲ್ಲಿ ನಡೆಯುತ್ತಿದ್ದೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿ ವೇಗವಾಗಿ ವಾಹನಗಳು ಚಲಿಸುತ್ತದೆ ಹಾಗು ಈ ಹೊಂಡಗಳು ವಾಹನ ಸವಾರರಿಗೆ ಮೃತ್ಯು ಕೂಪವಾಗಿದೆ,ತಕ್ಷಣವೇ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಹಾಗು ಸಂಭಾವ್ಯ ಅಪಘಾತಗಳನ್ನು ತಪ್ಪಿಸಬೇಕಾಗಿದೆ.