ದೇವಸ್ಥಾನ, ಚರ್ಚ್ ಮತ್ತು ಮನೆ ಮನೆಗಳಲ್ಲಿ ಮೊಳಗಿದ ಗಂಟೆ , ಚಪ್ಪಾಳೆ ಸದ್ದು

ಉಡುಪಿ: ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೋರೊನ ವೈರಸ್ ಇದೀಗ ಭಾರತದ ಜನರ ಬದುಕನ್ನು ಹಾಳು ಮಾಡುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳು ಲಾಕ್ ಡೌನ್ ಆಗಿದ್ದು, ದೇಶದಲ್ಲಿಯೂ ಎಚ್ಚರ ವಹಿಸಲಾಗುತ್ತಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಕರೆ ಕೊಟ್ಟಂತೆ ಇಂದು ದೇಶದಾದ್ಯಂತ ಜನತಾ ಕರ್ಫ್ಯೂ ಯಶಸ್ವಿಯಾಗಿ ನಡೆದಿದೆ. 

ದೇಶದ ಪ್ರಧಾನಿ ತಮ್ಮ ಭಾಷಣದಲ್ಲಿ ಉಲ್ಲೇಖ ಮಾಡಿದಂತೆ ಸಂಜೆ ಐದು ಗಂಟೆಗೆ ದೇಶದ ಎಲ್ಲ ನಿವಾಸಿಗಳು ತಮ್ಮ ತಮ್ಮ ಮನೆಗಳಲ್ಲಿ ಚಪ್ಪಾಳೆ ಮತ್ತು ಗಂಟೆಗಳನ್ನು ಬಾರಿಸಿ ಕೋರೊನ ವೈರಸ್ಸಿನ ವಿರುದ್ಧ ಹೋರಾಟ ಮಾಡುತ್ತಿರುವ ವೈದ್ಯರಿಗೆ, ನರ್ಸ್ ಮತ್ತು ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರ ಮತ್ತು ಸಿಬ್ಬಂದಿ ವರ್ಗದವರಿಗೆ  ವಿವಿಧ ಸ್ಥಳಗಳಲ್ಲಿ ಗೌರವ ಸಲ್ಲಿಸಲಾಯಿತು. ಉದ್ಯಾವರದ ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯದ ಪ್ರಧಾನ ಗಂಟೆಯನ್ನು ಐದು ನಿಮಿಷ ಬಾರಿಸಿ ವೈದ್ಯರಿಗೆ ವಿಶೇಷವಾದ ಅಭಿನಂದನೆ ಸಲ್ಲಿಸಲಾಯಿತು. 


ಇದೇ ಸಂದರ್ಭದಲ್ಲಿ ಉದ್ಯಾವರದ ದಲ್ಲಿರುವ ವಿವಿಧ ದೇವಸ್ಥಾನಗಳ ಗಳಲ್ಲಿ ಗಂಟೆಯ ಶಬ್ದ ಮೊಳಗಿತು. ಉದ್ಯಾವರದ ಗುಡ್ಡೆಯಂಗಡಿ, ಕಟ್ಟೆಗುಡ್ಡೆ, ಕುತ್ಪಾಡಿ, ಬೊಳ್ಜೆ, ಪಿತ್ರೋಡಿ, ಮೇಲ್ಪೇಟೆ, ಸಂಪಿಗೆ ನಗರ ಬೋಳಾರು ಗುಡ್ಡೆ ಕೊರಂಗ್ರಪಾಡಿ ಸಹಿತ ಎಲ್ಲ ಪರಿಸರದ ನಿವಾಸಿಗಳು ತಮ್ಮ ತಮ್ಮ ಮನೆಯಲ್ಲಿ ಗಂಟೆ ಚಪ್ಪಾಳೆಯನ್ನು ಬಾರಿಸಿ ಸಂಭ್ರಮಿಸಿದರು. ಅದರಲ್ಲೂ ವಿಶೇಷವಾಗಿ ಉದ್ಯಾವರದ ಹಲವು ಫ್ಲ್ಯಾಟ್ಗಳಲ್ಲಿ ಚಪ್ಪಾಳೆ ಗಂಟೆಗಳ ಶಬ್ದ ಜೋರಾಗಿತ್ತು. ಕೆಲವು ಕಡೆ ಪಟಾಕಿಗಳ ಶಬ್ದವು ಕೇಳಿಸಿತು. ಒಟ್ಟಾರೆಯಾಗಿ ಉದ್ಯಾವರದಲ್ಲಿ ಜನತಾ ಕರ್ಫ್ಯೂ ಯಶಸ್ವಿಯಾದರೆ, ಐದು ಗಂಟೆಗೆ ಗಂಟೆ, ಚಪ್ಪಾಳೆ, ಶಿಳ್ಳೆಗಳ ಶಬ್ದದೊಂದಿಗೆ ವೈದ್ಯರಿಗೆ, ನರ್ಸ್ ಮತ್ತು ಕರೋನ ವೈರಸ್ಸಿನ ವಿರುದ್ಧ ಹೋರಾಟ ಮಾಡುವ ನೌಕರರಿಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವವರಿಗೆ ಅಭಿನಂದನೆಯ ಮಹಾಪೂರವೇ ದೊರಕಿತು.

Leave a Reply

Your email address will not be published. Required fields are marked *

error: Content is protected !!