ಗಿರಿಗಿಟ್ ಯಶಸ್ಸಿನ ಬೆನ್ನೆಲುಬು ಬೈಲೂರು ಪ್ರಸನ್ನ ಶೆಟ್ಟಿಯ ಸಂಭಾಷಣೆ

ಒಂದು ಸಿನಿಮಾದ ಯಶಸ್ಸಿನಲ್ಲಿ ನಿರ್ದೇಶಕ, ನಾಯಕ, ನಾಯಕಿ, ವಿಲನ್, ಕೆಮರಾ, ಸಂಭಾಷಣೆ ಹೀಗೆ ಕೆಲವು ಅಂಶಗಳಿರುತ್ತವೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಗಿರಿಗಿಟ್ ಯಶಸ್ಸಿನಲ್ಲಿ ಅದರ ಸಂಭಾಷಣೆಯ ಕೊಡುಗೆ ಪ್ರಮುಖವಾಗಿದೆ. ಚಿತ್ರ ನೋಡಿದ ಎಲ್ಲರೂ ಹಾಗೂ ವಿಮರ್ಶಕರು ಕೂಡ ಇದನ್ನು ಒಪ್ಪಿಕೊಂಡಿದ್ದಾರೆ.

ಈ ಸಿನಿಮಾಕ್ಕೆ ಸಂಭಾಷಣೆ ಬರೆದವರು ಬಲೇ ತೆಲಿಪಾಲೆ ಖ್ಯಾತಿಯ, ಪ್ರಶಂಸಾ ಕಾಪು ತಂಡದ ಪ್ರಸನ್ನ ಶೆಟ್ಟಿ ಬೈಲೂರು ಅವರು. ರೂಪೇಶ್ ಶೆಟ್ಟಿ ನೀಡಿರುವ ಒಂದು ಸಣ್ಣ ಕಥೆಯನ್ನು ಹಿಡಿದುಕೊಂಡು, ಹಾಸ್ಯದ ಲೇಪನದೊಂದಿಗೆ ಮನಸ್ಸಿಗೆ ತಟ್ಟುವಂಥ ಸಂಭಾಷಣೆ ಈ ಚಿತ್ರದ ಹೆಗ್ಗಳಿಕೆಯಲ್ಲಿ ಪ್ರಧಾನವಾದ ವಿಷಯ.

ಚುಟುಕಾದ ಸಂಭಾಷಣೆಯು ಪ್ರತಿಯೋರ್ವ ಪ್ರೇಕ್ಷಕನ ಮನಸ್ಸನ್ನೂ ತಟ್ಟಿದೆ. ಆದ್ದರಿಂದ ಚಿತ್ರ ಹಿಟ್ ಆಗಿರುವುದರಲ್ಲಿ ಬೈಲೂರು ಪ್ರಸನ್ನ ಶೆಟ್ಟಿಯ ಕೊಡುಗೆ ಮಹತ್ವದ್ದಾಗಿದೆ.
ಜತೆಗೆ ಪ್ರಸನ್ನ ಶೆಟ್ಟಿ ಮತ್ತು ಸಂದೀಪ್ ಶೆಟ್ಟಿ ಮಾಣಿಬೆಟ್ಟು ಜೋಡಿ ಸಿನಿಮಾದ ಉದ್ದಕ್ಕೂ ತಮ್ಮ ತಮ್ಮ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಸನ್ನ ಶೆಟ್ಟಿ ಒಬ್ಬ ನಾಟಕಕಾರನಾಗಿ, ನಿರ್ದೇಶಕನಾಗಿ, ನಾಟಕ ರಚನೆ ಕಾರನಾಗಿ ಪ್ರಸಿದ್ದಿ ಪಡೆದಿದ್ದಾರೆ. ಕಲರ್‍ಸ್ ಚಾನೆಲ್‌ನಲ್ಲಿ ಪ್ರಸನ್ನ -ಸಂದೀಪ್ ತಂಡ ಹಲವಾರು ಪ್ರರ್ಶನಗಳನ್ನೂ ನೀಡಿದ್ದಾರೆ. ಚಾಲಿಪೋಲಿಲು ಸಿನಿಮಾದ ಮೂಲರ ತುಳು ಚಿತ್ರರಂಗ ಪ್ರವೇಶಿಸಿದ ಪ್ರಸನ್ನ ಶೆಟ್ಟಿ ಆ ಬಳಿಕ ಹಲವಾರು ತುಳು ಸಿನಿಮಾಗಳಲ್ಲಿ ನಟನಾಗಿ ದುಡಿದಿದ್ದಾರೆ. ಗಿರಿಗಿಟ್ ಸಿನಿಮಾಕ್ಕೆ ಸಂಭಾಷಣೆ ಬರೆಯುವ ಅವಕಾಶ ರೂಪೇಶ್ ಶೆಟ್ಟಿ ನೀಡಿದ್ದರು.

ಈಗ ಸಿನಿಮಾ ಹಿಟ್ ಆದಂತೆ ಪ್ರಸನ್ನ ಶೆಟ್ಟಿ ಅವರಿಗೆ ಹಲವು ಅವಕಾಶಗಳು ಒದಗಿ ಬಂದಿದೆ. ಪ್ರಸನ್ನ ಶೆಟ್ಟಿ ಬೈಲೂರು ಹುಟ್ಟು ಹಾಕಿದಚೈತನ್ಯ ಕಲಾವಿದರು ಕಾರ್ಕಳ’ ತಂಡಕ್ಕೆ 6 ವರ್ಷ. ಪ್ರಶಂಸ ಕಾಪು ತಂಡದಲ್ಲಿ12 ವರ್ಷಗಳಿಂದ ಹಾಸ್ಯ ಕಲಾವಿದರಾಗಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ಸಂದೀಪ್ ಶೆಟ್ಟಿ ರಚನೆಯ `ನಮ್ಮಮ್ಮ ಶಾರದೆ’ ನಾಟಕ ನಿರ್ದೇಶನದ ಜವಾಬ್ದಾರಿ ಪ್ರಸನ್ನ ಶೆಟ್ಟಿ ಅವರದ್ದು. ಚೈತನ್ಯ ಕಲಾವಿದರು ತಂಡಕ್ಕಾಗಿ ಬಲೆ ತೆಲ್ಪುಲೆ, ಮೇ 22, ಸ್ಟಾರ್, ತೂಯಿನಾಯೆ ಪೊಯೆ, ಬುದ್ದಿ ಚಪಡ್, ಪಿರಪೊಂಡುಗೆ ನಾಟಕ ರಚನೆ. ನಾಟಕ ಸ್ಫರ್ಧೆಗಳಲ್ಲಿ ಇವರ ನಾಟಕಕ್ಕೆ ಪ್ರಶಸ್ತಿಯೂ ಲಭಿಸಿದೆ.

ಗಿರಿಗಿಟ್ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಿರುವ ಜಯಣ್ಣ ಫಿಲಂಸ್
ಕೆಲವು ಪ್ರಥಮಗಳಿಗೆ ಸಾಕ್ಷಿಯಾಗಿರುವ ಈ ಬಾರಿಯ ಅತಿ ನಿರೀಕ್ಷೆಯ ಸಿನಿಮಾ ಗಿರಿಗಿಟ್ ಈಗ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಇದರಲ್ಲೇನು ಮಹಾ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಈ ಸುದ್ದಿ ವಿಶೇಷತೆ ಗಳಿಸಲು ಪ್ರಮುಖ ಕಾರಣವೆಂದರೆ ಇದನ್ನು ಯಾರು ಬಿಡುಗಡೆ ಮಾಡುತ್ತಾರೆ ಎಂಬುದು. ಕರ್ನಾಟಕದ ಅತಿ ದೊಡ್ಡ ಸಿನಿಮಾ ವಿತರಕ ಸಂಸ್ಥೆಯಾಗಿರುವ ಜಯಣ್ಣ ಫಿಲಂಸ್‌ನವರು ಸೆ. ೬ರಂದು ಬೆಂಗಳೂರಿನಲ್ಲಿ ಗಿರಿಗಿಟ್ ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದು, ಇದು ತುಳು ಸಿನಿಮಾ ರಂಗಕ್ಕೆ ಒಂದು ಅತಿ ದೊಡ್ಡ ಹೆಮ್ಮೆಯ ಸಂಗತಿ.

ಜಯಣ್ಣ ಫಿಲಂಸ್‌ನವರು ಇದೇ ಮೊದಲ ಬಾರಿಗೆ ತುಳು ಸಿನಿಮಾವೊಂದನ್ನು ಬಿಡುಗಡೆ ಮಾಡುತ್ತಿದ್ದಾರೆ. ಗಿರಿಗಿಟ್ ಸಿನಿಮಾಕ್ಕೆ ತುಳುನಾಡಿನಲ್ಲಿ ಸಿಕ್ಕಿರುವ ಭರ್ಜರಿ ರೆಸ್ಪಾನ್ಸ್ ಮತ್ತು ಇದು ಹೊಂದಿರುವ ವಿಶೇಷತೆ, ಗುಣಮಟ್ಟದ ಕಾರಣದಿಂದ ಜಯಣ್ಣ ಫಿಲಂಸ್‌ನವರು ಈ ಸಿನಿಮಾವನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಆ ಮೂಲಕ ಕನ್ನಡದ ನೆಲದ ಸಿನಿಮಾ ಮಂದಿರದ ಪರದೆಯಲ್ಲೂ ತುಳುವಿನ ದನಿ ಕೇಳಿ ಬರಲಿದೆ.

ಗಿರಿಗಿಟ್ ಸಿನಿಮಾವು ಈಗ ತುಳುನಾಡಿನ ವಿವಿಧೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಇದೇ ಮೊದಲ ಬಾರಿಗೆ ಒಂದೇ ವಾರದಲ್ಲಿ ಕೋಟಿ ಕ್ಲಬ್‌ಗೆ ಸೇರಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಇದು ತುಳು ಚಿತ್ರರಂಗದ ಪಾಲಿಗೆ ಹೆಮ್ಮೆಯ ಸಂಗತಿಯೇ. ವಿಮರ್ಶಕರು ಮತ್ತು ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ ಗಿರಿಗಿಟ್ ಬೆಂಗಳೂರಿನಲ್ಲಿ ಮಾಡಲಿರುವ ಸಾಧನೆ ಬಗ್ಗೆ ಈಗ ಎಲ್ಲರ ಗಮನ ನೆಟ್ಟಿದೆ.

1 thought on “ಗಿರಿಗಿಟ್ ಯಶಸ್ಸಿನ ಬೆನ್ನೆಲುಬು ಬೈಲೂರು ಪ್ರಸನ್ನ ಶೆಟ್ಟಿಯ ಸಂಭಾಷಣೆ

Leave a Reply to Anish Claude Cancel reply

Your email address will not be published. Required fields are marked *

error: Content is protected !!