ಒಎಲ್ಎಕ್ಸ್ನಲ್ಲಿ ವಂಚಿಸುತ್ತಿದ್ದ ಐವರು ಹೈಟೆಕ್ ಖದೀಮರ ಬಂಧನ
ಬೆಂಗಳೂರು: ಒಎಲ್ಎಕ್ಸ್ನಲ್ಲಿ ದೇಶವ್ಯಾಪಿ ವಂಚಿಸಿದ್ದ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿ, 7 ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.
ರಾಜಸ್ಥಾನ ಮೂಲದ ಕರಣ್ ಸಿಂಗ್(36), ಅಕ್ರಮ್ ಖಾನ್(19) ಜಮೀಲ್(42) ಹ್ಯಾರಿಸ್(20) ಮತ್ತು ಮೆಹಜರ್(22) ಬಂಧಿತರು.
ಕಳೆದ ಒಂದುವರೆ ವರ್ಷದಿಂದ ಒಎಲ್ಎಕ್ಸ್ ಹೆಸರಿನಲ್ಲಿ ಗ್ರಾಹಕರಿಗೆ ವಂಚಿಸಿದ್ದ 312 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 210 ಹೆಚ್ಚು ಪ್ರಕರಣಗಳಲ್ಲಿ ಬಂಧಿತ ಅರೋಪಿಗಳು ಭಾಗಿಯಾಗಿರುವುದು ತನಿಖೆಯಿಂದ ತಿಳಿದು ಬಂದಿದೆ.