ರೈಲು ಡಿಕ್ಕಿ ಎರಡು ಗಂಡು ಕರು ಸಾವು. ಒಂದಕ್ಕೆ ಗಂಭೀರ ಗಾಯ

ಉಡುಪಿ,ಜು.2: ಇಂದ್ರಾಳಿ- ಹಯಗ್ರೀವ ನಗರದ, ಸಮೀಪದ ರೈಲು ಹಳಿಯ ಮೇಲೆ, ಗುಂಪಾಗಿ ಸಂಚರಿಸುತ್ತಿದ್ದ ಜಾನುವಾರುಗಳಿಗೆ ,ರೈಲು ಡಿಕ್ಕಿ ಹೊಡೆದ ಪರಿಣಾಮ ಎರಡು ಗಂಡು ಕರುಗಳು ಮೃತಪಟ್ಟಿವೆ. ಒಂದು ಗಂಡು ಕರು ಗಂಭೀರ ಗೊಂಡಿದ್ದು,ಮತ್ತೊಂದು ಪ್ರಾಣಾಪಾಯದಿಂದ ಪಾರಾಗಿದೆ.

ದುರಂತವು ತಡರಾತ್ರಿ ನಡೆದಿರ ಬಹುದೆಂದು ಅಂದಾಜಿಸಲಾಗಿದೆ. ಘಟನೆಯು ಮಂಗಳವಾರ ನಸುಕಿನ ಜಾವ ಉಡುಪಿಯ ನಾಗರಿಕ ಸಮಿತಿಯ ಕಾರ್ಯಕರ್ತರ ಗಮನಕ್ಕೆ ಬಂದಿದೆ.

ಮಾಹಿತಿ ಪಡೆದ ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಘಟನ ಸ್ಥಳಕ್ಕೆ ಧಾವಿಸಿ ಬಂದು, ರೈಲ್ವೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಸ್ಪಂದಿಸಿದ ರೈಲ್ವೆ ಮೆಲ್ವೀಚಾರಕ ಚಾಖೋ ಅವರು ಸಮಾಜಸೇವಕರ ಸಹಕಾರದೊಂದಿಗೆ ಎರಡು ಗಂಡು ಕರುಗಳ ಛಿದ್ರಗೊಂಡ ಕಳೇಬರಗಳನ್ನು ಧಪನ ಮಾಡಿಸಿದ್ದಾರೆ.

ಗಾಯಗೊಂಡ ಗಂಡು ಕರುವನ್ನು ಮಣಿಪಾಲ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮೃತಪಟ್ಟ ಹಾಗೂ ಗಾಯಾಳು ಗಂಡು ಕರುಗಳು ವಾರಸುದಾರರಿಲ್ಲದ ಬೀಡಾಡಿ ಜಾನುವಾರುಗಳೆಂದು ಸ್ಥಳಿಯರು ಹೇಳಿದ್ದಾರೆ. ಜನವಸತಿ ಪ್ರದೇಶದಲ್ಲಿ ಮೃತ ಜಾನುವಾರುಗಳ ಕಳೇಬರದಿಂದ ಕೊಳೆತು ವಾಸನೆ ಬಿಳುವ ಸಂದರ್ಭ ಇತ್ತು.

ಸಮಾಜಸೇವಕರು ಮತ್ತು ರೈಲ್ವೆ ಇಲಾಖಾ ಸಿಬ್ಬಂದಿಗಳ ತಕ್ಷಣದ ಮುತುವರ್ಜಿಯಿಂದ, ಪರಿಸರದ ಮಾಲಿನ್ಯ ತಡೆಯುವಲ್ಲಿ ಸಹಕಾರಿಯಾಗಿದೆ ಎಂದು ಸ್ಥಳಿಯರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!