ಶ್ರೀಲಂಕಾದಿಂದ ತಮಿಳುನಾಡಿಗೆ ನುಗ್ಗಿದ ಭಯೋತ್ಪಾದಕರು?: ಹೈ ಅಲರ್ಟ್

ಚೆನ್ನೈ: ಶ್ರೀಲಂಕಾದಿಂದ ತಮಿಳುನಾಡಿಗೆ ಭಯೋತ್ಪಾದಕರು ಒಳನುಗ್ಗಿರುವುದರ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದು, ತಮಿಳುನಾಡಿನಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. 

6 ಭಯೋತ್ಪಾದಕರು ಒಳನುಸುಳಿದ್ದಾರೆ ಎಂಬ ಗುಪ್ತಚರ ಇಲಾಖೆ ಮಾಹಿತಿಯನ್ನಾಧರಿಸಿ ಭದ್ರತಾ ಸಿಬ್ಬಂದಿಗಳ ನಿಯೋಜನೆಯನ್ನು ಹೆಚ್ಚುಗೊಳಿಸಲಾಗಿದೆ. 

ಕೊಯಂಬತ್ತೂರಿನ ಸಿಟಿ ಪೊಲೀಸರು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆ ಮಾಡಲು ಮನವಿ ಮಾಡಿದೆ. ಭಾರತಕ್ಕೆ ನುಸುಳಿರುವ ಭಯೋತ್ಪಾದಕರ ಗುಂಪಿನಲ್ಲಿಓರ್ವ ಪಾಕಿಸ್ತಾನಿ ಹಾಗೂ ಐವರು ಶ್ರೀಲಂಕಾದ ತಮಿಳು ಮುಸ್ಲಿಮರು  ಇದ್ದಾರೆ ಎಂದು ತಿಳಿದುಬಂದಿದ್ದು, ಧಾರ್ಮಿಕ ಮಹತ್ವವುಳ್ಳ ಕ್ಷೇತ್ರಗಳು, ಪ್ರವಾಸಿ ತಾಣಗಳು, ಜನಸಂದಣಿ ಹೆಚ್ಚಿರುವ ಪ್ರದೇಶ, ಪ್ರಮುಖ ರಾಜಕಾರಣಿಗಳು ಹಾಗೂ ಸಂಘಸಂಸ್ಥೆಗಳು ಇವರ ಟಾರ್ಗೆಟ್ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!