ಸರಕಾರ ಉಳಿಯಲು ಲೋಕಪಯೋಗಿ ಸಚಿವರಿಂದ ಟೆಂಪಲ್ ರನ್

ಶೃಂಗೇರಿ: ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಮಂಗಳವಾರ ಬೆಳಿಗ್ಗೆ ಇಲ್ಲಿನ ಶಾರದಾ ಮಠಕ್ಕೆ ಭೇಟಿ ನೀಡಿ, ಶಾರದೆಗೆ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ನರಸಿಂಹವನದ ಗುರುನಿವಾಸಕ್ಕೆ ತೆರಳಿ ಭಾರತೀತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರಭಾರತೀ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು.
ತೋರಣಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ 5 ಇಡುಗಾಯಿನ್ನು ಒಡೆದರು. ನಂತರ ಕಾಳಿಕಾಂಬ, ಮಲಹಾನೀಕಾರೇಶ್ವರ, ದುರ್ಗದೇವಸ್ಥಾನ, ಶಕ್ತಿಗಣಪತಿ, ಸುಬ್ರಹ್ಮಣ್ಯ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.
ಮೈತ್ರಿಸರ್ಕಾರ ಪತನದತ್ತ ಸಾಗುತ್ತಿರುವ ಬೆನ್ನಲ್ಲೆ ಎಚ್.ಡಿ.ರೇವಣ್ಣ ಅವರ ಶೃಂಗೇರಿ ಭೇಟಿ ಕುತೂಹಲ ಕೆರಳಿಸಿದೆ.
ಜೆಡಿಎಸ್ ಯುವ ಕ್ಷೇತ್ರಾಧ್ಯಕ್ಷ ಭರತ್ ಗಿಣಿಕಲ್ ಇದ್ದರು.

Leave a Reply

Your email address will not be published. Required fields are marked *

error: Content is protected !!