ಟ್ಯಾಕ್ಸಿ, ಅಟೋ ಚಾಲಕರು ಭಿಕ್ಷುಕರೇ…?
“ಜಗತ್ತೆಲ್ಲಾ ನಿದ್ರಿಸುತ್ತಿರುವಾಗ ತನ್ನ ಕಾಯಕವೇ ಕೈಲಾಸ”ಎಂದು ದುಡಿದು ತನಗರಿವೆಯಿಲ್ಲದೆ ಸರಕಾರಕ್ಕೆ ಕೋಟಿ ಕೋಟಿ ತೆರಿಗೆಯನ್ನು ಸಂಗ್ರಹಿಸಿಕೊಡುತ್ತಿದ್ದ ಟ್ಯಾಕ್ಸಿ ಮತ್ತು ಅಟೋ ಚಾಲಕರು ಈಗ ಕೋವಿಡ್ ನಿಂದ ಈಗ ಮರಣಶಯ್ಯೆಯಲ್ಲಿದ್ದರೂ ಸರಕಾರ ಸ್ಪಂದಿಸದಿರುವುದು ಸೋಜಿಗ ವೆನಿಸುತ್ತದೆ.
ಪ್ರತೀ ಚುನಾವಣೆಯಲ್ಲಿ ನಿಮಗೆ ಹಗಲು – ರಾತ್ರಿ ಯೆನ್ನದೆ ಚುನಾವಣಾ ಕೆಲಸ ಮಾಡುತ್ತಿರುವ ಚಾಲಕರು/ಮಾಲ್ಹಕರು ನಿಮಗೆ ಕಾಣದಿರುವುದು ನಗ್ನ ಸತ್ಯ. ಲಕ್ಷಾಂತರ ರೂಪಾಯಿ ರಸ್ತೆ ತೆರಿಗೆ, ಇನ್ಸೂರೆನ್ಸ್, GST ಕಟ್ಟಿ ದುಡಿಯುತ್ತಿರುವ ನಮಗೆ, ಸರಕಾರಗಳು ಕೊಟ್ಟ ಉಡುಗೊರೆ ಯಾದರೂ ಏನು?
99% ಟ್ಯಾಕ್ಸಿ ವಾಹನಗಳು ರಾಷ್ಟ್ರೀಯ ಬ್ಯಾಂಕು, ಸೊಸೈಟಿ, ಖಾಸಗಿ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲದಿಂದ ಪಡೆದ ವಾಹನಗಳಾಗಿವೆ. ಹಲವು ಉದ್ಯಮಗಳಿಗೆ ಸಬ್ಸೀಡಿ, 0% ಸಾಲ ಇನ್ನಿತರ ಹಲವು ಪ್ರಯೋಜನ ಕೊಡುವ ನೀವುಗಳು, ವಾರ್ಷಿಕ 750 ರಿಂದ 1000 ಕೋಟಿ ಆದಾಯ ಕೊಡುವ ನಮ್ಮ ಟ್ಯಾಕ್ಸಿ ಉದ್ಯಮಕ್ಕೆ ಇಂಥಾ ಆರ್ಥಿಕ ಸಂಕಷ್ಟ ಸಮಯದಲ್ಲಿ ನೀವು ಏನು ಕೊಟ್ಟಿದ್ದೀರಿ? ಬಹುಶಃ ನಿಮಗೆ ನಮ್ಮವರಿಂದ ಸಕಾಲಿಕವಾಗಿ ಸಿಗದ ಮಾಹಿತಿ ಕೊರತೆ ಇರಬಹುದು…!
ದೆಹಲಿ, ಆಂದ್ರ, ಕೇರಳ ಸರಕಾರಗಳು ಈಗಾಗಲೇ ಚಾಲಕರ ಪರಿಸ್ಥಿತಿಯನ್ನು ಮನಗಂಡು ಸಕಾಲಿಕವಾಗಿ ಪರಿಹಾರ ಘೋಷಿಸಿರುವುದು ಹೆಮ್ಮೆಯ ವಿಚಾರ.ಆದರೆ ಕರ್ನಾಟಕ ಸರಕಾರ ಇನ್ನೂ ಕಣ್ಣು ತೆರೆಯದಿರುವುದು ನೋವಿನ ಸಂಗತಿ. ಅದೇ ರೀತಿ ರಾಜಕೀಯ ಪ್ರಚಾರಕ್ಕಾಗಿ ಟ್ಯಾಕ್ಸಿಯನ್ನು ಬಳಸಿಕೊಳ್ಳುವ ರಾಜಕಾರಣಿಗಳು (ವಿರೋಧ ಪಕ್ಷವು ಸೇರಿ) ಸಹ ಜಾಣಕುರುಡು ಪ್ರದರ್ಶಿಸುವುದು ಮುಂದಿನ ದಿನಗಳಲ್ಲಿ ನಿಮಗೆ ದುಭಾರಿಯಾಗಬಹುದು…..
ಯಜಮಾನ ಆದವನು ಮನೆಯ ಎಲ್ಲಾ ಸದಸ್ಯರನ್ನು ಸಮಾನತೆಯಿಂದ ನೋಡುವುದು ಅವನ ಕರ್ತವ್ಯ ಹಾಗಾಗಿ ಸಂಕಷ್ಟದಲ್ಲಿರುವ ಟ್ಯಾಕ್ಸಿ ಉದ್ಯಮದವರಿಗೆ ರಕ್ಷಣೆ (ಆರ್ಥಿಕವಾಗಿ) ಕೊಡುವುದು ಸಹ ನಿಮ್ಮ ಜವಾಬ್ದಾರಿ ಎಂಬುದನ್ನು ಸರಕಾರಕ್ಕೆ ನೆನಪಿಸುತ್ತಿದ್ದೇವೆ.
ಕೊನೆಯದಾಗಿ ಚಾಲಕರು ಬೀದಿಗೆ ಬೀಳುವ/ಇಳಿಯುವ ಮೊದಲು ಸಂಬಂಧ ಪಟ್ಟವರು ಸೂಕ್ತವಾಗಿ ಸ್ಪಂದಿಸುತ್ತಾರೆ ಎಂಬ ನಂಬಿಕೆ ನಮ್ಮದು. ನಂಬಿಕೆ ಉಳಿಸಿಕೊಳ್ಳುವುದು ನಿಮ್ಮ ವಿವೇಚನೆಗೆ ….
ಜಯರಾಂ ಅಂಬೆಕಲ್ಲು,ಉಡುಪಿ.ಟ್ಯಾಕ್ಸಿ ಮತ್ತು ಅಟೋ ಚಾಲಕರ ಪರವಾಗಿ.
100% true words, this is our cab drivers and owners Situation….
Really very sad sir …
ಸರಕಾರ ಧ ಸವಲತು ನೀಡು ವಿಧಿ ಯಜಮಾನನ ಕರ್ತವ್ಯ ನಮ್ಮಮ್ಮ ಯಜಮಾನರು ನಮ್ಮನು ಅಲುವಾ ಯಜಮಾನನ ಒಂಧು ಕನ್ನೀಗೆ ತುಪಾ ಎನೋಧು ಕಣ್ಣೀಗೆ ಸುನ್ನಾ ಸ್ರುವ ಮಂತ್ರಿ ಗಲೆ ನಮ್ಮನು ಒಮ್ಮೆ ನೋಡಿ ಎಲ್ಲಧಿಧರೆ ಯೆಲ್ಲಾ ರಾಜಕೇಯ ಪಕ್ಷ ಗಲ್ಲಿಜ್ ನೇವ್ ವಿಧಿ ಕಾಳಿಸುತೇವ್ ಯೋಚಿಸಿ …………
ಖಂಡಿತವಾಗಿಯೂ ಸರ್,