ಉಡುಪಿ: ವಿದೇಶದಿಂದ ಬಂದ ಐವರಲ್ಲಿ ಕೊರೊನಾ ಸೋಂಕಿನ ಲಕ್ಷಣ
ಉಡುಪಿ: ಜಿಲ್ಲೆಯಲ್ಲಿ ಇಂದು ಐದು ಮಂದಿಗೆ ಕೊರೊನಾ ಲಕ್ಷಣ ಕಂಡುಬಂದಿದೆ. ವಿದೇಶದಿಂದ ಬಂದ ಐವರಲ್ಲಿ ಸೋಂಕಿನ ಲಕ್ಷಣ ಕಂಡು ಬಂದಿದ್ದು ಮೂರು ಪ್ರತ್ಯೇಕ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ.
ಐವರಲ್ಲಿ ಮೂವರಿಗೆ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವಿಶೇಷ ಘಟಕಕ್ಕೆ ದಾಖಲು ಮಾಡಲಾಗಿದೆ. ಓರ್ವನನ್ನು ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಆಸ್ಪತ್ರೆಗೆ, ಇನ್ನೊಬ್ಬನನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಯ ವಿಶೇಷ ನಿಗಾ ಘಟಕಕ್ಕೆ ದಾಖಲು ಮಾಡಲಾಗಿದೆ. ದುಬೈ-ಕತಾರ್, ಅಬುಧಾಬಿ- ಬೆಹರೇನ್ ನಿಂದ ಬಂದ ಐದು ಮಂದಿಯಲ್ಲಿ ಕೊರೊನಾದ ಲಕ್ಷಣಗಳು ಕಂಡು ಬಂದಿದೆ .
ಜಿಲ್ಲೆಯಲ್ಲಿ ಸದ್ಯ ಶಂಕಿತರ ಸಂಖ್ಯೆ 11ಕ್ಕೆ ಏರಿದ್ದು 11 ಮಂದಿಯ ವೈದ್ಯಕೀಯ ವರದಿಗಳೂ ಬರಬೇಕಾಗಿದೆ ಎಂದು ಡಿಹೆಚ್‍ಒ ಡಾ. ಸುಧೀರ್ ಚಂದ್ರ ಮಾಹಿತಿ ನೀಡಿದ್ದಾರೆ.