ಉಡುಪಿಗೆ ಕೋರೋನಾ ಸೋಂಕಿನ ಭಯ ಸದ್ಯಕ್ಕಿಲ್ಲ: ಜಿಲ್ಲಾಧಿಕಾರಿ
ಉಡುಪಿ: (ಉಡುಪಿ ಟೈಮ್ಸ್ ವರದಿ)ವಿದೇಶದಿಂದ ಬಂದ ಎಲ್ಲರ ಹೋಂ ಕ್ವಾರಂಟೈನ್ ಅವಧಿ ಮುಕ್ತಾಯವಾಗಿದ್ದು, ಅವರಲ್ಲಿ ಯಾರಿಗೂ ಯಾವುದೇ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ಹಾಗಾಗಿ ವಿದೇಶಗಳಿಂದ ಬಂದವರಿಂದ ನಮ್ಮ ಜಿಲ್ಲೆಗೆ ಕೋರೋನಾ ಭಯ ಸದ್ಯಕ್ಕಿಲ್ಲ ಎಂಬುದಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ ಎರಡು ಸಾವಿರಕ್ಕೂ ಅಧಿಕ ಮಂದಿ ವಿದೇಶಗಳಿಂದ ಬಂದಿದ್ದರು ,ಪಾಸಿಟಿವ್ ಬಂದ ಮೂವರ ನಿಕಟವರ್ತಿಗಳು ಐಸೋಲೇಶನ್ ವಾರ್ಡ್ ನಲ್ಲಿದ್ದಾರೆ ,ಸದ್ಯ ಯಾರಲ್ಲೂ ರೋಗ ಲಕ್ಷಣಗಳು ಕಂಡುಬಂದಿಲ್ಲ.
ಪಾಸಿಟಿವ್ ಬಂದ ಮೂವರ ಪ್ರಾಥಮಿಕ ಸಂಪರ್ಕ ಇದ್ದ ವ್ಯಕ್ತಿಗಳ ವರದಿ ನೆಗೆಟಿವ್ ಬಂದಿದೆ ಹಾಗಾಗಿ ಸಾರ್ವಜನಿಕರು ಆತಂಕ ಪಡಬೇಕಾದ ಅಗತ್ಯವಿಲ್ಲ, ಲಾಕ್ ಡೌನ್ ಅವಧಿ ಮುಗಿಯುವವರೆಗೆ ಶಿಸ್ತು ಸಂಯಮ ಪಾಲಿಸಬೇಕಾಗಿ ಕೇಳಿಕೊಂಡರು.
ಬೆಳಿಗ್ಗೆ7 ರಿಂದ 11:30 ರವರೆಗೆ ಅಗತ್ಯ ವಸ್ತು ಖರೀದಿಗೆ ಮಾತ್ರ ಅವಕಾಶ, ಬೇಕಾಬಿಟ್ಟಿ ತಿರುಗುವುದು ಕಂಡು ಬಂದರೆ ಕಠಿಣ ಕ್ರಮ ಜರಗಿಸಲಾಗುವುದು ಎಂದರು. ಸ್ವಲ್ಪ ನಿರಾಳವಾಗಿದೆ, ಓಡಾಡಿಕೊಂಡು ಬರೋಣ ಅಂದ್ರೆ ವಾಹನ ಜಪ್ತಿ ಮಾಡ್ತೇವೆ ಎಂಬುದಾಗಿ ಎಚ್ಚರಿಸಿದರು.
ಪಾಸಿಟಿವ್ ಬಂದ ಕಾರ್ಕಳದ ಮಹಿಳೆಯ ಜೊತೆ ಜಿಲ್ಲೆಯ 33 ಮಂದಿ ಪ್ರಯಾಣ ಮಾಡಿದ್ದರು, ಎಲ್ಲಾ 33 ಮಂದಿ ಆರೋಗ್ಯ ತಪಾಸಣೆ ಮಾಡಿದ್ದೇವೆ, ಎಲ್ಲರೂ ಆರಾಮಾಗಿದ್ದಾರೆ, ದೆಹಲಿ ಸಂಪರ್ಕದಲ್ಲಿದ್ದ ಎಲ್ಲಾ 16 ಮಂದಿ ಆರೋಗ್ಯ ತಪಾಸಣೆ ಮಾಡಲಾಗಿದೆ ,ಎಲ್ಲರ ಆರೋಗ್ಯ ಸ್ಥಿರವಾಗಿದೆ ಹೋಂ ಕ್ವಾರಂಟೈನ್ ನಲ್ಲಿದ್ದಾರೆ. ಎಂಬುದಾಗಿ ತಿಳಿಸಿದರು.
ಲಾಕ್ ಡೌನ್ ಅವಧಿಯಲ್ಲಿ ಸಾಕಷ್ಟು ದಾನಿಗಳು ನೆರವಿಗೆ ಧಾವಿಸಿದ್ದಾರೆ, ಊಟೋಪಚಾರ ಮತ್ತು ದಿನಸಿಯನ್ನು ದಾನಿಗಳಿಂದ ನಿರ್ವಹಿಸಲಾಗಿದೆ , ಈವರೆಗೆ ಸರಕಾರದ ಯಾವುದೇ ಅನುದಾನ ಬಳಸಿಲ್ಲಎಂಬುದಾಗಿ ಕೊಡುಗೆ ನೀಡಿದ ದಾನಿಗಳಿಗೆ ಧನ್ಯವಾದ ಅರ್ಪಿಸಿದರು.
Good luck. God bless you and your team.