ಲಾಕ್ ಡೌನ್ ನಂತರ ಮದ್ಯ ಪ್ರಿಯರಿಗೆ ಸಿಹಿ ಸುದ್ದಿ!
ಬೆಂಗಳೂರು: ಏಪ್ರಿಲ್ 14 ರ ನಂತರ ಲಾಕ್ ಡೌನ್ ಮತ್ತೆ ಮುಂದುವರಿಯುತ್ತದೆಂಬ ಹಲವರ ಚಿಂತೆಯ ನಡುವೆ ಕುಡುಕರಿಗೆ ಮಾತ್ರ ಸಿಹಿ ಸುದ್ದಿ ಸಿಗುವ ಲಕ್ಷಣ ಬಹುತೇಕ ಖಚಿತಾವಾಗುತ್ತಿದೆ.
ಕರ್ನಾಟಕ ಸರಕಾರದ ಆದಾಯಕ್ಕೆ ಬಹುತೇಕ ಹೊಡೆತ ಬಿದ್ದಿರುವ ಮದ್ಯ ನಿಷೇಧವನ್ನು ತೆರವುಗೊಳಿಸಲು ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಧಾರಿಸಿದ್ದಾರೆಂಬ ಮಾಹಿತಿ ಹೊರ ಬಿದ್ದಿದೆ.
ಮದ್ಯ ಮಾರಾಟ ನಿಷೇಧ ತೆರವುಗೊಳಿಸುವ ಬಗ್ಗೆ ಸರಕಾರವು ಉನ್ನತ ಮಟ್ಟದ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಶೀಘ್ರದಲ್ಲಿ ಅಧಿಕೃತ ಆದೇಶ ಹೊರ ಬೀಳುವ ನೀರಿಕ್ಷೆ ಇದೆ.
ಮದ್ಯ ಮಾರಾಟದ ಎಂಎಸ್‌ಐಎಲ್, ಎಂಆರ್‌ಪಿ ಅಂಗಡಿಯಲ್ಲಿ ಸಾಮಾಜಿಕ ಅಂತರ ಕಾಪಾಡಿ ಮದ್ಯ ಮಾರಾಟ ಮಾಡಲು ನಿರ್ಧಾರ ತೆಗೆದು ಕೊಂಡಿದ್ದಾರೆಂಬ ಮಾಹಿತಿ “ಉಡುಪಿ ಟೈಮ್ಸ್”ಗೆ ಲಭ್ಯವಾಗಿದೆ.