ನವಚೈತನ್ಯ ಯುವಕ ಮಂಡಲ ಹಾಗೂ ನೆಹರು ಯುವ ಕೇಂದ್ರ ವತಿಯಿಂದ ಸ್ವಚ್ಚ್ ಭಾರತ್

ಉಡುಪಿ:ನವಚೈತನ್ಯ ಯುವಕ ಮಂಡಲ ರಿ. ಮೂಡುಪೆರಂಪಳ್ಳಿ  ಹಾಗೂ ನೆಹರು ಯುವ  ಕೇಂದ್ರ ಉಡುಪಿ ಇವರ ವತಿಯಿಂದ ಮೂಡುಪೆರಂಪಳ್ಳಿ ವಾರ್ಡ್ ನ , ಅಂಬಡೆಬೆಟ್ಟು ರಸ್ತೆಯ ಇಕ್ಕೆಲಗಳಲ್ಲಿ ಬಿದ್ದ ಕಸವನ್ನು ತೆಗೆದು ಸ್ವಚ್ಛಗೊಳಿಸಲಾಯಿತು .

ತೆಗದ ಕಸವನ್ನು ನಗರಸಬೆಯ ವಾಹನದಲ್ಲಿ ತುಂಬಿಸಿ ಸಾಗಿಸಲಾಯಿತು ತದನಂತರ ಅಲ್ಲಿ ಅಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ   ಪೆರಂಪಳ್ಳಿಯ ನಾಗರಿಕರಲ್ಲಿ ಕಳಕಳಿಯ ವಿನಂತಿರಸ್ತೆ ಬದಿಯಲ್ಲಿ ಅಥವಾ ಎಲ್ಲೆಂದರಲ್ಲಿ ಕಸ ಎಸೆದು ದೇಶದ್ರೋಹಿಗಳಾಗಬೇಡಿ, ಈ ದೇಶ ನಮ್ಮದು ಮಾತ್ರ ಅಲ್ಲ ನಿಮ್ಮದು ಕೂಡ ಅದನ್ನು ಮರೆಯಬೇಡಿ ಸ್ವಚ್ಛ ಬಾರತ ನಿರ್ಮಾಣಕ್ಕೆ ಕೈಜೋಡಿಸೋಣ. ಇದೇ ದೇವರು ಮೆಚ್ಚುವ ಕೆಲಸ ರಸ್ತೆ ಬದಿಯಲ್ಲಿ ಕಸ ಎಸೆದು‌ ಜನರ ತಾಳ್ಮೆ ‌ಕೆಡಿಸಿ ತೊಂದರೆ ಮಾಡಿಕೊಳ್ಳಬೇಡಿ, ಈ ರೀತಿ ಬರೆದು ಸಂಘದ ವತಿಯಿಂದ ಬ್ಯಾನರ್ ಅವಳಡಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅದ್ಯಕ್ಷರಾದ ಕೀರ್ತನ್ ಕುಮಾರ್, ಶಂಕರ್ ಕುಲಾಲ್, ವಿಜಯ,ರವೀಂದ್ರ, ಸತೀಶ್ ಟಿ,ಸುರೇಂದ್ರ, ಮನೀಷ್,ಸುಕೇಶ್ ,ಸುರೇಶ್, ಸಂದೀಪ್, ಹಾಗೂ ಸಂಘದ ಎಲ್ಲಾ ಸದಸ್ಯರು ಮತ್ತು ಸಾರ್ವಜನಿಕರು ಭಾಗವಹಿಸಿದರು ,

Leave a Reply

Your email address will not be published. Required fields are marked *

error: Content is protected !!