ಶಿರ್ವ ವ್ಯಕ್ತಿಗೆ ಶಂಕಿತ ಕೊರೋನಾ ಸೋಂಕು: ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ
ಉಡುಪಿ: ಶಿರ್ವ ಮೂಲದ ವ್ಯಕ್ತಿಯೊರ್ವರಿಗೆ ಶಂಕಿತ ಸೋಂಕು ಲಕ್ಷಣಗಳು ಕಂಡು ಬಂದಿದ್ದು, ಈ ವ್ಯಕ್ತಿಯನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಶಂಕಿತ ವ್ಯಕ್ತಿಯನ್ನು ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಜಿಲ್ಲಾಸ್ಪತ್ರೆಯ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.
ಜಪಾನ್ ಹಡಗಿನಲ್ಲಿ ಉದ್ಯೋಗದಲ್ಲಿದ್ದ ಇವರು ರಜೆ ನಿಮಿತ್ತ ಇತ್ತೀಚೆಗೆ ಶಿರ್ವದ ತಮ್ಮ ಮನೆಗೆ ಬಂದಿದ್ದರು. ನಿನ್ನೆ ರಾತ್ರಿಯಿಂದ ಆರೋಗ್ಯದಲ್ಲಿ ಏರುಪೇರು ಆದ ಪರಿಣಾಮ ಇಂದು ಚಿಕಿತ್ಸೆಗೆ ಬಂದಿದ್ದರು. ಇವರಿಗೆ ಶಂಕಿತ ಕೊರೋನಾ ಸೋಂಕು ಲಕ್ಷಣಗಳು ಕಂಡು ಬಂದ ಹಿನ್ನೆಲೆ ತೀವ್ರ ನಿಗಾವಹಿಸಲಾಗಿದೆ. ವ್ಯಕ್ತಿಯ ರಕ್ತದ ಮಾದರಿ ಹಾಗೂ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಸಲಾಗಿದ್ದು, ವರದಿ ಬಂದ ಬಳಿಕ ಶಂಕಿತ ಕೊರೋನಾ ಸೋಂಕು ಲಕ್ಷಣ ಸ್ಪಷ್ಟಗೊಳ್ಳಲಿದೆ.
ಇಂದು ಬೆಳಿಗ್ಗೆ ಮಣಿಪಾಲ ಕೆ ಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಮೂವರು ವಿದ್ಯಾರ್ಥಿಗಳಲ್ಲಿ ಶಂಕಿತ ಸೋಂಕು ಲಕ್ಷಣಗಳು ಕಂಡುಬಂದಿತ್ತು. ಅದರಲ್ಲಿ ಇಬ್ಬರಿಗೆ ಕೊರೋನಾ ಸೊಂಕು ಇಲ್ಲ ಎಂದು ರಕ್ತ ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಇನ್ನೋರ್ವ ವಿದ್ಯಾರ್ಥಿಯ ರಕ್ತ ಪರೀಕ್ಷೆ ವರದಿ ನಾಳೆ ಬರಲಿದೆಂದು ಡಿಎಚ್‌ಒ ತಿಳಿಸಿದ್ದಾರೆ.
I benefit from perusing your web site. Appreciate it!