ಮಣಿಪಾಲ : ಆರ್ಥಿಕ ಅಡಚಣೆ ಕ್ಯಾಬ್ ಮಾಲಕ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ

ಮಣಿಪಾಲ : ಕ್ಯಾಬ್  ಮಾಲಕನೊರ್ವ ಆರ್ಥಿಕ ಅಡಚಣೆಯಿಂದ ಮನನೊಂದ   ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.  ದಶರಥ ನಗರದ ನಿವಾಸಿ ನವೀನ್ ಭಕ್ತ (35) ತನ್ನ ತಂದೆಯೊಂದಿಗೆ ಟ್ರಾವೆಲಿಂಗ್ ವ್ಯವಹಾರ ನೋಡಿಕೊಳ್ಳುತ್ತಿದ್ದ.  ಆರ್ಥಿಕ ಅಡಚಣೆಯಿಂದಾಗಿ ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ ನೋಟ್ ಬರೆದಿಟ್ಟು ಬುಧವಾರ ರಾತ್ರಿ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬುಧವಾರ ರಾತ್ರಿ ಊಟ ಮಾಡಿ ಮಲಗಿದವ ಇಂದು ಬೆಳಿಗ್ಗೆ ಮನೆಯಿಂದ ಹೊರ ಬರದಾಗ, ಭಕ್ತನ ತಾಯಿ ಆತನ ರೂಮ್ ಗೆ  ಹೋಗಿ ನೋಡಿದಾಗ ಫ್ಯಾನ್ ಗೆ ಹ  ನೇಣು ಬೀಗಿ ಆತ್ಮಹತ್ಯೆ ಮಾಡಿಕೊಂಡಿದ್ದ.  ಮಣಿಪಾಲ ಮಹಾಲಸ ಟ್ರಾವೆಲ್ಸ್ ಎಂಬ ಹೆಸರಿನಲ್ಲಿ ಟೆಂಪೋ ,ಕಾರುಗಳನ್ನು ಬಾಡಿಗೆಗೆ ನೀಡುತ್ತಿದ್ದ ನವೀನನಿಗೆ  ಮದುವೆಯಾಗಿದ್ದು ಆಕೆಯೊಂದಿಗೆ ವಿಚ್ಛೇದನಕ್ಕೆ ಅರ್ಜಿಯನ್ನು ಕೂಡ ಸಲ್ಲಿಸಿದ್ದ.

ಈ ನಡುವೆ  ಮುಂಬಯಿಯ ಮಹಿಳೆಯ ಜೊತೆ ಪರಿಚಯವಾಗಿತ್ತು. ಈಕೆ  ಭಕ್ತನ ಹಣವನ್ನೆಲ್ಲ ಲಪಟಾಯಿಸಿ ಮೋಸ ಮಾಡಿದ್ದಾಗಿ ಆತ್ಮಹತ್ಯೆಗೂ ಮುನ್ನ ಬರೆದ ತಿಳಿಸಿದ್ದಾನೆ.

ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!