ವಿಸ್ಮಯ ರೀತಿಯಲ್ಲಿ ಕಡಲ ತೀರಕ್ಕೆ ಬಂತು ನಾರಾಯಣ ಗುರುಗಳ ಪ್ರತಿಮೆ!
ಕೇರಳ: (ಉಡುಪಿ ಟೈಮ್ಸ್ ವರದಿ) ರಾಜ್ಯದ ತ್ರಿಕನಪುರ ಕಡಲ ತೀರದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಧ್ಯಾನದಲ್ಲಿ ಕುಳಿತಿರುವ ಪ್ರತಿಮೆ ಪ್ರತ್ಯಕ್ಷವಾಗಿದೆ.
ಕಡಲ ತೀರದಲ್ಲಿ ಮರಳಿನಲ್ಲಿ ಸ್ವಲ್ಪ ಹುದುಗಿ ಹೋದ ಪ್ರತಿಮೆ ಸ್ವಲ್ಪ ಭಗ್ನ ಗೊಂಡ ಸ್ಥಿತಿಯಲ್ಲಿ ಕಂಡು ಬಂದಿದೆ. ನೋಡಲು ಅದ್ಭುತವಾದ ಬ್ರಹ್ಮ ಶ್ರೀ ನಾರಾಯಣ ಗುರುದೇವರ ಮೂರ್ತಿ ನೋಡುಗರನ್ನು ಅಚ್ಚರಿ ಮೂಡಿಸುತ್ತಿದೆ.
ಒಬ್ಬ ಮನುಷ್ಯ ನೀರಿನಲ್ಲಿ ಧ್ಯಾನ ಮಾಡುವ ರೀತಿಯಲ್ಲಿ ಕಾಣುವುದು, ಚೈತನ್ಯ ತುಂಬಿದ ಕಣ್ಣುಗಳು ಪ್ರಕಾಶಮಾನವಾದ ಮುಖ, ಸಮುದ್ರದ ಅಲೆ ಎಷ್ಟು ಬಡಿದರೂ ಸ್ವಲ್ಪವೂ ಅಲೂಗಾಡದೆ ಮರಳಿನ ಒಳಗೆ ಹುದುಗಿ ಹೋಗಿರುವ ಮೂರ್ತಿ ನೋಡುಗರಲ್ಲಿ ಭಕ್ತಿ ಭಾವ ಮೂಡಿಸುತ್ತಿದೆ.
ನಾರಾಯಣ ಗುರುದೇವರ ಮೂರ್ತಿಯಲ್ಲಿ ಐಶ್ವರ್ಯ ಮತ್ತು ಚೈತನ್ಯ ತುಂಬಿದ್ದು, ಇದನ್ನು ನೋಡಲು ಜನರು ಸಮುದ್ರ ತೀರಕ್ಕೆ ಸಮರೋಪಾದಿಯಲ್ಲಿ ಬರುತ್ತಿದ್ದಾರೆ. ಇದು ಭಗ್ನ ಗೊಂಡ ಪ್ರತಿಮೆಯೇ ಅಥವಾ ವಿಸರ್ಜನೆ ಮಾಡಿದ ಪ್ರತಿಮೆಯೆ ಜನರಲ್ಲಿ ಸಂಶಯ ಮೂಡಿಸುತ್ತಿದೆಂದು ಸ್ಥಳೀಯರು ತಿಳಿಸಿದ್ದಾರೆ.