ರಾಜ್ಯ ಮಟ್ಟದ ಶಾಲಾ ಒಲಿಂಪಿಕ್ ಕ್ರೀಡಾಕೂಟ- ಉಡುಪಿಯ ಅಥ್ಲೇಟ್ಸ್ ತಂಡಕ್ಕೆ 6 ಪದಕ

ಉಡುಪಿ – ಬೆಂಗಳೂರಿನ ಸಂತ ಜಾನ್ ಮೆಡಿಕಲ್ ಕಾಲೇಜಿನ ಕ್ರೀಡಾಂಗಣದಲ್ಲಿ ಜರುಗಿದ 12 ನೇ ರಾಜ್ಯ ಮಟ್ಟದ ಶಾಲಾ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಉಡುಪಿಯ ಯುನೈಟೆಡ್ ಅಥ್ಲೇಟ್ಸ್ ತಂಡದ ಸ್ಪರ್ಧಿಗಳು 3 ಚಿನ್ನ 2 ಬೆಳ್ಳಿ ಮತ್ತು 1 ಕಂಚಿನ ಪದಕವನ್ನು ಗೆದ್ದಿದ್ದಾರೆ.

 

 

 

 

14 ರ ವಯೋಮಾನದ  100 ಮೀ ನಲ್ಲಿ ಸಾನಿಕಾ ಸುಭಾಷ್ ಬಂಗೇರ (ಚಿನ್ನ ) , 12 ರ ವಯೋಮಾನದ ಶಾಟ್ ಪುಟ್ ನಲ್ಲಿ ಅನುರಾಗ್ (ಚಿನ್ನ) , ಲಾಂಗ್ ಜಂಪ್ ನಲ್ಲಿ ಅವ್ನಿ ಗಣೇಶ್ (ಚಿನ್ನ ) ಮತ್ತು 14 ರ ವಯೋಮಾನದ ಲಾಂಗ್ ಜಂಪ್ ನಲ್ಲಿ ಅನ್ವಿತಾ ಕೊಡವೂರ್ (ಬೆಳ್ಳಿ) , 16 ರ ವಯೋಮಾನದ ಸಾಜನ್(ಚಿನ್ನ ) ಮತ್ತು 14 ರ ವಯೋಮಾನದ 100 ಮೀ ನಲ್ಲಿ ಭೂಮಿ ಶೆಟ್ಟಿ (ಕಂಚು) ಪದಕ ಗೆದ್ದಿದ್ದಾರೆ.

ಅಥ್ಲೇಟ್ ಶಾಲಿನಿ ರಾಜೇಶ್ ಶೆಟ್ಟಿ ಯವರಿಂದ  ಪದಕ ಗೆದ್ದ ಉಡುಪಿಯ ಯುನೈಟೆಡ್ ತಂಡದ ಸ್ಪರ್ಧಾಳುಗಳು ತರಬೇತಿ ಪಡೆದುಕೊಂಡಿದ್ದರು .

Leave a Reply

Your email address will not be published. Required fields are marked *

error: Content is protected !!