ಜಿಲ್ಲೆಯಲ್ಲಿ ಮರಳುಗಾರಿಕೆಗೆ ರಾಜ್ಯ ಸರ್ಕಾರದಿಂದ ಅನುಮತಿ: ರಘುಪತಿ ಭಟ್

ಉಡುಪಿ : ಹಲವು ಸಮಯಗಳಿಂದ ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆ ಸ್ಥಗಿತಗೊಂಡಿದ್ದು ಪುನರ್ ಆರಂಭಿಸುವಂತೆ ಹಾಗೂ ಮಳೆಗಾಲದಲ್ಲಿ ಜೂನ್ ನಿಂದ ಸಪ್ಟೆಂಬರ್ ತಿಂಗಳ ವರೆಗಿನ ನಿಷೇಧವನ್ನು ಪುನರ್ ಪರಿಶೀಲಿಸುವಂತೆ ಉಡುಪಿ ಶಾಸಕರಾದ ಶ್ರೀ ಕೆ ರಘುಪತಿ ಭಟ್ ಇವರು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಆಗಸ್ಟ್ 1 ರಿಂದ ಮರಳುಗಾರಿಕೆ ಪ್ರಾರಂಭಿಸಲು ಅನುಮತಿ ನೀಡುವಂತೆ ಕೋರಿದ್ಧರು

ಅದರಂತೆ ಶಾಸಕರ ಮನವಿಗೆ ತಕ್ಷಣ ಸ್ಪಂದಿಸಿದ ಮಾನ್ಯ ಮುಖ್ಯಮಂತ್ರಿಗಳು ಮಾನ್ಯ ಶಾಸಕರ ಮನವಿಯನ್ನು ಪುರಸ್ಕರಿಸಿ ಉಡುಪಿ ಜಿಲ್ಲೆಯಲ್ಲಿ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಮೀನುಗಾರಿಕೆ ನಿಷೇಧ ಇರುವುದರಿಂದ ಆ ಸಮಯದವರೆಗೆ ಮಾತ್ರ ಮರಳುಗಾರಿಕೆ ನಿಷೇಧಿಸಿ ಆಗಸ್ಟ್ ತಿಂಗಳಿನಿಂದ ಮರಳುಗಾರಿಕೆ ಆರಂಭಿಸಲು ಸಿ ಆರ್ ಜಡ್ ಕ್ಲಿಯರೆನ್ಸ್ ನೀಡಲಾದ ಸರಕಾರದ ಪತ್ರದಲ್ಲಿ ವಿಧಿಸಿರುವ ಹೆಚ್ಚುವರಿ ಶರತ್ತನ್ನು ಮಾರ್ಪಾಡುಗೊಳಿಸಿ ಮೀನುಗಾರಿಕಾ ನಿಷೇಧದ ಅವಧಿಯಾದ ಜೂನ್ 1 ರಿಂದ ಜುಲೈ 31 ರ ವರೆಗೆ ಮಾತ್ರ ಮರಳುಗಾರಿಕೆ ಯನ್ನು ನಿಷೇಧಿಸಿ ಆಗಸ್ಟ್ ನಿಂದ ಮರಳುಗಾರಿಕೆ ಯನ್ನು ಆರಂಭಿಸಲು ಒಪ್ಪಿಗೆ ಸೂಚಿಸಿರುವುದರಿಂದ ತಕ್ಷಣ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳು 7 ಮಂದಿ ಸದಸ್ಯರ ಸಮಿತಿಯ ಸಭೆಯನ್ನು ತಕ್ಷಣ ಕರೆದು ಮರಳುಗಾರಿಕೆಗೆ ಪರವಾನಿಗೆಯನ್ನು ಪಡೆದಿರುವವರಿಗೆ ತಕ್ಷಣ ಪರವಾನಿಗೆ ನೀಡಿ ತುರ್ತಾಗಿ ಮರಳುಗಾರಿಕೆಯನ್ನು ಆರಂಭಿಸುವಂತೆ ಉಡುಪಿ ಶಾಸಕರಾದ ಶ್ರೀ ಕೆ ರಘುಪತಿ ಭಟ್ ಇವರು ಜಿಲ್ಲಾಧಿಕಾರಿಯವರನ್ನು ಆಗ್ರಹಿಸಿದರು

1 thought on “ಜಿಲ್ಲೆಯಲ್ಲಿ ಮರಳುಗಾರಿಕೆಗೆ ರಾಜ್ಯ ಸರ್ಕಾರದಿಂದ ಅನುಮತಿ: ರಘುಪತಿ ಭಟ್

  1. ಮತ್ತು ಯಾರನ್ನು ಕಾಯುತ್ತಿದ್ದಿರಿ ಮೋದಿಯನ್ನಾ ಸುರು ಮಾಡಿ ರಘುಪತಿ ಭಟ್ರೇ ಚುನಾವಣೆ ನಡೆದು 14 ತಿಂಗಳು ಮುಗಿದಿದೆ ಉಡುಪಿಗೆ ಮರಳು ಬಂದ್ದಿಲ್ಲm

Leave a Reply

Your email address will not be published. Required fields are marked *

error: Content is protected !!