ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್

73 ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಲಿ ಉಡುಪಿ ಶಾಖೆಯ ವತಿಯಿಂದ ಬುದ್ದಿಮಾಂದ್ಯ ಮಕ್ಕಳ ಶಾಲೆಯಾದ ಆಶಾ ನಿಲಯದಲ್ಲಿ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಸಮಾರಂಭದ ಮುಖ್ಯ ಅತಿಥಿಯಾಗಿ ಫಾದರ್ ವಲೇರಿಯನ್ ಮೆಂಡೋನ್ಸಾ ಧರ್ಮ ಗುರುಗಳು,ಮದರ್ ಆಫ್ ಸಾರೋಸ್ ಚರ್ಚ್ ಉಡುಪಿ ವಹಿಸಿದ್ದರು,ಅತಿಥಿಗಳಾಗಿ ಉಡುಪಿಯ ಯುವ ಉದ್ಯಮಿ.ವಿನೋದ್ ಕುಮಾರ್,ಸುದರ್ಶನ್ ರೆಸಿಡೆನ್ಸಿಯ ಸಂಘದ ಅಧ್ಯಕ್ಷರಾದ ವಿನ್ಸೆಂಟ್ ಫೆರ್ನಾಂಡಿಸ್, ಹಾಗೂ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಲಿ ಉಡುಪಿ ವಿಭಾಗದ ವಸೂಲಾತಿ ಅಧಿಕಾರಿಯಾದ ಅಜಯ್ ಕುಮಾರ್ ಮತ್ತು ಶಾಖಾ ವ್ಯವಸ್ಥಾಪಕರಾದ ಜೀವನ್ ಡಿ’ಸೋಜಾ ಉಪಸ್ತಿತರಿದ್ದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಫಾದರ್ ವಲೇರಿಯನ್ ಮೆಂಡೋನ್ಸಾ ರವರು ಕಾರ್‍ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. “ಸೈಂಟ್ ಮಿಲಾಗ್ರಿಸ್ ಸಂಸ್ಥೆಯು ಪ್ರತಿ ವರ್ಷದಂತೆ ಈ ವರ್ಷವೂ ಸಾಮಾಜಿಕ ಕಾರ್‍ಯಕ್ರಮವನ್ನು ಹಮ್ಮಿಕೊಂಡು ಈ ಆಶಾನಿಲಯದ ಮಕ್ಕಳಿಗೋಸ್ಕರ ತಮ್ಮ ಅಮೂಲ್ಯ ಸಮಯದಲ್ಲಿ ಸ್ವಲ್ಪ ಸಮಯವನ್ನು ಈ ಮಕ್ಕಳೊಂದಿಗೆ ಹಂಚಿಕೊಂಡು ಹಾಗೂ ಸಂಸ್ಥೆ ಪರವಾಗಿ ಮಕ್ಕಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡಿ ಅವರ ಮನಸ್ಸನ್ನು ಸಂತೋಷಗೊಳಿಸುತ್ತಾರೆ. ಇದು ಒಂದು ಪುಣ್ಯದ ಕೆಲಸವೆಂದು ಅವರು ತಮ್ಮ ಸಂದೇಶದಲ್ಲಿ ಹೇಳಿದರು.

ಶಾಖಾ ವ್ಯವಸ್ಥಾಪಕರಾದ ಜೀವನ್ ಡಿ’ಸೋಜಾರವರು ಸಂಸ್ಥೆಯ ಬಗ್ಗೆ ವಿವರವನ್ನು ನೀಡುತ್ತಾ. ನಮ್ಮ ಸಂಸ್ಥೆ ಸತತವಾಗಿ ಮೂರು ವರ್ಷದಿಂದ ಈ ಸಂಸ್ಥೆಯಲ್ಲಿ ಕಾರ್‍ಯಕ್ರಮವನ್ನು ನೆರವೇರಿಸಿದ್ದೇವೆ. ಬಂದ ಆದಾಯದಲ್ಲಿ ನಮ್ಮ ಆಡಳಿತ ಮಂಡಳಿ ಇಂತಹ ಸೇವೆಯ ಮುಖಾಂತರ ಜನರ ನಂಬಿಕೆಗೆ ಪಾತ್ರರಾಗಿದೆ. ಇದು ಕೇವಲ ಉಡುಪಿ ಶಾಖೆಯಲ್ಲಿ ಮಾತ್ರವಲ್ಲದೆ ಎಲ್ಲಾ 96 ಶಾಖೆಗಳಲ್ಲಿ ಇಂತಹ ಕಾರ್‍ಯಕ್ರಮವನ್ನು ನೆರವೇರಿಸುತ್ತಿದ್ದೇವೆ .

ಶಾಲಾ ಮಕ್ಕಳು ತಮ್ಮ ಖುಷಿಯನ್ನು ತಮ್ಮ ನೃತ್ಯದ ಮುಖಾಂತರ ವ್ಯಕ್ತಪಡಿಸಿದರು.

ಮುಖ್ಯ ಅತಿಥಿ ಹಾಗೂ ಇತರ ಗಣ್ಯ ವ್ಯಕ್ತಿಗಳು ಮಕ್ಕಳಿಗೆ ಅಗತ್ಯ ವಸ್ತುಗಳಾದ ಸೋಪ್, ಟೂತ್‌ಬ್ರಶ್, ಟೂತ್ ಪೇಸ್ಟ್, ಸೋಪ್ ಕಂಟೈನರ್, ಬಾತ್ ಟವಲ್, ಬಿಸ್ಕೆಟ್ ಮತ್ತು ಜ್ಯೂಸ್ ಅನ್ನು ವಿತರಿಸಿದರು.

ಜಯವಿಜಯ್ ಮುಖ್ಯೊಪಾದ್ಯಾಯಿನಿ ಬಂದ ಎಲ್ಲಾ ಗಣ್ಯರಿಗೆ ಧನ್ಯವಾದ ಕೋರಿದರು.

Leave a Reply

Your email address will not be published. Required fields are marked *

error: Content is protected !!