ಕೊಲ್ಲೂರು ದೇವಸ್ಥಾನಕ್ಕೆ ಶ್ರೀಲಂಕಾ ಪ್ರಧಾನಿ ಭೇಟಿ : ಮಾಧ್ಯಮಕ್ಕೆ ಛಾಯಾಗ್ರಹಣ ನಿರ್ಬಂಧ

ಆಗಮನಕ್ಕೂ ಐದು ನಿಮಿಷ ಮೊದಲು ಮಾಧ್ಯಮಕ್ಕೆ ಜಿಲ್ಲಾಡಳಿತ ನೀಡಿದ ಪಾಸನ್ನು ರದ್ದುಗೊಳಿಸಿ, ಛಾಯಾಚಿತ್ರ ತೆಗೆಯದಂತೆ ನಿರ್ಬಂಧ ಹೇರಿದೆ.

ಜಿಲ್ಲೆಯ ಮೂರು ಮಂದಿ ಪತ್ರಿಕಾ ಛಾಯಾಗ್ರಾಹಕರಿಗೆ ಹಾಗೂ ಮೂರು ದ್ರಶ್ಯ ಮಾಧ್ಯಮದ ವಿಡಿಯೋ ಗ್ರಾಫರ್ ಜಿಲ್ಲಾಡಳಿತ ,ಪೊಲೀಸ್ ಇಲಾಖೆ ಅನುಮತಿ ನೀಡಿತ್ತು .

ಆದರೆ 11.30 ಸುಮಾರಿಗೆ ಜಿಲ್ಲಾಡಳಿತವು ಶ್ರೀಲಂಕಾ ಪ್ರಧಾನಿಯ ಖಾಸಗಿ  ಕಾರ್ಯಕ್ರಮವೆಂದು ಛಾಯಾಚಿತ್ರ ಮತ್ತು ವಿಡಿಯೋ ಚಿತ್ರೀಕರಣಕ್ಕೆ  ನಿರ್ಬಂಧ ಹೇರಿದರು.

ದೇವಳದ ಮುಂಭಾಗದಿಂದ ಛಾಯಾಚಿತ್ರ ತೆಗೆಯಲು ನಿಷೇಧಕ್ಕೆ ಪತ್ರಕರ್ತರು  ಪೊಲೀಸ್ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!