ಶ್ರೀ ಕೃಷ್ಣೋತ್ಸವ – 2019
ಕುಂದಾಪುರ:- ಇಂದು ಸೌರಮಾನದ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಅಂದರೆ ಕೃಷ್ಣ ಜನ್ಮಾಷ್ಟಮಿ.ದೇಶಾದ್ಯಂತ ಕೃಷ್ಣ ಜನ್ಮಾಷ್ಟಮಿಯನ್ನು ವೇಣುಗೋಪಾಲನ ಆರಾಧನೆಯಲ್ಲಿ ಅದ್ದೂರಿಯಾಗಿ ಮಾಡಿದ್ದು,ಪೊಡವಿಗೊಡೆಯ ಶ್ರೀಕೃಷ್ಣನೂರು ಉಡುಪಿಯಲ್ಲಿ ಪ್ರತಿವರ್ಷದಂತೆ ಅದ್ದೂರಿಯಾಗಿಯೇ ಜನ್ಮಾಷ್ಟಮಿಯನ್ನು ಜಿಲ್ಲೆಯ ಬಹುಭಾಗಗಳಲ್ಲಿ ಆಚರಿಸಲಾಯಿತು.
ಅಂತೇಯೇ ಕುಂದಾಪುರದ ಗೋಳಿಯಂಗಡಿಯಲ್ಲಿ ವಿಶ್ವ ಹಿಂದೂಪರಿಷದ್ & ಭಜರಂಗದಳ ಸತತ ಹತ್ತನೇ ವರ್ಷ ಕೃಷ್ಣೋತ್ಸವವನ್ನು ಬಹಳ ಅದ್ದೂರಿಯಿಂದ ಆಚರಿಸಿತು.ಬಣ್ಣ ಬಣ್ಣದ ಉಡುಗೆ ತೊಟ್ಟು ರಾಧಾ ಕೃಷ್ಣರು ಗೋಳಿಯಂಗಡಿಯ ಅಟಲ್ ಜೀ ಕಲಾವೇದಿಕೆಯಲ್ಲಿ ಪುಟ್ಟ ಹೆಜ್ಜೆಗಳನ್ನಿಡುತ್ತಿದ್ದರೆ ಭಗವಾತ್ ಭಕ್ತರು ಮಕ್ಕಳಲ್ಲೇ ದೇವರನ್ನು ಕಂಡ ಖುಷಿಯಲ್ಲಿದ್ದರು!
ವಿಶ್ವ ಹಿಂದೂಪರಿಷದ್ ಕುಂದಾಪುರ ಪ್ರಖಂಡದ ಅಧ್ಯಕ್ಷರಾದ ವೈ.ವಿಜಯ್ ಕುಮಾರ್ ಶೆಟ್ಟಿ ಗೋಳಿಯಂಗಡಿಯವರ ನೇತೃತ್ವದಲ್ಲಿ ನಡೆದ ಈ ವೈವಿಧ್ಯಮಯ ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ಮುದ್ದುರಾಧಾ,ಮುದ್ದು ಕೃಷ್ಣ ಸ್ಪರ್ಧೆಗಳು ಮಾತ್ರವಲ್ಲದೇ ಶಾಲಾ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕೃಷ್ಣೋತ್ಸವ ಸಮಿತಿಯಿಂದ ಬಹುಮಾನ ನೀಡಲಾಯಿತು.
ಇದೇ ವೇಳೆ ಶಿಕ್ಷಣ ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ ಪ್ರತಿಭೆಗಳಿಗೆ ಪ್ರಜ್ಞಾಯುವಕ ಮಂಡಲ ಗೋಳಿಯಂಗಡಿ ಇವರಿಂದ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.
ಕಾರ್ಯಕರ್ಮದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರಾದ ವೈ.ಬೋಜರಾಜ್ ಶೆಟ್ಟಿ, ಶ್ಯಾಮ ಆಚಾರ್ಯ,ಸುದರ್ಶನ್ ಶೆಟ್ಟಿ,ಸುದೀಪ್ ಶೆಟ್ಟಿ,ದಯಾನಂದ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.