ಉಡುಪಿ: ಶ್ರೀ ಈಶಪ್ರಿಯ ತೀರ್ಥರ ಅದ್ದೂರಿ ಪುರಪ್ರವೇಶ

ಉಡುಪಿ: ಉಡುಪಿಯ ನಾಡ ಹಬ್ಬ ಎಂದೇ ಪ್ರಖ್ಯಾತವಾದ ಪರ್ಯಾಯದ ಸರ್ವಜ್ಞ ಪೀಠರೋಹಣವಾಗುವ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಇಂದು ಮಧ್ಯಾಹ್ನ ಪುರಪ್ರವೇಶ ಅದ್ದೂರಿಯಾಗಿ ನಡೆಯಿತು .

ಪ್ರತಿ ಬಾರಿ ಪುರಪ್ರವೇಶ ಅಲಂಕೃತ ವಾಹನದಲ್ಲಿ ಬರುತ್ತಿದ್ದ ಭಾವೀ ಪರ್ಯಾಯ ಮಠಾಧೀಶರ ಮೆರವಣಿಗೆ ಸಾಗುತ್ತಿದ್ದರೆ ಈ ಬಾರಿ ಜೋಡುಕಟ್ಟೆಯಿಂದ ರಥಬೀದಿಯವರೆಗೆ ಶ್ರೀಪಾದರು ಕಾಲ್ನಡಿಗೆಯಲ್ಲೇ ಆಗಮಿಸಿದರು . ಹಿರಿಯ ವಿಶ್ವ ಪ್ರಿಯ ಸ್ವಾಮಿಗಳು ಕಲ್ಪನಾ ಚಿತ್ರ ಮಂದಿರದ ಸಮೀಪದ ನಾಗ ಬನದ ಬಳಿ ಮೆರವಣಿಗೆಯನ್ನ ವೀಕ್ಷಿಸಿ ತನ್ನ ಶಿಷ್ಯರ ನಮಸ್ಕಾರ ಸ್ವೀಕರಿಸಿ ಆಶೀರ್ವದಿಸಿದರು.
ಮೆರವಣಿಗೆಯಲ್ಲಿ , ಯಕ್ಷಗಾನ, ಹುಲಿವೇಷ. ಕಂಸಾಳೆ, ವಿವಿಧ ರಾಜ್ಯಗಳ ಸಂಸ್ಕೃತಿ ಬಿಂಬಿಸುವ ನ್ರತ್ಯ ಪ್ರಕಾರಗಳು ಜನರ ಕಣ್ಮನ ಸೆಳೆಯಿತು.

Leave a Reply

Your email address will not be published. Required fields are marked *

error: Content is protected !!