ಎಲೆ ಅಡಿಕೆ ಹಾಕಿ ಮೂರು ಪಕ್ಷಗಳಿಗೆ ಉಗಿಯುವ ಚಳುವಳಿ

ಶಿವಮೊಗ್ಗ: ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ, ಮೂರು ಪಕ್ಷಗಳು ಮೂರು ಬಿಟ್ಟು ರಾಜಕಾರಣ ಮಾಡುತ್ತಿವೆ ಎಂದು ಆರೋಪಿಸಿ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷದ ಪ್ರತಿಕೃತಿಗೆ ಎಲೆ ಅಡಿಕೆ ಹಾಕಿ ಉಗಿಯುವ ಚಳುವಳಿ ನಡೆಯಿತು.

ಶಿವಪ್ಪ ನಾಯಕ ಪ್ರತಿಮೆ ಮುಂದೆ ಮೂರು ಪಕ್ಷಗಳ ಪ್ರತಿಕೃತಿಗೆ ಉಗಿದು, ಬೆಂಕಿ ಹಚ್ಚಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ರೈತ ಸಂಘ, ಹಸಿರು ಸೇನೆ ರಾಜ್ಯ ಗೌರವಾಧ್ಯಕ್ಷ ಹೆಚ್. ಆರ್ ಬಸವರಾಜಪ್ಪ ಪ್ರತಿಪಕ್ಷದವರು ಆಪರೇಷನ್ ಮಾಡಿದರೆ , ಆಡಳಿತದಲ್ಲಿರುವವರು ಮರು ಆಪರೇಶನ್ ಮಾಡುತ್ತಿದ್ದಾರೆ. ಈ ಮೂಲಕ ಕರ್ನಾಟಕ ವಿಧಾನಸಭೆಯು ಘನತೆಯನ್ನು ಮಣ್ಣುಪಾಲು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಕಾರ್ಯದರ್ಶಿ ಕೆ. ರಾಘವೇಂದ್ರ, ರಾಜ್ಯ ಉಪಾಧ್ಯಕ್ಷ ಬಿ.ಎಂ. ಚಂದ್ರಪ್ಪ, ರಾಜು, ಜಗದೀಶ್ ರಾಮಚಂದ್ರಪ್ಪ , ಅರಬಿಳಚಿ ಈರಣ್ಣ ಮತ್ತಿತರರು ಪ್ರಮುಖರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!