ಗಣೇಶ ಚತುರ್ಥಿ ಹಬ್ಬಕ್ಕೆ ಕರಾವಳಿಗರಿಗೆ ವಿಶೇಷ ರೈಲು

ಕರಾವಳಿಯ ಜೈ ಭಾರ್ಗವ ಬಳಗದ ಮನವಿಗೆ ಪ್ರತಿಯಾಗಿ, ಉಡುಪಿ ಚಿಕ್ಕಮಗಳೂರು ಸಂಸದೆ ಕು. ಶೋಭಾ ಕರಂದ್ಲಾಜೆ ಅವರು ರೈಲ್ವೆ ಇಲಾಖೆಗೆ ಗಣೇಶ ಹಬ್ಬದ ಪ್ರಯುಕ್ತ ವಿಶೇಷ ರೈಲು ನೀಡುವಂತೆ ಬೇಡಿಕೆಗೆ ಸಲ್ಲಿಸಿದ್ದರು.

ಈ ಬೇಡಿಕೆಗೆ ಸ್ಪಂದಿಸಿದ ರೈಲ್ವೇ ಇಲಾಖೆ ಯಶವಂತಪುರ-ಮಂಗಳೂರು ವಿಶೇಷ ರೈಲಿನ ವೈವಸ್ಥೆಯನ್ನು ದಿನಾಂಕ: 30.08.19 ರಾತ್ರಿಗೆ ಮಾಡಿದ್ದು ಕರಾವಳಿ ಭಾಗದ ಪ್ರಯಾಣಿಕರು ಈ ರೈಲಿನ ಸದುಪಯೋಗ ಪಡೆಯುವಂತೆ ವಿನಂತಿ.

ಮಂಗಳೂರಿನ ಕುಲಶೇಖರ ಭಾಗದಲ್ಲಿ ಉಂಟಾದ ಭಾರಿ ಭೂ ಕುಸಿತದ ಪರಿಣಾಮ ರೈಲ್ವೆ ಹಳ್ಳಿಗಳು ಮುಚ್ಚಿದ್ದು, ಉಡುಪಿ – ಕಾರವಾರ ಭಾಗಕ್ಕೆ ರೈಲು ಸಂಚಾರ ಮೊಟಕಾಗಿರುವುದರಿಂದ ಮಂಗಳೂರು ಜಂಕ್ಷನ್ ತನಕ ಈ ಹೆಚ್ಚುವರಿ ವಿಶೇಷ ರೈಲು ಓಡುತ್ತದೆ.

Leave a Reply

Your email address will not be published. Required fields are marked *

error: Content is protected !!