ಸ್ಪೀಕರ್ ರಮೇಶ್ ಕುಮಾರ್ ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರದ ಏಜೆಂಟ್ : ಶೋಭಾ ಕರಂದ್ಲಾಜೆ

ಮೈಸೂರು: ಸ್ಪೀಕರ್ ರಮೇಶ್ ಕುಮಾರ್ ಕಾಂಗ್ರೆಸ್ ಹಾಗೂ ಸರ್ಕಾರ ಏಜೆಂಟ್ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು‌.

ಅವರು ಮೂರನೇ ಆಷಾಢ ಶುಕ್ರವಾರದಲ್ಲಿ‌ ಚಾಮುಂಡಿಬೆಟ್ಟದ ಮೆಟ್ಟಿಲು ಹತ್ತುವ ಮೂಲಕ ಚಾಮುಂಡೇಶ್ವರಿ ದೇವಾಲಯ ತಲುಪಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಶಾಸಕರು ರಾಜೀನಾಮೆ ಕೊಟ್ಟಾಗ ಸ್ಪೀಕರ್ ಅದನ್ನು ಪರಿಗಣಿಸಬೇಕು.ವಿನಾಕಾರಣ ತಡ ಮಾಡುವ ಮೂಲಕ ಸ್ಪೀಕರ್ ಕಾಂಗ್ರೆಸ್ ಹಾಗೂ ಸರ್ಕಾರಕ್ಕೆ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಶಾಸಕರೇನು ಚಿಕ್ಕ ಮಕ್ಕಳಲ್ಲ. ಅವರು ಮೂರನೇ ಕ್ಲಾಸ್ ಮಕ್ಕಳಲ್ಲ. ಅವರನ್ನ ಯಾರು  ಅಪಹರಿಸಲು  ಸಾಧ್ಯವಿಲ್ಲ. ಅವರೇ ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ. ಅವರೆ ಸ್ವತಃ ಸರ್ಕಾರದ ವಿರುದ್ಧ ದ್ವನಿ ಎತ್ತಿ ಬಂದಿರೋದು ಎಂದು ಶೋಭಾ ಕರಂದ್ಲಾಜೆ ಪ್ರತಿಪಾದಿಸಿದರು.

ನಾನು ಈವರೆಗೆ ಈ ರೀತಿ ತಾಯಿಗೆ ಯಾವ ಬೇಡಿಕೆ ಇಟ್ಟಿರಲಿಲ್ಲ. ರಾಜ್ಯದಲ್ಲಿ ಜನವಿರೋಧಿ ಶಾಸಕ ವಿರೋಧಿ ಸರ್ಕಾರ ನಿರ್ಮಾಣವಾಗಿದೆ. ಕಳೆದ ಒಂದು ವರ್ಷದಿಂದ ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದೆ. ಬರದಿಂದ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದೆ.  ಆದರೆ ಈ ಕಷ್ಟವನ್ನು ಸರ್ಕಾರ ಕೇಳುತ್ತಿಲ್ಲ. ಇಂತಹ ಸರ್ಕಾರವನ್ನು ತೊಲಗಿಸಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಬರಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕುಮಾರಸ್ವಾಮಿ ಮೊದಲಿಗೆ ಬಹುಮತ ಸಾಬೀತು ಮಾಡುವುದಾಗಿ ಪ್ರಸ್ತಾಪ ಮಾಡಿದ್ದರು. ಈಗ ಬಹುಮತ ಸಾಬೀತು ಮಾಡದೆ ಕಾಲಹರಣ ಮಾಡುತ್ತಿದ್ದಾರೆ. ಆದರೆ ಎಷ್ಟು ದಿನ ಈ ಡ್ರಾಮಾ ಮಾಡಲು ಸಾಧ್ಯ. ಸುಪ್ರೀಂ ಕೋರ್ಟ್ ಗು ಬೆಲೆ ಕೊಡ್ತಾ ಇಲ್ಲ.  ರಾಜ್ಯಪಾಲರಿಗು ಬೆಲೆ ಕೊಡುತ್ತಿಲ್ಲ ಎಂದು ಕಿಡಿಕಾರಿದರು.

Leave a Reply

Your email address will not be published. Required fields are marked *

error: Content is protected !!