ಸ್ಕೇಟಿಂಗ್ ಸಾಧನೆ ಚಿನ್ನ, ಬೆಳ್ಳಿ, ಕಂಚು ಪದಕ ಪಡೆದ ಉಡುಪಿಯ ಹಿಮರ್ಷ

 ಉಡುಪಿ: ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಷಿಯೇಷನ್ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಓಪನ್ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್‌ಶಿಪ್ 2019 ರಲ್ಲಿ,  ಉಡುಪಿಯ ಹಿಮರ್ಷ ಒಂದು ಸ್ವರ್ಣ, ಒಂದು ಬೆಳ್ಳಿ, ಒಂದು ಕಂಚು ಪದಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. 7 ರಿಂದ 9 ವರ್ಷದೊಳಗಿನವರ ಬಾಲಕಿಯರ ವಿಬಾಗದ ಸ್ಪರ್ದೆಯಲ್ಲಿ 500 ಮೀಟರ್ ರೋಡ್‌ರೇಸ್‌ನಲ್ಲಿ ಚಿನ್ನ, 500 ಮೀ ರಿಂಕ್ ರೇಸ್ ನಲ್ಲಿ ಕಂಚು, 1000 ಮೀ ರಿಂಕ್‌ರೇಸ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.

 ಉಡುಪಿಯ ಸೈಂಟ್ ಸಿಸಿಲಿ ಶಾಲೆಯ 2 ನೇ ತರಗತಿ ವಿದ್ಯಾರ್ಥಿನಿಯಾದ ಹಿಮರ್ಷ ಉಡುಪಿ ಆರೋಗ್ಯ ಇಲಾಖೆಯ ಸಿಬ್ಬಂದಿ ಸೆಲ್ವರಾಜ್ ಅವರ ಪುತ್ರಿ. ಅಂಬಲಪಾಡಿಯ ಲಕ್ಷ್ಮೀ ನಾರಾಯಣ ಉಪಾಧ್ಯಾಯರಿಂದ ತರಬೇತಿ ಪಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!