ಸಿಂಡಿಕೇಟ್ ಬ್ಯಾಂಕ್‌ನಿಂದ ಉಡುಪಿಯಲ್ಲಿ ಸಿಂಡ್ ಆಟೋ ಎಕ್ಸ್‌ಪೊ
ಉಡುಪಿ: ಮುಂಚೂಣಿಯ ರಾಷ್ಟ್ರೀಕೃತ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕ್ ಆಶ್ರಯದಲ್ಲಿ ಎರಡು ದಿನಗಳ ಸಿಂಡ್ ಆಟೋ ಎಕ್ಸ್‌ಪೊ ವಾಹನ ಸಾಲ ಮೇಳ ಅಕ್ಟೋಬರ್ 12 ಮತ್ತು 13 ರಂದು ನಡೆಯಲಿದೆ.
ಉಡುಪಿಯ ಎಂಜಿಎಂ ಮೈದಾನದಲ್ಲಿ ನಡೆಯುವ ಸಿಂಡ್ ಆಟೋ ಎಕ್ಸ್‌ಪೋವನ್ನು ಡಾ. ಟಿ.ಎಂ.ಎ. ಪೈ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಟಿ. ಅಶೋಕ ಪೈ ಅವರು ಅಕ್ಟೋಬರ್ 12 ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದಾರೆ. ಆಟೋ ಎಕ್ಸ್‌ಪೋ ಎರಡೂ ದಿನ ಬೆಳಿಗ್ಗೆ10ರಿಂದ ಸಂಜೆ 7ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ.
ಪ್ರದರ್ಶನದಲ್ಲಿ ಸಿಂಡಿಕೇಟ್ ಬ್ಯಾಂಕ್ ಆಕರ್ಷಕ ಬಡ್ಡಿ ದರದಲ್ಲಿ ವಾಹನ ಸಾಲವನ್ನು ಅರ್ಹ ಗ್ರಾಹಕರಿಗೆ ಸ್ಥಳದಲ್ಲಿಯೇ ಒದಗಿಸಲಿದೆ. ವಾಹನ ಸಾಲದ ಬಡ್ಡಿ ದರ ಶೇ 9 ರಿಂದ ಆರಂಭಗೊಳ್ಳಲಿದೆ. ಮಾಸಿಕ ಕಂತು ಪ್ರತಿ ಲಕ್ಷ ರೂಪಾಯಿ ಸಾಲಕ್ಕೆ 1609 ರೂ.ಗಳಿಂದ ಆರಂಭವಾಗುತ್ತದೆ. ವಾಹನದ ಬೆಲೆಯ ಶೇ ೧೫ರಷ್ಟನ್ನು ಮಾತ್ರ ಗೃಆಹಕರು ಭರಿಸಿದರೆ ಸಾಕು. ಸಾಲಕ್ಕೆ ಯಾವುದೇ ಖಾತರಿದಾರರ ಅಗತ್ಯವೂ ಇರುವುದಿಲ್ಲ. ಅವಧಿ ಪೂರ್ವ ಸಾಲ ತೀರುವಳಿಯ ಮೇಲೆ ಯಾವುದೇ ಪೆನಾಲ್ಟಿ ಸಹ ಇರುವುದಿಲ್ಲ.
ಸಿಂಡಿಕೇಟ್ ಬ್ಯಾಂಕಿನ ಕಾರ್ಯಕಾರಿ ನಿರ್ದೇಶಕ ವೈ. ನಾಗೇಶ್ವರ ರಾವ್ ಅವರು ಮಾತನಾಡಿ ಹಬ್ಬಗಳು ಭಾರತೀಯರಿಗೆ ಸದಾ ವಿಶೇಷವಾದ ಮತ್ತು ಪವಿತ್ರವಾದ ಸಮಯ. ಪ್ರಮುಖ ಖರೀದಿಗಳನ್ನು ಭಾರತೀಯರು ಈ ಸಂದರ್ಭದಲ್ಲಿಯೇ ಮಾಡುತ್ತಾರೆ. ಈ ಸಮಯಗಳನ್ನು ವಿಶೇಷ ಮತ್ತು ಸ್ಮರಣೀಯವಾಗಿಸುವುದು ನಮ್ಮ ಉದ್ದೇಶ. ಆಟೋ ಎಕ್ಸ್‌ಪೊ ನಮ್ಮ ಇಂಥ ಪ್ರಯತ್ನಗಳಲ್ಲಿ ಒಂದು ಎಂದರು.
ಸಾಲವನ್ನು ಪಡೆಯಲು ಗ್ರಾಹಕರು ಆಟೋ ಎಕ್ಸ್‌ಪೊ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಮೂರು ವರ್ಷಗಳ ಐಟಿ ರಿಟರ್ನ್ ಅಥವಾ ತಮ್ಮ ಹಿಂದಿನ ಆರು ತಿಂಗಳ ವೇತನ ಪತ್ರದೊಂದಿಗೆ ಫಾರ್ಮ್ 16 ತಂದರೆ ಸಾಕು. ಹ್ಯುಂಡೈ, ಹೋಂಡಾ, ಟೊಯೊಟಾ, ಮಹೀಂದ್ರ, ಫೋರ್ಡ್, ಮಾರುತಿ ಸುಜುಕಿ, ಬಿಎಂಡಬ್ಲ್ಯು, ರೆನಾಲ್ಟ್, ನೆಕ್ಸಾ, ರಾಯಲ್ ಎಫೀಲ್ಡ್ ಇತ್ಯಾದಿ ಆಟೋ ಕಂಪೆನಿಗಳು ಎಕ್ಸ್‌ಪೋದಲ್ಲಿ ಪಾಲ್ಗೊಳ್ಳುತ್ತಿವೆ.