ಮೂಡಿಗೆರೆ ತಲುಪಿದ ಸಿದ್ಧಾರ್ಥ್ ಮೃತ ದೇಹ: ರಸ್ತೆಯೂದ್ದಕ್ಕೂ ಅಗಲಿದ ಉದ್ಯಮಿಗೆ ಅಶ್ರುತರ್ಪಣ
ಚಿಕ್ಕಮಗಳೂರು: ಕಾಫೀ ಡೇ ಮಾಲೀಕ ಸಿದ್ಧಾರ್ಥ ನಿಧನ ಸುದ್ಧಿಯಿಂದ ಹುಟ್ಟೂರಿನಲ್ಲಿ ನೀರಾವ ಮೌನ ಆವರಿಸಿದೆ. ಇಂದು ಮಂಗಳೂರಿನ ಉಳ್ಳಾಲ ನದಿ ತೀರದಲ್ಲಿ ಪತ್ತೆಯಾದ ಸಿದ್ಧಾರ್ಥ ಮೃತ ದೇಹ ಹುಟ್ಟೂರಿಗೆ ತಲುಪಿದ್ದು ಅವರ ಅಭಿಮಾನಿಗಳು ,ಕಾಫೀ ಎಸ್ಟೆಟ್ ಕಾರ್ಮಿಕರು, ರಾಜಕಾರಿಣಿಗಳ ದಂಡೇ ಸಮಾರೋಪದಿಯಲ್ಲಿ ಆಗಮಿಸುತ್ತಿದ್ದು ಎಲ್ಲರ ಮನಸ್ಸಿನಲ್ಲಿ ದು:ಖ ಮಡುಗಟ್ಟಿದೆ.
ಸಿದ್ಧಾರ್ಥ ಮೃತ ದೇಹ ಮೂಡಿಗೆರೆ ತಲುಪುತ್ತಿದ್ದಂತೆ ಚಿಕ್ಕಮಗಳೂರಿನ ನಗರದಲ್ಲಿ ಅವರ ಸಾವಿರಾರು ಅಭಿಮಾನಿಗಳು ರಸ್ತೆಯ ಎರಡೂ ಬದಿಗಳಲ್ಲಿ, ಕಟ್ಟಡದ ಮೇಲೆ, ಬಸ್ಸುಗಳ ಮೇಲೆ ನಿಂತು ಅಗಲಿದ ಕಾಫೀ ದೊರೆಯ ಅಂತಿಮ ದರ್ಶನ ಪಡೆದರು.
ಮೃತರ ಶೋರ್ಕಾಥ ಮೂಡಿಗೆರೆ ನಗರದಲ್ಲಿ ಅಂಗಡಿ,ಹೋಟೆಲ್ ಮುಂಗಟ್ಟುಗಳನ್ನು ಮಾಲೀಕರು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ತಮ್ಮ ಶೋಕ ವ್ಯಕ್ತಪಡಿಸಿದರು. ಮೃತ ದೇಹ ಮೂಡಿಗೆರೆ ನಗರಕ್ಕೆ ಆಗಮಿಸುತ್ತಿದ್ದಂತೆ ಕರ್ನಾಟಕ ಕಾಫೀ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ,ಕಾರ್ಯದರ್ಶೀ ಮನು ಕತ್ಲೆಕಾನ್, ರಾಜ್ಯ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎಸ್.ಜಯರಾಮ್ ಮೂಡಿಗೆರೆ ಜನತೆ ಪರವಾಗಿ ಗೌವರ ಸಲ್ಲಿಸಿದರು.ಈ ಸಂಧರ್ಭದಲ್ಲಿ ವಿವಿಧ ರಾಜಕೀಯ ಪಕ್ಷದ ನಾಯಕರು,ಕಾಫೀ ಬೆಳೆಯ ಉದ್ಯಮಿಗಳು,ಸಂಘ ಸಂಸ್ಥೆಯ ಪ್ರಮುಖರು ಅಂತಿಮ ನಮನ ಸಲ್ಲಿಸಿದರು.
ರಸ್ತೆಯ ಇಕ್ಕೆಲಗಳಲ್ಲಿ ಸಾರ್ವಜನಿಕರು ಅಗಲಿದ ಉದ್ಯಮಿಗೆ ” ಸಿದ್ಧಾರ್ಥ್ ಜೀ ಅಮರ್ ರಹೇ ” ಎಂಬ ಘೋಷಣೆ ಕೂಗಿ,ಮೃತ ದೇಹದ ವಾಹನಕ್ಕೆ ಪುರ್ಷ್ಪಾರ್ಚನೆ ಮಾಡುತ್ತಿದ್ದರು.
ಪಾರ್ಥಿವ ಶರೀರದೊಂದಿಗೆ ಮಂಗಳೂರಿನಿಂದ ಶಾಸಕ ಯು.ಟಿ.ಖಾದರ್, ಶೃಂಗೇರಿ ಶಾಸಕ ರಾಜೇಗೌಡ , ವಿಧಾನ ಪರಿಷತ್ ಸದಸ್ಯ ಪ್ರಾಣೇಶ್ ಸಿದ್ಧಾರ್ಥ್ ಅಂತಿಮ ಯಾತ್ರೆಯುದ್ದಕ್ಕೂ ಜತೆಯಲ್ಲಿದ್ದರು.