ಸಿದ್ದರಾಮಯ್ಯ ವಿಲನ್‌, ಎಚ್‌ಡಿಕೆ ಸೈಡ್‌ ಆ್ಯಕ್ಟರ್‌:ನಳೀನ್‌ ಕುಮಾರ್‌

ಚಿತ್ರದುರ್ಗ: ರಾಜ್ಯದಲ್ಲಿ 2013ರಿಂದ ಐದು ವರ್ಷ ‘ವಿಲನ್‌’ ಸರ್ಕಾರವಿತ್ತು. ‘ವಿಲನ್‌’ ಪಾತ್ರಧಾರಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ‘ಸೈಡ್‌ ಆ್ಯಕ್ಟರ್‌’ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರ ಕಾಲೆಳೆದರು.

ಬಿಜೆಪಿ ಕಾರ್ಯಕರ್ತರು ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ‘ರಾಜ್ಯದಲ್ಲೀಗ ಹೀರೊ ಸರ್ಕಾರವಿದೆ. ಬಿ.ಎಸ್‌.ಯಡಿಯೂರಪ್ಪ ನಿಜವಾದ ಹೀರೊ. ನೆರೆ ಸಂತ್ರಸ್ತರ ಕಣ್ಣೀರು ಒರೆಸಿದ ಏಕೈಕ ಮುಖ್ಯಮಂತ್ರಿ. ರಾಜ್ಯದ ಜನರು ಕೇಳಿದ್ದನ್ನು ಕೊಡುವ ಕಾಮಧೇನು’ ಎಂದು ವ್ಯಾಖ್ಯಾನಿಸಿದರು.


‘ಕಾಂಗ್ರೆಸ್‌ ನಾಯಕ ಜನಾರ್ದನ ಪೂಜಾರಿ ನನ್ನ ರಾಜಕೀಯ ಗುರು. ಭ್ರಷ್ಟಾಚಾರದ ಲವಲೇಷವನ್ನು ಅಂಟಿಸಿಕೊಳ್ಳದ ಪ್ರಾಮಾಣಿಕರು. ಅವರ ಬಗ್ಗೆ ಈಗಲೂ ಗೌರವವಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಮಹಾತ್ಮ ಗಾಂಧಿ ರಾಮ ರಾಜ್ಯದ ಪರಿಕಲ್ಪನೆ ಮುಂದಿಟ್ಟದ್ದರು. ಜ್ಯಾತ್ಯತೀತ ರಾಷ್ಟ್ರದ ಬಗ್ಗೆ ಎಲ್ಲಿಯೂ ಹೇಳಿಲ್ಲ. ಜಾತ್ಯತೀತ ರಾಷ್ಟ್ರದ ಪರಿಕಲ್ಪನೆ ಜವಾಹರಲಾಲ್‌ ನೆಹರೂ ಅವರದು’ ಎಂದರು.

Leave a Reply

Your email address will not be published. Required fields are marked *

error: Content is protected !!