ಅಪ್ಪ ರಾಜೀನಾಮೆ ಕೊಟ್ಟಿದ್ದು ಯಾಕೆ ಅಂತ ನಾನು ಹೇಳ್ಬೇಕಾ: ಸೌಮ್ಯಾರೆಡ್ಡಿ ಪ್ರಶ್ನೆ

ಬೆಂಗಳೂರು:‘ಅಪ್ಪ ಯಾಕೆ ರಾಜೀನಾಮೆ ಕೊಟ್ಟರು ನಾನು ಹೊಸದಾಗಿ ಹೇಳಬೇಕೆ? ಅದು ನಿಮಗೂ ಗೊತ್ತಿದೆ’ ಎಂದು ಶಾಸಕಿ ಸೌಮ್ಯಾರೆಡ್ಡಿ ತಮ್ಮ ತಂದೆ ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
‘ನನ್ನ ಅಪ್ಪ 45 ವರ್ಷಗಳಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಒಮ್ಮೆಯೂ ಇಂಥದ್ದು ಕೊಡಿ ಅಂತ ಕೇಳಿಲ್ಲ. ಕಾಂಗ್ರೆಸ್‌ನಲ್ಲಿ 45 ವರ್ಷಗಳಿಂದ ಪಕ್ಷ ಕಟ್ಟಿರುವವರು ಎಷ್ಟು ಜನ ಇದ್ದಾರೆ ಹೇಳಿ? ಒಂದು ಕಾಲದಲ್ಲಿ ಐದು ಜಿಲ್ಲೆಗಳಿಗೆ ಇವರೊಬ್ಬರೇ ಕಾಂಗ್ರೆಸ್ ಶಾಸಕರಾಗಿದ್ದರು. ಒಮ್ಮೆಯೂ ಸರ್ಕಾರಿ ಬಂಗ್ಲೆ ಬಳಸಲಿಲ್ಲ’ ಎಂದು ಸೌಮ್ಯಾ ನೆನಪಿಸಿಕೊಂಡರು.
ನಾನು ಒಂದು ವರ್ಷದಿಂದ ಪ್ರಾಮಾಣಿಕವಾಗಿ ಕೆಲಸ ಮಾಡ್ತಿದ್ದೀನಿ. ಒಂದು ರೂಪಾಯಿ ಲಂಚ ತೆಗೆದುಕೊಂಡಿಲ್ಲ. ಅಂಥ ಆರೋಪ ಸಾಬೀತಾದ್ರೆ ಇವತ್ತೇ ರಾಜೀನಾಮೆ ಕೊಟ್ಟು ಹೋಗ್ತೀನಿ. ಶಾಸಕಾಂಗ ಸಭೆಗೂ ನಾನು ಬಂದಿದ್ದೆ. ಕಾಂಗ್ರೆಸ್ ಪಕ್ಷದ ಸದಸ್ಯಳಾಗಿ, ಶಾಸಕಿಯಾಗಿ ನನ್ನ ಕೆಲಸಗಳನ್ನು ಮಾಡಿಕೊಂಡು ಹೋಗ್ತಿದ್ದೀನಿ. ಅಪ್ಪನನ್ನು ಮೂಲೆಗುಂಪು ಮಾಡಲು ಯತ್ನಿಸಿದ ಕೆಲ ನಾಯಕರಿಂದ ಇಂಥ ಘಟನೆಗಳು ನಡೆಯುತ್ತಿವೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!