ಶಿರ್ವ: ಚರ್ಚ್‌ನ ಪ್ರಧಾನ ಧರ್ಮಗುರುಗಳಿಗೆ ಕೊಲೆ ಬೆದರಿಕೆ
ಉಡುಪಿ: ಶಿರ್ವ ಚರ್ಚ್‌ನ ಸಹಾಯಕ ಧರ್ಮಗುರು ಫಾ. ಮಹೇಶ್ ಡಿಸೋಜಾ ಆತ್ಮಹತ್ಯೆ ಪ್ರಕರಣದಲ್ಲಿ ಚರ್ಚ್‌ನ ಪ್ರಧಾನ ಧರ್ಮಗುರುಗಳ ನಿಂದನೆ ಮತ್ತು ಅವರಿಗೆ ಕೊಲೆ ಬೆದರಿಕೆ ಒಡ್ಡಿದ 15 ಜನರ ಮೇಲೆ ಶಿರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳೆದ ತಿಂಗಳ ನ.2 ಮತ್ತು 3ನೇ ತಾರೀಕಿನಂದು ಶಿರ್ವ ಚರ್ಚ್ ಆವರಣದಲ್ಲಿ ಸೇರಿದ ಪ್ರತಿಭಟಾನಕಾರರು ಚರ್ಚ್‌ನ ಪ್ರಧಾನ ಧರ್ಮಗುರುಗಳಾದ ಫಾ. ಡೆನ್ನಿಸ್ ಡೇಸಾ ವಿರುದ್ಧ ಘೋಷಣೆ ಕೂಗಿ, ಅವರ ಕಾರನ್ನು ಅಡ್ಡಗಟ್ಟಿ, ಫಾ. ಮಹೇಶ್ ಡಿಸೋಜಾ ಸಾವಿಗೆ ನೀವೇ ಕಾರಣವೆಂದು ಹೇಳಿ ದೂರಿದ್ದರು. ಮಾತ್ರವಲ್ಲದೆ ಅವಾಚ್ಯ ಶಬ್ಬಗಳಿಂದ ನಿಂದಿಸಿ, ಜೀವ ಬೆದರಿಕೆ ಒಡ್ಡಿದ್ದಾರೆಂದು ಚರ್ಚ್‌ನ ಪ್ರಧಾನ ಧರ್ಮಗುರುಗಳಾದ ಫಾ.ಡಿನ್ನಿಸ್ ಡೇಸಾ ಶಿರ್ವ ಠಾಣೆಯಲ್ಲಿ ಸುನಿಲ್ ಕಾಬ್ರಾಲ್, 2) ಜಾನ್ಸನ್ ಡಾಲ್ಪ್ರೆಡ್ ಕ್ಯಾಸ್ತಲಿನೋ @ ಡಾಲ್ಪೀ, 3) ಕೋನಾರ್ಡ್ ಕ್ತಾಸ್ತಲಿನೋ, 4) ಪೀಟರ್ ಕೋರ್ಡಾ, 5) ರಾಯನ್ ಮೆನೆಜಸ್ ತಂದೆ: ಚಾರ್ಲ್ಸ್ ಮೆನೆಜಸ್ , 6) ಮರಾಯನ್ ಮೆನೆಜಸ್ ಕುಡ್ತಮಜಲ್, 7) ಅರ್ಥರ್ ಮೆನೇಜಸ್ , 8)ಅಂತೋನಿ ಮೆನೇಜಸ್ ಪಿಲಾರು , 9) ವಿಲ್ಪ್ರೆಡ್ ಮಿನೇಜಸ್, 10) ಕ್ಲಾರಾ ಕ್ವಾಡ್ರಸ್, 11) ಸುನಿತಾ ಮೆನೇಜಸ್, 12) ನಿಕಿಲ್ ಮಥಾಯಿಸ್, 13) ಪ್ರತೀಕ್ಷಾ ಡಿಸೋಜಾ, 14)ಲೀನಾ ಡಿಸೋಜಾ, 15) ಡೆನೀಸಾ ಮಥಾಯಸ್ ಮೇಲೆ ಶಿರ್ವ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ತಂಡವು ಮುಂದೆಯೂ ಇದೆ ರೀತಿ ನಿಂದನೆ, ಜೀವ ಬೆದರಿಕೆ ಒಡ್ಡುವ ಸಾಧ್ಯತೆವಿರುವುದರಿಂದ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ದೂರಿನಲ್ಲಿ ತಿಳಿಸಲಾಗಿದೆಂದು ತಿಳಿದು ಬಂದಿದೆ.