ಶಿರ್ವ: ಫಾ.ಮಹೇಶ್ ಆತ್ಮಹತ್ಯೆ ಚುರುಕುಗೊಂಡ ತನಿಖೆ
ಉಡುಪಿ: ಶಿರ್ವ ಸಾವೊದ್ ಚರ್ಚ್‌ನ ಸಹಾಯಕ ಧರ್ಮಗುರುಗಳ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ ಶಿರ್ವ ಠಾಣಾಧಿಕಾರಿ ಅಬ್ದುಲ್ ಖಾದರ್, ಫಾ.ಮಹೇಶ್ ಡಿಸೋಜಾ ಉಪಯೋಗಿಸುತ್ತಿದ್ದ 2 ಮೊಬೈಲ್ ವಶಕ್ಕೆ ಪಡೆದು ಅದನ್ನು ಬೆಂಗಳೂರಿನ (ಎಫ್‌ಎಸ್‌ಎಲ್) ಲ್ಯಾಬ್‌ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ಕಳುಹಿಸಿದ್ದಾಗಿ ಮಾಹಿತಿ ನೀಡಿದ್ದಾರೆ.
ಶಾಲೆ ಮತ್ತು ಚರ್ಚ್‌ಗಳಲ್ಲಿ ಅಳವಡಿಸಲಾದ 85 ಸಿಸಿ ಕ್ಯಾಮರ ಪರಿಶೀಲನೆ.
ಕಳೆದ ಬುಧವಾರದಿಂದ ರಾತ್ರಿ ಹೊತ್ತು ನಿರಂತರ ಮಳೆ ಹಾಗೂ ಗುಡುಗು ಸಿಡಿಲು ಬಂದ ಕಾರಣ ಇಲ್ಲಿನ ಸಿಬ್ಬಂದಿ ಸಿಸಿಟಿವಿ ಸಂಪರ್ಕ ಕಡಿತಗೊಳಿಸಿ ಹೋಗುತ್ತಿದ್ದ ಕಾರಣ ಅ.11 ರಂದು ಫಾ. ಮಹೇಶ್ ಅವರು ಆತ್ಮಹತ್ಯೆ ಮಾಡಿಕೊಂಡ ದೃಶ್ಯವು ಯಾವುದೇ ದಾಖಲಾಗಿಲ್ಲವೆಂದು ತನಿಖಾಧಿಕಾರಿ ಶಿರ್ವ ಎಸ್‌ಐ ಖಾದರ್ ಸ್ಪಷ್ಟಪಡಿಸಿದರು.
ಅ.11 ರಂದು ಧರ್ಮಗುರುಗಳು ಆತ್ಮಹತ್ಯೆ ಮಾಡಿಕೊಂಡ ದಿನ ಶಾಲಾ ಆವರಣ, ಚರ್ಚ್‌ಗಳಲ್ಲಿ ಅಳವಡಿಸಿದ ಸಿಸಿ ಕ್ಯಾಮರ ನೋಡಿ ಫಾ. ಮಹೇಶ ಡಿಸೋಜಾ ಆತ್ಮಹತ್ಯೆ ಮಾಡಿಕೊಂಡ ದೃಶ್ಯ ಸಿಸಿಟಿವಿ ಯಲ್ಲಿ ದಾಖಲಾಗಿದೆಂದು ಹೇಳಿದ್ದರು. ಆದರೆ ಇದೀಗ ಅದನ್ನು ಪರೀಶಿಲಿಸಿದಾಗ ಇಲ್ಲಿನ ಸಿಬ್ಬಂದಿ ವಿಶಾಲ್ ಸಂಜೆ 6.30 ಕ್ಕೆ ಸಿಸಿ ಕ್ಯಾಮರದ ಸ್ವಿಚ್ ಆಫ್ ಮಾಡುವ ದೃಶ್ಯ ಕೂಡ ಅದರಲ್ಲಿ ದಾಖಾಲಾಗಿದೆಂದು ತನಿಖೆ ವೇಳೆ ತಿಳಿದು ಬಂದಿದೆಂದು “ಉಡುಪಿ ಟೈಮ್ಸ್” ಗೆ ತಿಳಿಸಿದರು. ಅದೇ ರೀತಿ ಫಾ.ಮಹೇಶ್ ಡಿಸೋಜಾ ಅವರ ಕ್ಯಾಬಿನ್‌ನಲ್ಲಿದ್ದ ವೆಬ್ ಕ್ಯಾಮರ ಕೂಡ ಆಗಸ್ಟ್ 11 ನಂತರ ಯಾವುದೇ ಚಾಲನೆ ಇಲ್ಲದ ಸ್ಥಿತಿಯಲ್ಲಿದೆಂದು ಹೇಳಿದರು.
ರವಿವಾರ ಶಾಲಾ ಹಾಗೂ ಚರ್ಚ್ ಸಿಬ್ಬಂದಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಮಂಗಳವಾರ ಮೃತ ಧರ್ಮಗುರುಗಳ ಅಂತಿಮ ಕ್ರಿಯೆಯ ವಿಧಿ ನಂತರ ಮತ್ತೆ ವಿಚಾರಣೆಗೊಳಪಡಿಸಲಾಗುದೆಂದು ಮಾಹಿತಿ ನೀಡಿದರು. ಇಂದು ಬೆಳಿಗ್ಗೆ ವಿದೇಶದಿಂದ ಆಗಮಿಸಿದ ಪ್ರಧಾನ ಧರ್ಮಗುರುಗಳು ಫಾ.ಡೆನ್ನಿಸ್ ಡೇಸಾ, ಫಾ. ಮಹೇಶ್ ಡಿಸೋಜಾ ಅವರ ಹುಟ್ಟೂರಾದ ಮೂಡುಬೆಳ್ಳೆ ಮನೆಗೆ ಭೇಟಿ ನೀಡಿ ಹೆತ್ತವರಿಗೆ ಸಾಂತ್ವನ ಹೇಳಿದ್ದಾರೆಂದು ತಿಳಿದು ಬಂದಿದೆ.
Sadden by the death of Fr Mahesh. May his soul rest in peace.
This website is only for misguiding people