ಶಿರ್ವ: ಫಾ.ಮಹೇಶ್ ಅತೀ ಹೆಚ್ಚು ಮೆಸೇಜ್,ಕರೆ ಮಾಡಿರುವುದು ಪ್ರಿಯಾಳಿಗೆ

ಉಡುಪಿ: ಶಿರ್ವ ಚಚ್ ನ ಸಹಾಯಕ ಧರ್ಮಗುರು ಫಾ. ಮಹೇಶ್ ಡಿಸೋಜಾ ಆತ್ಮಹತ್ಯೆ ಪ್ರಕರಣ ವಿಚಿತ್ರ ತಿರುವು ಪಡೆದುಕೊಳ್ಳುತ್ತಿದ್ದು, ಫಾ. ಮಹೇಶ್ ಅವರ ಮೊಬೈಲ್‌ನಿಂದ ಡೇವಿಡ್ ಡಿಸೋಜಾ ಪತ್ನಿ ಪ್ರಿಯಾ ಡಿಸೋಜಾ ಮೊಬೈಲ್‌ಗೆ ಅತೀ ಹೆಚ್ಚು ಕರೆ ಹಾಗೂ ವಾಟ್ಸ್‌ಆಪ್ ಸಂದೇಶ ಹೋಗಿದ್ದು ತನಿಖೆಯ ವೇಳೆ ತಿಳಿದು ಬಂದಿದೆ.


ಕಳೆದ ವರ್ಷ ಅಕ್ಟೋಬರ್ 11 ರ ರಾತ್ರಿ ಡೇವಿಡ್ ತನ್ನ ಪತ್ನಿಯ ಫೋನ್ ನೋಡಿದಾಗ ಫಾ. ಮಹೇಶ್‌ರೊಂದಿಗೆ ತುಂಬಾ ಅನ್ಯೋನ್ಯದಿಂದ ಇರುವುದನ್ನು ತಿಳಿದ ಡೇವಿಡ್ ತಕ್ಷಣ ಫಾ. ಮಹೇಶ್‌ಗೆ ಫೋನ್ ಮಾಡಿ ಬೆದರಿಸಿದ್ದ, ಮಾತ್ರವಲ್ಲದೆ ಈಗಾಲೇ ಬಂದು ನಿನ್ನನ್ನು ವಿಚಾರಿಸಿಕೊಳ್ಳುತೇನೆ, ಇಲ್ಲ ನಾನು ಬರುವ ಮೊದಲು ನೀನಾಗಿ ಆತ್ಮಹತ್ಯೆ ಮಾಡಿಕೊಂಡರೆ ಒಳಿತು ಎಂದು ಬೆದರಿಕೆ ಒಡ್ಡಿದ್ದ.

ಡೇವಿಡ್ ಫೋನ್ ಕಟ್ ಮಾಡಿದಾಕ್ಷಣ ಫಾ. ಮಹೇಶ್ ನೈಲಾನ್ ಹಗ್ಗವನ್ನು ಹಿಡಿದು ಅವರ ಪ್ರಿನ್ಸಿಪಾಲ್ ಕೊಠಡಿಗೆ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆಂದು ಪ್ರಕರಣದ ತನಿಖಾಧಿಕಾರಿ ಕಾಪು ವೃತ್ತ ನೀರಿಕ್ಷಕ ಮಹೇಶ್ ಪ್ರಸಾದ್ “ಉಡುಪಿ ಟೈಮ್ಸ್”ಗೆ ತಿಳಿಸಿದರು.


ಡೇವಿಡ್ ಫೋನ್ ನಲ್ಲಿ ಬೆದರಿಸುವ ಸಂದರ್ಭ ನಾನು ಈಗಾಗಲೇ ಊರಿನವರಿಗೆ ನಿನ್ನ ವಿಷಯ ತಿಳಿಸಲು ಚರ್ಚ್‌ನ ಘಂಟೆ ಭಾರಿಸುವೆ , ಫಾ. ಮಹೇಶ್ ಅವರ ತಾಯಿಗೂ ಡೇವಿಡ್ ನಿಂದಿಸಿದ್ದ. ಇದನ್ನೆಲ್ಲವನ್ನು ಕೇಳಿದ ಫಾ. ಮಹೇಶ್ ತಾನು ಆತ್ಮಹತ್ಯೆ ಮಾಡಿಕೊಂಡರೇ ಇದಕ್ಕೇ ಪರಿಹಾರವೆಂದು ತಿಳಿದು ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರೆಂದು ತನಿಖಾಧಿಕಾರಿ ತಿಳಿಸಿದರು.


ಡೇವಿಡ್ ತನ್ನ ಮಗನ ಜೊತೆ ಚರ್ಚ್‌ಗೆ ಬರುವ ಮೊದಲೇ ಫಾ.ಮಹೇಶ್ ಡಿಸೋಜಾರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಈ ಸಂದರ್ಭ ಚರ್ಚ್‌ನ ಇನ್ನೊರ್ವ ಸಹಾಯಕ ಧರ್ಮಗುರು ಅಶ್ವಿನ್ ಲೊರೇನ್ಸ್ ಮತ್ತು ಡೇವಿಡ್ ನಡುವೆ ಗಲಾಟೆ ನಡೆಯಿತು . ಆಗ ಪಾಲನಾ ಮಂಡಳಿಯ ಉಪಾಧ್ಯಕ್ಷ ವಿಲ್ಸ್‌ನ್ ಬಂದು ಇಬ್ಬರನ್ನು ಸಮಾಧಾನ ಪಡಿಸಿ ಪೊಲೀಸರಿಗೆ ಮತ್ತು ಬಿಷಪ್‌ರಿಗೆ ಮಾಹಿತಿ ನೀಡಿದ್ದಾರೆ.


ಫಾ. ಮಹೇಶ ಡಿಸೋಜಾ ಮತ್ತು ಡೇವಿಡ್ ಪತ್ನಿ ಜೊತೆ ನಿರಂತರ ಫೋನ್ ಮತ್ತು ವಾಟ್ಸ್‌ಆಪ್ ಮೇಸೆಜ್‌ನಲ್ಲಿ ಸಂಪರ್ಕದಲ್ಲಿದ್ದು, ಪಾಲನಾ ಮಂಡಳಿಯ ಉಪಾಧ್ಯಕ್ಷ ವಿಲ್ಸ್‌ನ್ ನಂತರ ಅತೀಯಾದ ಫೋನ್ ಕಾಲ್ ಮಾಡಿರುವುದು ಪ್ರಿಯಾ ಡಿಸೋಜಾಳಿಗೆ. ಪ್ರಿಯಾಳು ತನ್ನ ಅನೇಕ ಫೋಟೊಗಳನ್ನು ಫಾ. ಮಹೇಶ್ ಡಿಸೋಜಾ ಮೊಬೈಲ್‌ಗೆ ಕಳುಹಿಸಿದ್ದು ಅದೆಲ್ಲವೂ ಫಾ. ಮಹೇಶ್ ಅವರ ಲಾಪ್‌ಟಾಪ್‌ನಲ್ಲಿ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.


ಫಾ. ಮಹೇಶ ಆತ್ಮಹತ್ಯೆ ನಂತರ ಇವರ ಮೊಬೈಲ್ ಮತ್ತು ಲಾಪ್‌ಟಾಪ್ ವಶಪಡಿಸಿಕೊಂಡ ಪೊಲೀಸರು ಅದನ್ನು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಲಯಕ್ಕೆ ಕಳುಹಿಸಿದ್ದರು. ಇದರಲ್ಲಿದ್ದ ಕಾಲ್ ಡಿಟೇಲ್ಸ್, ಲಾಪ್‌ಟಾಪ್‌ನಲ್ಲಿದ್ದ ಚಾಟಿಂಗ್ ಆಧಾರದಲ್ಲಿ ಮಾಹಿತಿ ಕಲೆಹಾಕಿ ಆರೋಪಿಯೊರ್ವನ ಬಂಧನವಾಗಿದೆಂದು ತನಿಖಾಧಿಕಾರಿ ತಿಳಿಸಿದ್ದಾರೆ. ಪಂಚಾಯತ್ ಅಧ್ಯಕ್ಷ ಡೇವಿಡ್ ಡಿಸೋಜಾ ದುಷ್ಪ್ರೇರಣೆಯಿಂದಲೇ ಫಾ. ಮಹೇಶ್ ಡಿಸೋಜಾ ಆತ್ಮಹತ್ಯೆಗೆ ಮಾಡಿದ್ದು, ಹಾಗೂ ತನ್ನ ಪತ್ನಿ ಮೊಬೈಲ್ ನಲ್ಲಿ ಅವರಿಬ್ಬರು ಮಾಡಿರುವ ಮೆಸೇಜ್ ಡಿಲೀಟ್ ಮಾಡಿ ಸಾಕ್ಷಿ ನಾಶ ಮಾಡಿರುವ ಆರೋಪದಡಿ ಬಂಧಿಸಲಾಗಿದೆಂದು ತನಿಖಾಧಿಕಾರಿ ಮಹೇಶ ಪ್ರಸಾದ್ ತಿಳಿಸಿದ್ದಾರೆ.

1 thought on “ಶಿರ್ವ: ಫಾ.ಮಹೇಶ್ ಅತೀ ಹೆಚ್ಚು ಮೆಸೇಜ್,ಕರೆ ಮಾಡಿರುವುದು ಪ್ರಿಯಾಳಿಗೆ

  1. We already know its a cold blooded murder and to hide offenses and hide culprits names whoever involved…just covering with fake stories we assume.

Leave a Reply

Your email address will not be published. Required fields are marked *

error: Content is protected !!