ಕೊನೆಗೂ ಸಾರ್ವಜನಿಕರ ಒತ್ತಡಕ್ಕೆ ಮಣಿದ ಉಡುಪಿ ಜಿಲ್ಲಾಧಿಕಾರಿ: ಲಾಕ್ ಡೌನ್ ಸಡಿಲಿಕೆ
ಉಡುಪಿ: ಸಾರ್ವಜನಿಕರಿಗೆ ಬೆಳಿಗ್ಗೆ7 ರಿಂದ ಸಂಜೆ 7 ಗಂಟೆಯವರಗೆ ಅವಕಾಶ ಕಲ್ಪಿಸಿಕೊಡಲಾಗಿದೆ.
ಸೋಮವಾರ ವಸ್ತುಸ್ಥಿತಿ ಪರಿಶೀಲಿಸಲಾಗಿ ಈ ಸಮಯದಲ್ಲಿ ಎಲ್ಲಾ ಅಂಗಡಿಗಳಲ್ಲಿ , ಜನ ದಟ್ಟಣೆ ಉಂಟಾಗುತ್ತಿದ್ದುದರಿಂದ ಸಾಮಾಜಿಕ ಅಂತರ ಕಾಪಾಡಲು ತೊಂದರೆಯಾಗುವುದನ್ನು ಗಮನಿಸಿ, ಸರ್ಕಾರದ ಆದೇಶದಂತೆ ಅವಶ್ಯಕ ವಸ್ತುಗಳನ್ನು ಖರೀದಿಸಲು ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆಯವರಗೆ ಮತ್ತು ಮದ್ಯ ಮಾರಾಟಕ್ಕೆ ಸರಕಾರದ ಆದೇಶದಂತ ಬೆಳಿಗ್ಗೆ9 ರಿಂದ ಸಂಜೆ7 ಗಂಟೆಯ ವರಗೆ ಅವಕಾಶ ಕಲ್ಪಿಸಲಾಗಿದೆ
ಸಂಜೆ 7 ರಿಂದ ಬೆಳಿಗ್ಗೆ 7 ರವರೆಗೆ ಸಾರ್ವಜನಿಕರ ಸಂಚಾರಕ್ಕೆ ಅವಕಾಶವಿರುವುದಿಲ್ಲ, ಎಲ್ಲಾ ಸಿಬ್ಬಂದಿ/ಗ್ರಾಹಕರು ಮಾಸ್ಕ ಅಥವಾ ಮುಖ ಕವಚ ಕಡ್ಡಾಯವಾಗಿ ಹಾಕಿರಬೇಕು, ಸಾಮಾಜಿಕ ಅಂತರ ಕಾಪಾಡುವ ಕೃಷಿಯಿಂದ ಎಲ್ಲಾ ಅಂಡಿಡಿಗಳ ಮುಂದ 6 ಅಡಿಗಳ ಅಂತರದಲ್ಲಿ ಮಾರ್ಕ್ ಹಾಕಿರಬೇಕು, ಸರಕಾರದ ಆದೇಶದಲ್ಲಿನ ಎಲ್ಲಾ ನಿಯಮಗಳನ್ನು ಚಾಚು ತಪ್ಪದೆ ಪಾಲಿಸತಕ್ಕದ್ದು ,ತಪ್ಪಿದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ
ಬೇಡ ಇತ್ತು