ಆಟೋರಿಕ್ಷಾ ಮಗುಚಿ ಬಿದ್ದು 8 ಮಕ್ಕಳಿಗೆ ಗಾಯ

ಉಡುಪಿ: ಮಣಿಪಾಲ ಶಾಂತಿನಗರದಿಂದ ಕಡಿಯಾಳಿ ಕಡೆಗೆ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದ ಆಟೋರಿಕ್ಷಾ ಮಗುಚಿ ಬಿದ್ದು, ರಿಕ್ಷಾದಲ್ಲಿದ್ದ 8 ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿರುವ ಘಟನೆ ಇಂದು ನಡೆದಿದೆ.

ಗಾಯಗೊಂಡಿರುವ 8 ಮಕ್ಕಳನ್ನು ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ಗಂಭೀರ ಗಾಯವಿಲ್ಲದೆ ಪರಾಗಿದ್ದರೆಂದ ಎಂದು ಪೊಲೀಸರು ತಿಳಿಸಿದ್ದಾರೆ.

ಮಕ್ಕಳನ್ನು ಕರೆದುಕೊಂಡು ಕಡಿಯಾಳಿಗೆ ಕಡೆಗೆ ಬರುತ್ತಿದ್ದ ವೇಳೆ ಇಂದ್ರಾಳಿ ಸಮೀಪ ಬೈಕ್ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದ. ಬೈಕ್‍ನ ಹಿಂದಿನಿಂದ ಬರುತ್ತಿದ್ದ ಆಟೋರಿಕ್ಷಾ ಚಾಲಕ ಅವಘಡ ತಪ್ಪಿಸಲು ಬ್ರೇಕ್ ಹಾಕಿದ್ದಾನೆ. ಇದರಿಂದಾಗಿ  ಆಟೋ ರಿಕ್ಷಾ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ ಎನ್ನಲಾಗಿದೆ.

ಸ್ಥಳಕ್ಕೆ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸರು ಆಗಮಿಸಿದ್ದು, ಘಟನೆಯ ಮಾಹಿತಿ ಪಡೆದುಕೊಂಡಿದ್ದಾರೆ.

1 thought on “ಆಟೋರಿಕ್ಷಾ ಮಗುಚಿ ಬಿದ್ದು 8 ಮಕ್ಕಳಿಗೆ ಗಾಯ

Leave a Reply

Your email address will not be published. Required fields are marked *

error: Content is protected !!