ಶರದ್ ಪವಾರ್ ನನ್ನ ನಾಯಕ ಉಲ್ಟಾ ಹೊಡೆದ ಅಜಿತ್ ಪವಾರ್
ಮುಂಬೈ: ಎನ್ಸಿಪಿ ವರಿಷ್ಠ ಶರದ್ ಪವಾರ್ ತಮಗೆ ಎಂದೂ ನಾಯಕರಾಗಿದ್ದು, ಎನ್ಸಿಪಿಯಲ್ಲೇ ಇರುತ್ತೇನೆ ಎಂದು ಎನ್ಸಿಪಿ ಬಂಡಾಯ ನಾಯಕ ಹಾಗೂ ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರು ಅಜಿತ್ ಪವಾರ್ ಹೇಳಿದ್ದಾರೆ.
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿಜೆಪಿಯ ದೇವೇಂದ್ರ ಫಡ್ನವಿಸ್ ಅವರೊಂದಿಗೆ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಅಜಿತ್ ಪವಾರ್ ಸರಣಿ ಟ್ವೀಟ್ ಮಾಡಿ, ಶರದ್ ಪವಾರ್ ಎಂದಿಗೂ ತಮ್ಮ ನಾಯಕರಾಗಿರುತ್ತಾರೆ. ತಾವು ಎನ್ಸಿಪಿಯಲ್ಲೇ ಇರುವುದಾಗಿ ಹೇಳಿದ್ದಾರೆ.
ಬಿಜೆಪಿಗೆ ಬೆಂಬಲ ನೀಡಿರುವ ಕುರಿತು ಸಮರ್ಥಿಸಿಕೊಂಡಿರುವ ಅವರು, ಮಹಾರಾಷ್ಟ್ರದಲ್ಲಿ ಸ್ಥಿರ ಸರ್ಕಾರ ಸ್ಥಾಪನೆ ಅಗತ್ಯವಿರುವುದರಿಂದ ಬಿಜೆಪಿಗೆ ಬೆಂಬಲ ನೀಡಿದ್ದೇನೆ. ಮುಂದಿನ ಐದು ವರ್ಷ ಮೈತ್ರಿ ಸರ್ಕಾರ ಪ್ರಾಮಾಣಿಕವಾಗಿ ಬಡವರ, ರೈತರ, ಹಿಂದುಳಿದವರ ಮತ್ತು ಇಡೀ ಮಹಾರಾಷ್ಟ್ರ ಅಭಿವೃದ್ಧಿ ಪರವಾಗಿ ಕೆಲಸ ಮಾಡಲಿದೆ ಎಂದು ಅಜಿತ್ ಪವಾರ್ ಹೇಳಿದ್ದಾರೆ.